ಶುಕ್ರವಾರ, ಜೂಲೈ 3, 2020
23 °C

ಗೀತಾ ಗಾಯನಕ್ಕೆ ತಲೆದೂಗಿದ ಪ್ರೇಕ್ಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೀತಾ ಗಾಯನಕ್ಕೆ ತಲೆದೂಗಿದ ಪ್ರೇಕ್ಷಕರು

ಬಸವಕಲ್ಯಾಣ: ಭಾನುವಾರ ರಾತ್ರಿ ಇಲ್ಲಿನ ರಥ ಮೈದಾನದಲ್ಲಿ ನಡೆದ ಬಸವ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಗಾಯಕಿ ಗೀತಾ ಜಾವಡೇಕರ್ ಅವರು ಗಾಯನ ಪ್ರಸ್ತುತಪಡಿಸಿ ಪ್ರೇಕ್ಷಕರು ತಲೆದೂಗುವಂತೆ ಮಾಡಿದರು.

 

ತಾವು ಧಾರವಾಡದವರಾಗಿದ್ದು 25 ವರ್ಷದ ಹಿಂದೆ ಶರಣರ ನಾಡು ಬಸವಕಲ್ಯಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇ ಎಂದು ನೆನಪು ಮಾಡಿಕೊಂಡರು. ‘ಜಯಗುರು ಬಸವ, ಬಸವ ಶಿವನೇ, ಶಿವನೇ ಬಸವಾ’ ಎಂಬ ಸ್ತುತಿಗೀತೆ ಹಾಡಿ ಜನರಲ್ಲಿ ಉತ್ಸಾಹ ತುಂಬಿದರು. ವಚನ ಹಾಗೂ ಭಕ್ತಿಗೀತೆಗಳನ್ನು ಸಹ ಅವರು ಹಾಡಿದರು.

 

ಇದಕ್ಕೂ ಮೊದಲು ಭಾಲ್ಕಿಯ ಸುವರ್ಣ ರಾಠೋಡ ವಚನಗಳನ್ನು ಹಾಡಿದರು. ರಾಣಿ ಸತ್ಯಮೂರ್ತಿ ಮತ್ತು ಸಂಗಡಿಗರು ವಚನ ನೃತ್ಯ ಹಾಗೂ ಹಳ್ಳಿಖೇಡ ಬಸವತೀರ್ಥ ವಿದ್ಯಾಪೀಠದ ಮಕ್ಕಳು, ಬೆಂಗಳೂರಿನ ವಿವೇಕಾನಂದ ಕೇಂದ್ರದ ಯುವಕರಿಂದ ಆಕರ್ಷಕ ನೃತ್ಯ ಪ್ರದರ್ಶಿಸಲಾಯಿತು. ಶ್ರೀನಿವಾಸ ಮತ್ತು ರಶ್ಮಿ ನಿರೂಪಿಸಿದರು. ಅಪಾರ ಜನರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.