ನಾಗಮಂಗಲ: ತಾಲ್ಲೂಕಿನ ಪ್ರಸಿದ್ಧ ಆದಿಚುಂಚನಗಿರಿ ಕ್ಷೇತ್ರದಲ್ಲಿ ಗಂಗಾಧರೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ಶನಿವಾರ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ವಿಜೃಂಭಣೆಯಿಂದ ನಡೆಯಿತು.

ನಾಡಿನ ಉದ್ದಗಲದಿಂದ ಬಂದ ಆಸ್ತಿಕ ವೃಂದ ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ಸಮರ್ಪಿಸಿತು. ಕ್ಷೇತ್ರದ ಅದಿ ದೇವತೆಗಳಾದ ಗಂಗಾಧರೇಶ್ವರ ಸ್ವಾಮಿ, ಭೈರವೇಶ್ವರ ಸ್ವಾಮಿ, ಚೌಡೇಶ್ವರಿ ದೇವರನ್ನು ಮೂಲ ಗರ್ಭಗುಡಿಯಿಂದ ತಂದು ಮಹಾರಥದಲ್ಲಿ ಕೂರಿಸಿ ಚುಂಚಶ್ರೀಗಳು ಮಹಾ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಸರ್ವಾಲಂಕೃತಗೊಂಡಿದ್ದ ಅಡ್ಡಪಲ್ಲಕಿ ಉತ್ಸವದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಭಕ್ತರಿಗೆ ದರ್ಶನ ನೀಡಿದರು.

ದೇಶೀಕೇಂದ್ರ ಸ್ವಾಮೀಜಿ, ಮಠದ ವ್ಯವಸ್ಥಾಪಕರಾದ ರಾಮಕೃಷ್ಣೇಗೌಡ, ಪ್ರಾಂಶುಪಾಲ ಸಿ.ನಂಜುಂಡಯ್ಯ ಉಪಸ್ಥಿತರಿದ್ದರು. 9 ದಿನಗಳಿಂದ ನಡೆದ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯಿಂದ ತೆರೆ ಕಂಡಿತು.

ಪ್ರಾರ್ಥನೆ: (ಗುಲ್ಬರ್ಗ ವರದಿ): ಜಪಾನ್ ದೇಶದಲ್ಲಿ ಈಚೆಗೆ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯಿಂದ ಅಪಾರ ಪ್ರಮಾಣದ ಹಾನಿಯಾಗಿ ಜನರು ಸಂತ್ರಸ್ತರಾಗಿದ್ದಾರೆ. ಪ್ರಾಕೃತಿಕ ವಿಕೋಪದಿಂದ ನಲುಗಿ ಹೋದ ದುಃಖ ತಪ್ತ ಜಪಾನಿನ ಸಹೋದರ ಸಹೋದರಿಯರಿಗೆ ಶಾಂತಿ, ಸಂಯಮ ಹಾಗೂ ಆತ್ಮಸ್ಥೈರ್ಯ ದಯಪಾಲಿಸಲಿ ಎಂದು ಪ್ರಾದೇಶಿಕ ಆಯುಕ್ತ ಡಾ.ರಜನೀಶ್ ಗೋಯೆಲ್ ಅವರು ಭಗವಾನ್ ಬುದ್ಧನಿಗೆ ಪ್ರಾರ್ಥಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.