ಗದಗ: ಈ ವರ್ಷ ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯಲ್ಲಿ ಸತತ ಎರಡನೇ ವರ್ಷವೂ ಬರದ ಛಾಯೆ ಆವರಿಸಿದೆ.
ಮುಂಗಾರು ಹಂಗಾಮಿನಲ್ಲಿ ಮಳೆಯಾಗದಿದ್ದರಿಂದ ಜಿಲ್ಲೆಯ ಬಹುತೇಕ ಕಡೆ ರೈತರು ಬಿತ್ತನೆಯನ್ನೇ ಮಾಡಲಿಲ್ಲ. ಆದರೆ ಹಿಂಗಾರು ಮಳೆ ಸ್ವಲ್ಪ ಆಶಾದಾಯಕವಾಗಿದ್ದರಿಂದ 1.20 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಮಾಡಿದ್ದಾರೆ.

ಹಿಂಗಾರಿನಲ್ಲಿ ಜೋಳ, ಕಡಲೆ, ಗೋಧಿ, ಸೂರ್ಯಕಾಂತಿಯನ್ನು ಪ್ರಮುಖವಾಗಿ ಬೆಳೆಯುತ್ತಾರೆ. ಕಡಲೆ ಹಾಗೂ ಸೂರ್ಯಕಾಂತಿ ಬೆಳೆಗೆ ಕಾಳು ಕಟ್ಟುವ ಮುನ್ನವೇ ಕೀಟಬಾಧೆ ಪ್ರಾರಂಭವಾಗಿದೆ. ಕೀಟನಾಶಕ ಸಿಂಪಡಿಸಿದರೂ ಹತೋಟಿ ಬಾರದಿರುವುದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹವಾಮಾನ ವೈಪರೀತ್ಯದಿಂದಾಗಿ ಬಳ್ಳಿ ಶೇಂಗಾ ಹಾಗೂ ಮುಸುಕಿನ ಜೋಳದ ಇಳುವರಿ ಕುಸಿದಿದೆ. ಜಿಲ್ಲೆಯಲ್ಲಿ ಆಹಾರ ಧಾನ್ಯ ಉತ್ಪಾದನೆಯೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

`ಬಿಳಿ ಜೋಳಕ್ಕೂ ಕೀಟ ಬಾಧೆ ತಗುಲಿದೆ. ಔಷಧ ಸಿಂಪಡಿಸಿದರೂ ಹತೋಟಿಗೆ ಬರುತ್ತಿಲ್ಲ. ಕೃಷಿ ಅಧಿಕಾರಿಗಳು ಹೊಲಕ್ಕೆ ಬಂದು ನೋಡುವುದಿಲ್ಲ. ಬೆಲೆ ನಷ್ಟದಿಂದ ತೀವ್ರ ನಷ್ಟ ಅನುಭವಿಸುತ್ತಿರುವ ರೈತರಿಗೆ ಸರ್ಕಾರ ಎಕರೆವಾರು ಪರಿಹಾರ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾ ಮಾಡಬೇಕು' ಎಂದು ರೈತ ದೊಡ್ಡಬಸಪ್ಪ ಆಗ್ರಹಪಡಿಸಿದ್ದಾರೆ.

`ಕೀಟಬಾಧೆ ಇರುವ ಪ್ರದೇಶಗಳಿಗೆ ಕೃಷಿ ತಜ್ಞರು ಭೇಟಿ ನೀಡಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಕೀಟನಾಶಕ ದಾಸ್ತಾನು ಇದೆ. ಔಷಧ ಸಿಂಪಡಣೆ ಮಾಡಿ ನಿಯಂತ್ರಣಕ್ಕೆ ತರಬಹುದು. ಈ ವರ್ಷವೂ ಬರ ಇರುವುದರಿಂದ ರೈತರ ಸಮಸ್ಯೆ ಅರ್ಥವಾಗುತ್ತದೆ. ಹೆಚ್ಚು ತೊಂದರೆ ಇದ್ದರೆ ಕೃಷಿ ಅಧಿಕಾರಿಗಳ ಗಮನಕ್ಕೆ ತರಬೇಕು. ಇಲಾಖೆಯಿಂದ ದೊರೆಯುವ ಸೌಲಭ್ಯ ಒದಗಿಸಲಾಗುವುದು' ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎನ್.ನರಸಿಂಹಮೂರ್ತಿ.

ಹಿಂಗಾರು ಹಂಗಾಮಿನಲ್ಲಿ 3,20,700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಅಕ್ಟೋಬರ್ವರೆಗೆ 1.20 ಲಕ್ಷ ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿದೆ. ವಾಡಿಕೆಯಂತೆ 232 ಮಿ.ಮೀ ಮಳೆಯಾಗಬೇಕಿತ್ತು. ವಾಸ್ತವದಲ್ಲಿ 207 ಮಿ.ಮೀ. ಆಗಿದೆ. ನೀಲಂ ಚಂಡಮಾರುತ ಜಿಲ್ಲೆಯ ರೈತರಿಗೆ ಸ್ವಲ್ಪ ಮಟ್ಟಿಗೆ ವರದಾನವಾಯಿತು. 2 ದಿನ ಸುರಿದ ಮಳೆಯಿಂದ ಉತ್ತೇಜಿತರಾದ ರೈತರು ಮತ್ತಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ ಎಂದು ವಿವರಿಸಿದರು.

ಜಿಲ್ಲೆಯ ಒಟ್ಟು ಕೃಷಿ ಪ್ರದೇಶದಲ್ಲಿ ಶೇಕಡಾ 25ರಷ್ಟು ನೀರಾವರಿ ಇದ್ದರೆ ಶೇಕಡಾ 75 ರಷ್ಟು ಭಾಗ ಮಳೆಯನ್ನೇ ಆಶ್ರಯಿಸಿದೆ. ಜಿಲ್ಲೆಯಲ್ಲಿ ಯಾವುದೇ ಬೃಹತ್ ಉದ್ದಿಮೆಗಳು ಇಲ್ಲ. ಕೃಷಿಯೇ ಜೀವನಾಧಾರವಾಗಿದೆ. ಮಳೆಯಾಗದೆ ತೊಂದರೆಗೆ ಸಿಲುಕಿರುವ ರೈತರು ಕೂಲಿ ಅರಸಿಕೊಂಡು ದೂರದ ಪಟ್ಟಣಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಆರ್ಥಿಕ ಪರಿಸ್ಥಿತಿ ಅಸ್ತವ್ಯಸ್ತಗೊಂಡಿದೆ.

ಮುಂಗಾರು ಹಂಗಾಮು ವೈಫಲ್ಯದಿಂದ 2.46 ಲಕ್ಷ ಹೆಕ್ಟೇರ್ ಬದಲಿಗೆ ಕೇವಲ 77,000 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿತ್ತು. ಮುಂಗಾರು ಹಂಗಾಮಿನಲ್ಲಿ ಹೆಸರು, ಶೇಂಗಾ, ಬಿ.ಟಿ.ಹತ್ತಿ, ಜೋಳ ನೆಲಕಚ್ಚಿದ್ದರಿಂದ ರೂ 80 ಕೋಟಿ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.