ಶನಿವಾರ, ಮಾರ್ಚ್ 6, 2021
19 °C
ಸ್ವಚ್ಛ ಭಾರತ ಅಭಿಯಾನ ಬೇಕಿದೆ ಕಾಯಕಲ್ಪ–ಕ್ರಮಕ್ಕೆ ನಾಚ

ಗರಿಕರ ಆಗ್ರಹ ಗಾಂಧಿ ಪುತ್ಥಳಿಗಿಲ್ಲ ನಿರ್ಹಹಣೆ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರಿಕರ ಆಗ್ರಹ ಗಾಂಧಿ ಪುತ್ಥಳಿಗಿಲ್ಲ ನಿರ್ಹಹಣೆ ಭಾಗ್ಯ

ತರೀಕೆರೆ: ದೇಶದೆಲ್ಲೆಡೆ ಗಾಂಧಿ ಹೆಸರಿನಲ್ಲಿ ಸ್ವಚ್ಛ ಭಾರತ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ಆದರೆ ಪಟ್ಟಣದಲ್ಲಿ ಪುರಸಭೆ ನಿರ್ಮಿಸಿರುವ ಗಾಂಧಿ ಪುತ್ಥಳಿ ನಿರ್ವಹಣೆ ಇಲ್ಲದೇ ಸೊರಗುತ್ತಿದೆ.ಸ್ವಚ್ಛತೆ ಹೆಸರಿನಲ್ಲಿ ಪುರಸಭೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹ ಗಾಂಧಿ ಪುತ್ಥಳಿಯ ಬಳಿ ಸ್ವಚ್ಛಗೊಳಿಸುವ ಮನಸ್ಸು ಮಾಡಿಲ್ಲ. ಅದರೊಂದಿಗೆ ಪಟ್ಟಣದ ಹಲವು ಸಂಘ ಸಂಸ್ಥೆಗಳು ಸಹಾ ವಿವಿಧ ಬಡಾವಣೆಗಳಲ್ಲಿ ಸ್ವಚ್ಛ ಮಾಡಿದ್ದರೂ ಈ ಸ್ಥಳ ಗಮನಕ್ಕೆ ಬಾರದೇ ಇರುವುದು ವಿಷಾದಕರ ಸಂಗತಿ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.ಜನರಿಗೆ ಅರಿವು ಮೂಡಿಸುವ ದೃಷ್ಟಿ ಯಿಂದ ಪುರಸಭೆ ಪ್ರತಿ ವಾರ್ಡ್‌ಗಳಲ್ಲಿ  ಸ್ವಚ್ಛ ಭಾರತದ ಜಾಹೀರಾತು ನೀಡಿ ಜನರಿಗೆ ಅರಿವು ಮೂಡಿಸಲು ಹೊರಟಿ ರುವ ಪುರಸಭೆ ತಾನೆ ನಿರ್ಮಿಸಿದ ಗಾಂಧಿ ಪುತ್ಥಳಿಯ ಜಾಗದಲ್ಲಿ  ತಂತಿ ಬೇಲಿ ಅಥವಾ ಗೇಟುಗಳನ್ನು ಅಳವಡಿಸಿಲ್ಲ. ಪುತ್ಥಳಿಯ ಸುತ್ತಲೂ ಬೆಳೆದಿರುವ ಗಿಡಗಳನ್ನು ತೆಗೆದು ಶುಚಿಗೊಳಿಸಿ ಸೂಕ್ತ ನಿರ್ವಹಣೆ ಮಾಡದಿರುವುದು ನಾಗರಿಕರ ಅಸಹನೆಗೆ ಕಾರಣವಾಗಿದೆ.ಪಟ್ಟಣದ ಹೃದಯಭಾಗದಲ್ಲಿರುವ ಈ ಪುತ್ಥಳಿ ಬಳಿ ರೈಲ್ವೆ ನಿಲ್ದಾಣಕ್ಕೆ ಹೋಗುವ ದಾರಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿ ಹಾಗೂ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣಗಳು ಇವೆ. ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸು ತ್ತಿದ್ದು, ಹಲವು ಪುರಸಭೆ ಸದಸ್ಯರು, ಮಾಜಿ ಶಾಸಕರು ಹಾಗೂ ಅಧಿಕಾರಿಗಳು ಇದೇ ಜಾಗದಲ್ಲಿಯೇ ಸಂಚರಿಸಿದರೂ ಸಹಾ ಈ ಸ್ಥಳವನ್ನು ಸ್ವಚ್ಛಗೊಳಿಸುವ, ನಿರ್ವಹಣೆ ಮಾಡುವ ಮನಸ್ಸು ಬರುತ್ತಿಲ್ಲವೇ ಎಂಬುದು ಜನರ ಪ್ರಶ್ನೆ.ಈ ರಸ್ತೆಯಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇರದ ಕಾರಣ ರಾತ್ರಿ ವೇಳೆ ಪುತ್ಥಳಿಯ ಹಿಂಭಾಗದ ಬಳಿ ಅಕ್ರಮ ಚಟುವಟಿಕೆಗಳ ತಾಣವಾಗಿದ್ದು, ರಾತ್ರಿ ಮತ್ತು ಮುಂಜಾನೆಯ ರೈಲಿಗೆ ಬರುವ –ಹೋಗುವ ಪ್ರಯಾಣಿಕರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ 7ರ ನಂತರ ಮಹಿಳೆಯರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ನಾಗರಿಕರು.ಈ ಬಗ್ಗೆ ಪುರಸಭೆ ಅಧಿಕಾರಿಗಳನ್ನು ಕೇಳಿದರೆ ರಸ್ತೆಯ ಜಾಗ ರೈಲ್ವೆ ಇಲಾಖೆಗೆ ಸೇರಿದ್ದು ಎಂದು ಬೇಜಾವಾಬ್ದಾರಿ ಉತ್ತರ ನೀಡುತ್ತಿದ್ದು, ಸುತ್ತಮುತ್ತಲು ಇರುವ ಕಚೇರಿ, ಅಂಗಡಿ, ಮನೆ ಹಾಗೂ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಕಟ್ಟಡ ಗಳಿಂದ ಮಾತ್ರ ಕಂದಾಯ ವಸೂಲಿ ಮಾಡುತ್ತಿದೆ ಎಂದು ನಾಗರೀಕರು ಆರೋಪಿಸುತ್ತಾರೆ.ಪುತ್ಥಳಿಗೆ ಯಾವುದೇ ಸೂಕ್ತ ರಕ್ಷಣೆ ಇಲ್ಲದ ಕಾರಣ ದಿನದಿಂದ  ದಿನಕ್ಕೆ ಹಾಳಾಗುತ್ತಾ ಬರುತ್ತಿದ್ದು, ಪುತ್ಥಳಿಗೆ ಆಕರ್ಷಕ ಮೇಲ್ಚಾವಣಿ ನಿರ್ಮಿಸಿದರೆ ಸೂಕ್ತ ಎನ್ನುವುದು ಹಲವರ ಅಭಿಪ್ರಾಯ.ಪುರಸಭೆ ಈ ಹಿಂದೆ ಪುತ್ಥಳಿಯನ್ನು  ಗಾಂಧಿ ಸರ್ಕಲ್ ಬಳಿ ನಿರ್ಮಿಸಿತ್ತು. ಆದರೆ ಲಾರಿ ಡಿಕ್ಕಿ ಹೊಡೆದು ಪುತ್ಥಳಿ ಸಂಪೂರ್ಣ ಹಾಳಾಗಿದ್ದು, ಹೊಸ ಪುತ್ಥಳಿ ನಿರ್ಮಿಸಲಾಗಿದೆ.  ಆ ಬಗ್ಗೆ ಸಂಬಂಧಪಟ್ಟ ಲಾರಿ ಮಾಲೀಕರಿಂದ ಪರಿಹಾರ ಪಡೆಯದೇ ಪುರಸಭೆಗೆ ನಷ್ಟ ಉಂಟು ಮಾಡಿರುವ ಬಗ್ಗೆ ಅಪಸ್ವರಗಳು ಸಹಾ ಕೇಳಿಬರುತ್ತಿದೆ.ಇನ್ನಾದರೂ ಪುರಸಭೆ  ಗಾಂಧಿ ಪುತ್ಥಳಿಯ ಸುತ್ತಲೂ ಸ್ವಚ್ಛತೆ ಕಾಪಾಡಿ, ಬೇಲಿ ಹಾಗೂ ಗೇಟ್ ನಿರ್ಮಿಸಿ, ಒಳಭಾಗದಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಬೇಕು. ರಸ್ತೆ ಹಾಗೂ ಪುತ್ಥಳಿಯ ಬಳಿ ವಿದ್ಯುತ್ ದೀಪಗಳನ್ನು ಅಳವಡಿಸಿ  ಚಿಕ್ಕ ಸುಂದರ ಉದ್ಯಾನ ವನ್ನಾಗಿ ಮಾರ್ಪಡಿಸುವ ಮೂಲಕ ಸ್ವಚ್ಛ ಭಾರತದ ಕಲ್ಪನೆಯನ್ನು ಸಾಕಾರಗೊ ಳಿಸಲಿ ಎಂಬುದು ನಾಗರಿಕರ ಆಶಯ.ಗಾಂಧಿ ಜಯಂತಿ,ಸ್ವಾತಂತ್ರ್ಯ ದಿನಾಚರಣೆ ದಿವಸ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನೆನಪಾಗುವ ಗಾಂಧಿ ಪುತ್ಥಳಿ ನಂತರದ ದಿನಗಳಲ್ಲಿ ತಾತ್ಸಾರಕ್ಕೆ ಒಳಗಾಗುತ್ತಿರುವುದು ದುರ್ದೈವ

ದೇವೇಂದ್ರ,
 ಮಾಜಿ ಸೈನಿಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.