ವಿಜಾಪುರ: ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ ಖೇಣಿ ಅವರ 62ನೇ ಜನ್ಮದಿನವನ್ನು ನಗರದಲ್ಲಿ ಅಕ್ಟೋಬರ್ 9 ರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಖಿಲ ಕರ್ನಾಟಕ ಅಶೋಕ ಖೇಣಿ ಯೂಥ್ ಮೂವ್ಮೆಂಟ್ನ ರಾಜ್ಯ ಘಟಕದ ಧ್ಯಕ್ಷ ನಾಗೇಂಧ್ರ ಪ್ರಸಾದ ಅವರು ಹೇಳಿದ್ದಾರೆ.

ವಿಜಾಪುರ ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಅವರು, ಈ ಕಾರ್ಯಕ್ರಮದ ಅಂಗವಾಗಿ ಅ. 1ರಿಂದ 8ರ ವರೆಗೆ ಯೋಗ ಶಿಬಿರ, ಅ. 9 ರಂದು ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ನಗರದ ಬಿ.ಎಲ್.ಡಿ.ಇ. ನ್ಯೂ. ಕ್ಯಾಂಪಸ್ ಆವರಣದಲ್ಲಿ ಸಕಲ ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಈ ಹಿಂದೆ ಖೇಣಿ ಅವರ ಜನ್ಮದಿನವನ್ನು ಮೈಸೂರು, ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲಿ ಆಚರಿಸಲಾಗಿದ್ದು, ಆ ನೆನಪಿಗೋಸ್ಕರ ಬಡ ಮಕ್ಕಳಿಗೆ ವಸತಿ ನಿಲಯದಂತಹ ಕುರುಹುಗಳನ್ನು ಮಾಡಿದ್ದೇವೆ. ಈ ಜಿಲ್ಲೆಯಲ್ಲೂ ಕೂಡ ಖೇಣಿ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಬಡ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಐ.ಎ.ಎಸ್. ಮತ್ತು ಐ.ಪಿ.ಎಸ್. ಕೊರ್ಸ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.

ಅದರಲ್ಲಿ ಮೊದಲು ವಿಜಾಪುರ ಜಿಲ್ಲೆಯ 20 ಅರ್ಹ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ಅಖಿಲ ಕರ್ನಾಟಕ ಯೂಥ್ ಮೂವ್ಮೆಂಟ್ನ ಗೌರವಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ ಮಾತನಾಡಿ, ಈ ಕಾರ್ಯಕ್ರಮದಲ್ಲಿ ನಾಡಿನ ಹಲವು ಮಠಾಧೀಶರು ಭಾಗವಹಿಸಲಿದ್ದಾರೆ.

ವಿವಾಹವಾಗುವ ವಧು-ವರ ಸಂಬಂದಿಕರಿಗೆ ಉಚಿತ ವಾಹನ, ಊಟದ ವ್ಯವಸ್ಥೆ, ವಧು-ವರರಿಗೆ ಬಟ್ಟೆ, ತಾಳಿ ನೀಡಲಾಗುವುದು.ಈ ಕಾರ್ಯಕ್ರಮದಲ್ಲಿ ಸುಮಾರು 6 ಲಕ್ಷ ಜನಸಂಖ್ಯೆ ಸೇರಲಿದೆ.

ಜಿಲ್ಲೆಯಲ್ಲಿ ಈ ನೆನಪಿಗಾಗಿ ಸರ್ವಧರ್ಮದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಏನಾದರೊಂದು ಕಾರ್ಯ ಮಾಡೋಣ ಅದಕ್ಕೆ ಜಿಲ್ಲೆಯ ಗಣ್ಯರು ಸಲಹೆ, ಸೂಚನೆಗಳನ್ನು ನೀಡಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಈ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಸದಸ್ಯ ಶ್ರೀಶೈಲಗೌಡ ಬಿರಾದಾರ, ಸೋಮನಗೌಡ ಪಾಟೀಲ, ಸುನೀಲ ಬೈರಾವಡಗಿ, ಶಂಕರಗೌಡ ಪಾಟೀಲ, ಎಂ. ಆರ್. ಪಾಟೀಲ, ರವಿ ಖಾನಾಪೂರ ಹಾಗೂ ಗುರುಶಾಂತ ನಿಡೋಣಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.