ಶುಕ್ರವಾರ, ಜನವರಿ 24, 2020
28 °C

ಗುರುವಾರ, 19–12–1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಟಕ ನಿಷೇಧಕ್ಕೆ ಅಧಿಕಾರ: ಮಸೂದೆ ಅಂಗೀಕಾರ

ಬೆಂಗಳೂರು, ಡಿ. 18–
ಆಕ್ಷೇಪಣೀಯ­ವೆಂದು ಕಂಡು ಬಂದ ನಾಟಕಗಳ ಅಭಿ­ನಯ­ವನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ಮೈಸೂರು ನಾಟಕ ಮಸೂದೆಯು ಇಂದು ವಿಧಾನ ಸಭೆ­ಯಲ್ಲಿ ಅಂಗೀಕೃತವಾಯಿತು.ಸೆಲಕ್ಟ ಸಮಿತಿಯು ಪರಿಷ್ಕರಿಸಿದ ಈ ಮಸೂದೆ­ಯ ಮೇಲೆ ಇಂದು ಎರಡು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಹೆಚ್ಚಿನ ಕಾವು ಇರಲಿಲ್ಲ. ಮಾತನಾಡಿದ ವಿರೋಧ ಪಕ್ಷದ ಆರು ಮಂದಿ ಸದಸ್ಯರೂ, ಮಸೂದೆಯು ನಾಟಕ ಕಲೆಯ ಅಭಿವೃದ್ಧಿಗೆ ಕಂಟಕಪ್ರಾಯವಾಗುವುದೆಂದು ಅಭಿಪ್ರಾಯಪಟ್ಟರು.

ಯು.ಪಿ.ಎಸ್‌.ಸಿ. ಪರೀಕ್ಷೆ ಹಿಂದಿಯಲ್ಲಿ ನಡೆಸುವ ಬಗ್ಗೆ ಇನ್ನೂ ನಿರ್ಧಾರವಿಲ್ಲ

ನವದೆಹಲಿ, ಡಿ. 18–
ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ ಪರೀಕ್ಷೆಗಳನ್ನು ಹಿಂದಿ ಮಾಧ್ಯಮದಲ್ಲಿ ನಡೆಸುವುದಕ್ಕೆ ಯಾವ ಖಚಿತ ತಾರೀಖನ್ನೂ ಗೊತ್ತುಪಡಿಸಿಲ್ಲವೆಂದು ಕೇಂದ್ರ ಗೃಹ ಮಂತ್ರಿ ಶ್ರೀ ಜಿ. ಎಲ್‌. ನಂದಾರವರು ಇಂದು ಲೋಕಸಭೆಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)