ಮಂಗಳವಾರ, ಜೂನ್ 15, 2021
23 °C

ಖಾಸಗಿ ವಾಹಿನಿ ದೂರವಿಡಲು ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಧಾನಸಭೆಯಲ್ಲಿ ಕುಳಿತು ಮಾಜಿ ಸಚಿವರಿಬ್ಬರು `ಬ್ಲೂಫಿಲಂ~ ವೀಕ್ಷಿಸಿದ ಪ್ರಕರಣದಿಂದ ಮುಜುಗರಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಖಾಸಗಿ ವಾಹಿನಿಗಳನ್ನು ಅಧಿವೇಶನದ ಕಲಾಪಗಳಿಂದ ಹೊರಗಿಡುವ ಕುರಿತು ಗಂಭೀರವಾಗಿ ಪರಿಶೀಲಿಸುತ್ತಿದೆ.`ರಾಜ್ಯ ಸರ್ಕಾರ ಪತ್ರಿಕಾ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪತ್ರಿಕೆಗಳು ಅಥವಾ ಪತ್ರಕರ್ತರು ಕಲಾಪ ವರದಿ ಮಾಡುವುದನ್ನು ನಿರ್ಬಂಧಿಸುವುದಿಲ್ಲ. ಆದರೆ, ಖಾಸಗಿ ವಾಹಿನಿಗಳು ಕಲಾಪ ಸೆರೆ ಹಿಡಿಯುವುದಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ತಿನ ಸಭಾಪತಿ ನೀಡುವ ಸಲಹೆ ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.ಸಂಸತ್ತಿನಲ್ಲಿ ಅಳವಡಿಸಿರುವ ವಿಧಾನ ಕುರಿತು ಅಧ್ಯಯನ ನಡೆಸಲು ಸ್ಪೀಕರ್ ಹಾಗೂ ಸಭಾಪತಿ ದೆಹಲಿಗೆ ಭೇಟಿ ನೀಡಲಿದ್ದಾರೆ. ಲೋಕಸಭೆ ಸ್ಪೀಕರ್, ಸಭಾಪತಿ ಮತ್ತಿತರರ ಜತೆ ಚರ್ಚೆ ನಡೆಸಿದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಸದಾನಂದಗೌಡರು ಗುರುವಾರ ಪತ್ರಕರ್ತರಿಗೆ ಸ್ಪಷ್ಟಪಡಿಸಿದರು.ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಮಾಡುವ ದೃಶ್ಯವನ್ನು ಸೆರೆಹಿಡಿದ ಛಾಯಾಗ್ರಾಹಕರಿಗೆ ಕಿರುಕುಳ ಕೊಡಲಾಗುತ್ತಿದೆ ಎಂಬ ಪ್ರಶ್ನೆಗೆ, `ನಾವು ಯಾವುದೇ ನಿರ್ದಿಷ್ಟ ಮಾಧ್ಯಮ ಅಥವಾ ಪತ್ರಕರ್ತರನ್ನು ಗುರಿಯಾಗಿ ಇಟ್ಟುಕೊಂಡಿಲ್ಲ. ಈ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸದನ ಸಮಿತಿ ಈ ದೃಶ್ಯಗಳನ್ನು ಸೆರೆಹಿಡಿದ ವೀಡಿಯೊ ಛಾಯಾಗ್ರಾಹಕರನ್ನು ವಿಚಾರಣೆಗೆ ನಿಶ್ಚಿತವಾಗಿ ಕರೆಯಲಿದೆ. ಪ್ರತಿಯೊಬ್ಬರ ಖಾಸಗಿ ಹಕ್ಕು ಬದುಕನ್ನು ಗೌರವಿಸಬೇಕಾಗುತ್ತದೆ~ ಎಂದರು ಮುಖ್ಯಮಂತ್ರಿ.ಆದರೆ, ಯಾರ ಖಾಸಗಿ ಬದುಕು ಪತ್ರಕರ್ತರದ್ದೋ ಅಥವಾ ಕಳಂಕಿತ ಮಾಜಿ ಸಚಿವರದ್ದೋ ಎಂಬುದನ್ನು ಬಿಡಿಸಿ ಹೇಳಲಿಲ್ಲ. ಹೂಡಿಕೆದಾರರ ಸಭೆಯ ಬೆಳವಣಿಗೆಗಳನ್ನು ಕುರಿತು ವಿವರಿಸಲು ಮುಖ್ಯಮಂತ್ರಿ ಮಧ್ಯಾಹ್ನ 12 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದರು.ಆದರೆ, ಮಾಜಿ ಸಚಿವರ ಬ್ಲೂಫಿಲಂ ವೀಕ್ಷಣೆ ಹಗರಣ ಮತ್ತು ರಾಜ್ಯ ಬಿಜೆಪಿಯಲ್ಲಿನ ಕಿತ್ತಾಟ ಕುರಿತು ಮುಜುಗರದ ಪ್ರಶ್ನೆಗಳು ಎದುರಾಗಬಹುದೆಂದು ಕಡೇ ಗಳಿಗೆಯಲ್ಲಿ ರದ್ದು ಮಾಡಿ ಬೆಂಗಳೂರಿಗೆ ತೆರಳಿದರು.ಬ್ಲೂಫಿಲಂ ವಿವಾದ: 8ಕ್ಕೆ ಸಮಿತಿ ವಿಚಾರಣೆ

`ಬ್ಲೂ ಫಿಲಂ~ ವಿವಾದ ಕುರಿತು ತನಿಖೆ ಮಾಡಲು ನೇಮಿಸಿರುವ ವಿಚಾರಣಾ ಸಮಿತಿ ಗುರುವಾರವೂ ಸಭೆ ಸೇರಿ, ಕಳಂಕಿತ ಶಾಸಕರು ಕೊಟ್ಟಿರುವ ಉತ್ತರಗಳನ್ನು ಪರಿಶೀಲಿಸಿತು. ಇದೇ 8ರಂದು ಸಮಿತಿ ಮುಂದೆ ಹಾಜರಾಗಿ ಅಭಿಪ್ರಾಯ ತಿಳಿಸುವಂತೆ ಅವರಿಗೆ ನೋಟಿಸ್ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.ಶ್ರೀಶೈಲಪ್ಪ ಬಿದರೂರ ನೇತೃತ್ವದ ಸಮಿತಿಯ ಮುಂದೆ ಟಿ.ವಿ.9 ಸುದ್ದಿ ವಾಹಿನಿಯ ಪ್ರತಿನಿಧಿ ಲಕ್ಷ್ಮಣ ಹೂಗಾರ ಹಾಜರಾಗಿ ಪ್ರಶ್ನೆಗಳಿಗೆ ಉತ್ತರ ನೀಡಿದರು.ನಂತರ ಸುದ್ದಿಗಾರರ ಜತೆಮಾತನಾಡಿದ ಶ್ರೀಶೈಲಪ್ಪ  `ಇದೇ 13ರೊಳಗೆ ವರದಿ ನೀಡಲು ಪ್ರಯತ್ನಿಸಲಾಗುವುದು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಇದೇ 19 ಅಥವಾ 20ರೊಳಗೆ ವರದಿ ನೀಡಲಾಗುವುದು~ ಎಂದರು. ಪ್ರತಿಪಕ್ಷಗಳ 3ಜನ ಸದಸ್ಯರು ವಿಚಾರಣಾ ಸಮಿತಿಗೆ ಬಹಿಷ್ಕಾರ ಹಾಕಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.