ರಾಜ್ಯ ಸರ್ಕಾರವು ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯ ಸದುದ್ದೇಶದೊಂದಿಗೆ ‘ಇನ್ವೆಸ್ಟ್ ಕರ್ನಾಟಕ’ ಹೆಸರಿನಲ್ಲಿ ಹೂಡಿಕೆದಾರರ ಸಮಾವೇಶ ನಡೆಸಿದ್ದು ಸ್ವಾಗತಾರ್ಹ. ಆದರೆ ರಾಜ್ಯದಲ್ಲಿ ಶತಮಾನಗಳಿಂದಲೂ ಜನಸಾಮಾನ್ಯರಿಗೆ ಆರ್ಥಿಕ ಭದ್ರತೆ ಒದಗಿಸುತ್ತಿರುವ ಗುಡಿ ಕೈಗಾರಿಕೆಗಳತ್ತಲೂ ಗಮನಹರಿಸಬೇಕಾದ ಅಗತ್ಯವಿದೆ.

ಬೀಡಿ ಕಟ್ಟುವಿಕೆ, ಊದುಬತ್ತಿ, ಮೇಣದಬತ್ತಿ, ಖಾದಿ ಬಟ್ಟೆ ತಯಾರಿಕೆ, ಕುಂಬಾರಿಕೆ, ರುಚಿಕರ ಖಾದ್ಯಗಳ ತಯಾರಿಕೆ, ಹೈನುಗಾರಿಕೆ ಇನ್ನಿತರ ಗುಡಿ ಕೈಗಾರಿಕೆಗಳಲ್ಲಿ ಬಹುತೇಕ ಬಡ, ಮಧ್ಯಮ ವರ್ಗದ ಜನರೇ ತೊಡಗಿದ್ದಾರೆ. ಅವರು ಸಾಮಾನ್ಯ ಜನರಿಗೆ ಸುಲಭದ ದರದಲ್ಲಿ ಸಿಗುವಂತಹ ಅಗತ್ಯ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಾರೆ.

ಆದರೆ ಈ ಕೈಗಾರಿಕೆಗಳಿಗೆ ಸರ್ಕಾರದ ಪ್ರೋತ್ಸಾಹವಿಲ್ಲದೆ ಅವರು ಈ ಕಾರ್ಯದಿಂದ ಬರುವ ಅಲ್ಪ ಲಾಭದಿಂದಲೇ ಜೀವನ ಸಾಗಿಸಲು ಹೆಣಗಾಡುವಂತಾಗಿದೆ. ಸರ್ಕಾರಗಳು ಗುಡಿ ಕೈಗಾರಿಕೆಗಳಿಗೆ ದೊಡ್ಡ ಮಟ್ಟದ ಬಂಡವಾಳ ಒದಗಿಸುವ ಅವಶ್ಯಕತೆ ಇಲ್ಲ. ಅವುಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವ ಸ್ತ್ರೀ ಶಕ್ತಿ ಸಂಘಗಳಿಗೆ ಧನ ಸಹಾಯ ಒದಗಿಸಿ, ಗಾಂಧಿ ಅವರ ಗ್ರಾಮ ಸ್ವರಾಜ್ಯದ ಚಿಂತನೆಯನ್ನು ಬೆಂಬಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.