ಲಂಡನ್ (ಪಿಟಿಐ): ಕೋಟಿ ಕೋಟಿ ಸೂರ್ಯ ಪ್ರಕಾಶ! ಹೌದು, ಇದೇ ಮೊದಲ ಬಾರಿಗೆ ಸಂಶೋಧಕರು ಸೂರ್ಯನಿಗಿಂತ ಶತಕೋಟಿ ಪಟ್ಟು ತೀಕ್ಷ್ಣವಾದ ಗಾಮಾ ಕಿರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯುದಾವಿಷ್ಟಗೊಳಿಸಿದ ಅನಿಲದ ಮೇಲೆ ಅತಿ ಅಲ್ಪಾವಧಿಗೆ ಲೇಸರ್ ಗುಚ್ಛಗಳನ್ನು ಹಾಯಿಸಿದಾಗ ಈ ತೀಕ್ಷ್ಣ ಕಿರಣಗಳು ಸೃಷ್ಟಿಯಾಗುತ್ತವೆ. 20 ಸೆಂ.ಮೀ. ಸೀಸ ಅಥವಾ 1.5 ಮೀಟರ್ ದಪ್ಪನೆಯ ಕಾಂಕ್ರೀಟನ್ನೂ ಈ ಕಿರಣಗಳು ನಿರಾಯಾಸವಾಗಿ ಛೇದಿಸಿ ಮುಂದೆ ಸಾಗುತ್ತವೆ ಎಂದು ಸ್ಕಾಟ್ಲೆಂಡಿನ ಸಟ್ಯೆಾಥ್ಕ್ಲೈಡ್ ವಿಶ್ವವಿದ್ಯಾಲಯದ ಭೌತ ವಿಜ್ಞಾನಿಗಳು ವಿವರಿಸಿದ್ದಾರೆ.

ರೇಡಿಯೋಥೆರಪಿ, ರೇಡಿಯೊ ಸಮಸ್ಥಾನಿಗಳ (ರೇಡಿಯೊ ಐಸೊಟೊಪ್) ತಯಾರಿಕೆ, ದೇಹದೊಳಗಿನ ವಿವಿಧ ಅಂಗಗಳ ಚಿತ್ರಗಳನ್ನು ತೆಗೆಯಲು ಇದರಿಂದ ಬಹಳ ಅನುಕೂಲವಾಗುತ್ತದೆ ಎಂಬುದು ತಜ್ಞರ ಆಶಾವಾದ.ಅಷ್ಟೇ ಅಲ್ಲ, ಪರಮಾಣು ತ್ಯಾಜ್ಯದ ಸುರಕ್ಷತೆಯ ಮೇಲೆ ನಿಗಾ ಇಡಲು ಕೂಡ ಇದು ಸಹಕಾರಿಯಾಗಬಲ್ಲದು; ಪ್ರಯೋಗ ಶಾಲೆಗಳಲ್ಲಿ ಪರಮಾಣು ಬೀಜಕೇಂದ್ರದ ಅಧ್ಯಯನದ ವೇಳೆ ಕೂಡ ಇದು ಬಳಕೆಗೆ ಪ್ರಶಸ್ತವಾಗಿರುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.