ಗುಡುಗು ಸಹಿತ ಮಳೆ ಸಾಧ್ಯತೆ

7

ಗುಡುಗು ಸಹಿತ ಮಳೆ ಸಾಧ್ಯತೆ

Published:
Updated:

ಬೆಂಗಳೂರು:  ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಹಿಡಕಲ್‌ನಲ್ಲಿ 6 ಸೆಂ.ಮೀ. ಗರಿಷ್ಠ ಪ್ರಮಾಣದ ಮಳೆಯಾಗಿದೆ.

ಉಳಿದಂತೆ ಸವಣೂರಿನಲ್ಲಿ 5, ಸಿದ್ಧಾಪುರ, ಶಿರಹಟ್ಟಿ, ಮಹಾಲಿಂಗಪುರ, ಮುಧೋಳದಲ್ಲಿ 4, ಬಂಟ್ವಾಳ, ಮುಂಡಗೋಡು, ಹುಬ್ಬಳ್ಳಿ, ಎನ್.ಆರ್‌ಪುರ, ಬೇಗೂರಿನಲ್ಲಿ 3, ಪಣಂಬೂರು, ಭಟ್ಕಳ, ಗೋಕರ್ಣ, ಕುಮಟ, ಶಿರಸಿ, ಉಡುಪಿ, ಧಾರವಾಡ, ಜಮಖಂಡಿ, ನರಗುಂದ, ವಿಜಾಪುರ, ಶಿಕಾರಿಪುರದಲ್ಲಿ 2, ಮುಲ್ಕಿ, ಉಪ್ಪಿನಂಗಡಿ, ಕೊಲ್ಲೂರು, ಗೇರುಸೊಪ್ಪ, ಬೆಳಗಾವಿ ವಿಮಾನ ನಿಲ್ದಾಣ, ಹಾನಗಲ್ಲ, ಗುಳೇದಗುಡ್ಡ,  ಹೊಸನಗರದಲ್ಲಿ 1 ಸೆಂ.ಮೀ.ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದಾದ್ಯಂತ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry