ಬುಧವಾರ, ಮೇ 18, 2022
25 °C

ಗಂಟೆ ಮೆಣಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರುಕಟ್ಟೆಯಲ್ಲಿ ಈಗ ಹಳದಿ, ಕೆಂಪು ಬಣ್ಣದ ದೊಣ್ಣೆ ಮೆಣಸಿನಕಾಯಿಗಳು ಸಿಗುತ್ತವೆ. ನೋಡಲು ಆಕರ್ಷಕವಾಗಿ ಕಾಣುವ ಈ ತರಕಾರಿ ಮೆಣಸಿನಕಾಯಿಗಳು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ದೊಣ್ಣೆ ಮೆಣಸಿನದೇ ರುಚಿ ಹೊಂದಿರುವ  ಈ ಹಳದಿ ಮೆಣಸನ್ನು ಗಂಟೆ ಮೆಣಸು, ಹಳದಿ ಮೆಣಸು ಎಂಬ ಹೆಸರಿನಿಂದ ಕರೆಯುತ್ತಾರೆ.ಮಲೆನಾಡಿನ ಕೈ ತೋಟಗಳಲ್ಲಿ ಇದು ಕಾಣಸಿಗುತ್ತದೆ. ಹೆಚ್ಚು ದಿನ ಕೆಡದೆ ಉಳಿಯುವ ಗುಣ ಇರುವ ಈ ಮೆಣಸಿನ ಕಾಯಿಗಳಲ್ಲಿ ಖಾರ ಇರುವುದಿಲ್ಲ. ವಿಶಿಷ್ಟ ರುಚಿಯ ಈ ಮೆಣಸಿನ ಕಾಯಿಗಳನ್ನು ಅಲ್ಸರ್, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವವರೂ ತಿನ್ನಬಹುದು.ಆಕರ್ಷಕ ಹಳದಿ ಬಣ್ಣದ ವೆುಣಸಿನ ಕಾಯಿ ಗಿಡಗಳು ಎಲ್ಲ  ಬಗೆಯ ವಾತವರಣಕ್ಕೂ ಹೊಂದಿಕೊಂಡು ಬೆಳೆಯುತ್ತವೆ. ವಿಷೇಶ ಆರೈಕೆ ಅಗತ್ಯವಿಲ್ಲ. ಹಣ್ಣಾದ ಕಾಯಿಗಳನ್ನು ಒಣಗಿಸಿ ಪುಡಿಮಾಡಿ ಇಟ್ಟುಕೊಂಡು ಬಳಸಬಹುದು.

 

ಅಡುಗೆ ಪದಾರ್ಥಗಳಿಗೆ ಆಕರ್ಷಕ ಹಳದಿ ಬಣ್ಣದ ಬರುತ್ತದೆ. ಮಾಡಿದ ಅಡಿಗೆಯನ್ನು ಅಲಂಕಾರಕ್ಕೂ ಈ ಮೆಣಸಿನ ಕಾಯಿಗಳನ್ನು ಬಳಸಬಹುದು. ನಗರವಾಸಿಗಳು ಈ ಮೆಣಸಿನ ಕಾಯಿ ಗಿಡಗಳನ್ನು ಕುಂಡಗಳಲ್ಲಿ ಬಳಸಬಹದು. ಬೀಜಗಳಿಗೆ  ತೇಜು ಪೂಜಾರಿ ಅವರನ್ನು ಸಂಪರ್ಕಿಸಬಹುದು ಅವರ ಮೊಬೈಲ್ ನಂಬರ್ 9448421924.      

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.