ಬುಧವಾರ, ಏಪ್ರಿಲ್ 14, 2021
24 °C

ಗುಣಮಟ್ಟದ ಕಾಮಗಾರಿಗೆ ಶಾಸಕ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಕ್ಷೇತ್ರದ ವಿವಿಧೆಡೆ ರೂ.1.20 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಸೋಮವಾರ ಚಾಲನೆ ನೀಡಿದ್ದು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.ತಾಲ್ಲೂಕಿನ ವಡಿಯಾಂಡಹಳ್ಳಿಯಲ್ಲಿ 5054 ಯೋಜನೆಯಡಿ ರೂ.19 ಲಕ್ಷ ವೆಚ್ಚದಲ್ಲಿ ಡಾಂಬರು ರಸ್ತೆ ನಿರ್ಮಿಸಲಾಗುತ್ತಿದೆ. ಗಾಮನಹಳ್ಳಿ, ಕೊರಮೇಗೌಡನ ಕೊಪ್ಪಲು, ದೇವರಗುಡ್ಡನಕೊಪ್ಪಲುಗಳಲ್ಲಿ ತಲಾ ರೂ.19 ಲಕ್ಷ ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಸುಗ್ಗನಹಳ್ಳಿ ಗ್ರಾಮ ಪರಿಮಿತಿಯಲ್ಲಿ ರೂ.19 ಲಕ್ಷ ಹಾಗೂ ಮೈಸೂರು ರಸ್ತೆ ಸಂಪರ್ಕ ರಸ್ತೆಯನ್ನು ರೂ.19.5 ಲಕ್ಷ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ಎಂಜಿನಿಯರ್‌ಗಳಾದ ಸುನಿಲ್, ಉದಯ್, ಜೆಡಿಎಸ್ ಮುಖಂಡ ಉದಯಕುಮಾರ್,ವಿ.ಇ.ನಾಗರಾಜು, ಗ್ರಾ.ಪಂ.ಸದಸ್ಯ ಶಿವಯ್ಯ, ಸಿದ್ದಯ್ಯ, ಮರೀಗೌಡ, ಗೋವಿಂದು ಇದ್ದರು.`ತಪ್ಪು ತಿದ್ದಿಕೊಳ್ಳುವುದೇ ನಿಜವಾದ ಸಾಕ್ಷಾತ್ಕಾರ~

ಮಂಡ್ಯ: ತಪ್ಪು ಮಾಡುವುದು ಸಹಜ. ಪಶ್ಚಾತಾಪ ಪಟ್ಟು, ಜೀವನವನ್ನು ಸರಿಯಾದ ಮಾರ್ಗದಲ್ಲಿ ಬದಲಾಯಿಸಿಕೊಂಡು ಹೋಗುವುದು ಜೀವನದ ನಿಜವಾದ ಸಾಕ್ಷಾತ್ಕಾರ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಬಿ.ದೇವಾನಂದ್ ಹೇಳಿದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಉಪಕಾರಾಗೃಹದಲ್ಲಿ ಇತ್ತೀಚೆಗೆ ಸಾಹಿತ್ಯ ಸಿಂಚನ, ಮಂಕು ತಿಮ್ಮನ ಕಗ್ಗ ಮತ್ತು ಜೀವನ ಮೌಲ್ಯಗಳ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಪ್ಪು ಮಾಡಿದ್ದನ್ನು ಮರೆತು, ಮನುಷ್ಯ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಸರಿ ಹಾದಿಯಲ್ಲಿ ಸಾಗಬೇಕು ಎಂದರು. ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎಸ್. ಶ್ರೀನಿವಾಸ್ ಶೆಟ್ಟಿ, ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ಸಿ.ಕೆ. ರವಿಕುಮಾರ್, ಉಪ ಕಾರಾಗೃಹ ಅಧೀಕ್ಷಕ ಎಂ.ಸುಂದರ್, ಕೃಷ್ಣಮೂರ್ತಿ, ಎಂ.ವಿ. ಧರಣೇಂದ್ರಯ್ಯ ಇತರರು ಇದ್ದರು.ಶಿಕ್ಷಕರ ಸಮಾಲೋಚನಾ ಸಭೆ


ಶ್ರೀರಂಗಪಟ್ಟಣ: ತಾಲ್ಲೂಕಿನ ಕೊಡಿಯಾಲ ಕ್ಲಸ್ಟರ್ ಸಂಪನ್ಮೂಲ ಕೇಂದ್ರದಲ್ಲಿ ಶನಿವಾರ ವಿವಿಧ ಶಾಲೆಗಳ ಶಿಕ್ಷಕರ ಸಮಾಲೋಚನಾ ಸಭೆ ನಡೆಯಿತು.ಸಂಪನ್ಮೂಲ ವ್ಯಕ್ತಿ ಕೆ.ಟಿ.ಬಸವರಾಜು ಮಾತನಾಡಿ, ಊರಿನ ಐತಿಹಾಸಿಕ ಹಿನ್ನೆಲೆ, ಪ್ರತಿಭಾವಂತ ಮಕ್ಕಳ ವಿವರ, ಲಭ್ಯ ಸಂಪನ್ಮೂಲಗಳ ಮಾಹಿತಿಯನ್ನು ಕ್ರೋಡಿಕರಿಸಬೇಕು. 2012-14ರ ಶಾಲಾಭಿವೃದ್ಧಿ ಯೋಜನೆ ತಯಾರಿಸಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.ತಾಲ್ಲೂಕಿನ ನೇರಲಕೆರೆ, ಗಾಮನಹಳ್ಳಿ, ಕೊಡಿಯಾಲ, ಹುಣಸನಹಳ್ಳಿ, ದೊಡ್ಡಹಾರೋಹಳ್ಳಿ, ಮಾರಸಿಂಗನಹಳ್ಳಿ ಇತರ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.