ಗಣಿ ಅಕ್ರಮ: 63 ಮಂದಿಗೆ ನೋಟಿಸ್
ಬೆಂಗಳೂರು: ಅಕ್ರಮ ಗಣಿಗಾರಿಕೆಯಲ್ಲಿ ಷಾಮೀಲಾಗಿದ್ದ ಆರೋಪದ ಮೇಲೆ ಆರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್ಟಿಓ), 54 ಮೋಟಾರು ವಾಹನ ನಿರೀಕ್ಷಕರು ಮತ್ತು ಮೂವರು ಚಾಲಕರಿಗೆ ಸಾರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ತನಿಖಾ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಅಕ್ರಮ ಗಣಿಗಾರಿಕೆ ನಡೆಸುವವರ ಜೊತೆ ನೇರವಾಗಿ ಷಾಮೀಲಾಗಿರುವುದು, ಅಕ್ರಮಕ್ಕೆ ಸಹಕಾರ ನೀಡಿರುವುದು, ಲಂಚ ಪಡೆದಿರುವುದು ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಈ ಅಧಿಕಾರಿಗಳು ಮತ್ತು ಚಾಲಕರಿಗೆ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಕಾನೂನು ಕ್ರಮ ಜರುಗಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಹೊಸಪೇಟೆಯ ಆರ್ಟಿಓ ನೂರ್ ಬಾಷಾ, ಬಾಗಲಕೋಟೆಯ ಆರ್ಟಿಓ ಐ.ಬಿ.ಆವಟಿ, ಬೆಳಗಾವಿ ಆರ್ಟಿಓ ಟಿ.ಎಸ್.ನಿಂಗಣ್ಣನವರ್, ದಾವಣಗೆರೆ ಆರ್ಟಿಓ ಬಿ.ಆರ್.ವಿಜಯಕುಮಾರ್, ಗದಗ ಆರ್ಟಿಓಗಳಾಗಿದ್ದ ವಿ.ಆರ್.ಶಂಭುಲಿಂಗ, ಸಿ.ಬಿ. ಪಾಟೀಲ್, ಕೊಪ್ಪಳ ಆರ್ಟಿಓ ಶಿವರಾಜ್ ಬಿ.ಪಾಟೀಲ್ ನೋಟಿಸ್ ಪಡೆದವರಲ್ಲಿ ಸೇರಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.