ಗುಬ್ಬಿ: ಪಟ್ಟಣದ ಬಸ್ ನಿಲ್ದಾಣದ ಹಿಂಬದಿ ಜೆಂಡಾ ಮೈದಾನದಲ್ಲಿ ಪ್ರತಿ ಸೋಮವಾರ ನಡೆಯುವ ಸವಲತ್ತು ವಂಚಿತ ವಾರದ ಸಂತೆಯಲ್ಲಿ ಸಮಸ್ಯೆಗಳ ಆಗರ ಎದ್ದು ಕಾಣುತ್ತದೆ.

ಸ್ವಾತಂತ್ರ್ಯ ಬಂದ ದಿನದಂದು ತ್ರಿವರ್ಣ ಧ್ವಜ ಹಾರಿಸಿದ ಜೆಂಡಾ ಮೈದಾನ ಇಂದು 116/89 ಮೀಟರ್ ಸುತ್ತಳತೆಯಲ್ಲಿದೆ. ಕಿಷ್ಕಿಂಧೆ ವಾತಾವರಣ ಸೃಷ್ಟಿಯಾಗಿರುವ ಈ ಸಂತೆಗೆ ಗುಬ್ಬಿ ಸುತ್ತಲಿನ 100ಕ್ಕೂ ಅಧಿಕ ಗ್ರಾಮದಿಂದ ಸಹಸ್ರಾರು ಸಂಖ್ಯೆಯಲ್ಲಿ ಬರುವ ಜನರು ತರಕಾರಿ ಹಾಗೂ ಕಿರು ದಿನಸಿ ಪದಾರ್ಥ ಖರೀದಿಸಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಾರೆ.

ವ್ಯಾಪಾರಕ್ಕೆ ಬರುವ ಜನರಿಗೆ ಒದಗಿಸಬೇಕಾದ ಕುಡಿಯುವ ನೀರು, ಬಿಸಿಲು ಮಳೆಯಿಂದ ರಕ್ಷಣೆಗೆ ಸೂರು, ಸಂಜೆ ವೇಳೆಗೆ ಬೀದಿದೀಪ ಅಳವಡಿಸುವಲ್ಲಿ ಪಟ್ಟಣ ಪಂಚಾಯಿತಿ ಮೀನಾ ಮೇಷ ಎಣಿಸಿರುವುದು ವಿಪರ್ಯಾಸ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸಂತೆ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾತ್ರ ನಿಯಮಿತವಾಗಿ ಮಾಡುವ ಪಂಚಾಯಿತಿ ನಿರುಪಯುಕ್ತ ರಸ್ತೆ, ಚರಂಡಿ ನಿರ್ಮಿಸಿದೆ. ರೂ.4.75 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಾಕ್ಸ್ ಚರಂಡಿ ಅವ್ಯವಸ್ಥೆಯಿಂದ ಕೂಡಿದೆ. ಸರಾಗವಾಗಿ ನೀರು ಹರಿಯದೆ ನಿಂತಲ್ಲೇ ನಿಂತ ಕೊಳಚೆ ನೀರು ಸೊಳ್ಳೆ, ನೊಣಗಳ ಆವಾಸ ಸ್ಥಾನವಾಗಿದೆ. ಅಲ್ಲಿ ಸೃಷ್ಟಿಯಾದ ದುರ್ನಾತ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದೆ ಎಂದು ಸಂತೆ ವ್ಯಾಪಾರಸ್ಥರು ದೂರುತ್ತಾರೆ.

ಮಳೆ ಬಂದರೆ ಇಲ್ಲಿನ ಸ್ಥಿತಿ ಹೇಳತೀರದು. ಅಂಟು ಮಣ್ಣಿನ ರಸ್ತೆಯಲ್ಲಿ ಹೆಜ್ಜೆ ಇಟ್ಟರೆ ಜಾರಿ ಬೀಳುವುದು ಖಚಿತ. ಸಾವಿರಾರು ರೂಪಾಯಿ ಸುಂಕ ಪಡೆಯುವ ಪಟ್ಟಣ ಪಂಚಾಯಿತಿ ಸಂತೆ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸುಂಕ ನೀಡೆವು ಎಂದು ಎಚ್ಚರಿಸಿದ್ದಾರೆ.

ರೂ.18.75 ಲಕ್ಷ ವೆಚ್ಚದ ಫ್ಲಾಟ್ಫಾರಂ ಬರಿಯ ಕಲ್ಲು ಚಪ್ಪಡಿಯಿಂದ ಕೂಡಿದೆ. ಎರಡು ಕಲ್ಲು ಚಪ್ಪಡಿ ನಡುವೆ ಸಿಮೆಂಟ್ ಹಾಕದೆ ಇರುವುದು ಹುಳು ಹುಪ್ಪಟೆಗಳ ತಾಣವಾಗಿದೆ. ಈ ಸಮಸ್ಯೆಗಳ ಸರಮಾಲೆ ನಡುವೆ 24 ಅಂಗಡಿ ತರಕಾರಿ ಮಾರುಕಟ್ಟೆ ಮಳಿಗೆ ಮತ್ತು 16 ಮಾಂಸದ ಮಾರುಕಟ್ಟೆ ಮಳಿಗೆಯ ಎರಡು ಕಟ್ಟಡಗಳು ರೂ.38.75 ಲಕ್ಷ ಹಣ ವ್ಯಯದಲ್ಲಿ ತಲೆ ಎತ್ತಿವೆ. ಅತ್ಯವಶ್ಯಕವಾದ ನೀರು, ವಿದ್ಯುತ್ ಸಂಪರ್ಕ ಕಲ್ಪಿಸದೆ ಪಂಚಾಯಿತಿ ಅಧಿಕಾರಿಗಳು ಹರಾಜು ಪ್ರಕ್ರಿಯೆಗೆ ಮುಂದಾಗಿರುವುದು ಎಷ್ಟು ಸಮಂಜಸ? ಎಂದು ಪ್ರಶ್ನಿಸುತ್ತಾರೆ ವ್ಯಾಪಾರಸ್ಥರು.

ಒಟ್ಟಾರೆ ರೂ.85 ಲಕ್ಷ ಹಣದಲ್ಲಿ ನಡೆದ ಸಂತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ತಾಂತ್ರಿಕತೆಯನ್ನು ಸಮಂಜಸವಾಗಿ ಅಳವಡಿಸಿಕೊಳ್ಳದೆ ಕಳಪೆ ಹಾಗೂ ನಿರುಪಯುಕ್ತ ಕಾಮಗಾರಿ ಹೆಚ್ಚಾಗಿ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸಂತೆ ಸುಂಕ ವಸೂಲಿ ಟೆಂಡರ್ ಅನ್ನು ಬಹಿಷ್ಕರಿಸಿದ ಗುತ್ತಿಗೆದಾರರು ಟೆಂಡರ್ಗೆ ಮೊದಲು ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.