ಗುರುವಾರ , ಏಪ್ರಿಲ್ 15, 2021
24 °C

ಗುರು ಪೂರ್ಣಿಮಾ ವಿಶೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಯಾಗ ಕ್ಷೇತ್ರ ಶ್ರೀ ಗಾಯತ್ರಿ ದೇವಸ್ಥಾನ:ಯಶವಂತಪುರ ಸರ್ಕಲ್ ಬಳಿ. 36ನೇ ವಾರ್ಷಿಕೋತ್ಸವ ಪ್ರಯುಕ್ತ ಗಾಯತ್ರಿ ದೇವಿಗೆ ಅಭಿಷೇಕ, ಕಲಶಾರ್ಚನೆ, ಬೆಳಿಗ್ಗೆ 6ರಿಂದ ಶ್ರೀಮಹಾಲಕ್ಷ್ಮಿ ಹೋಮ, ಶ್ರೀ ದುರ್ಗಾ ಹೋಮ, ಮಹಾಮಂಗಳಾರತಿ.ಸಂಜೆ 4.30ಕ್ಕೆ ಗುರು ಪೂರ್ಣಿಮಾ ಪ್ರಯುಕ್ತ ದೇವಸ್ಥಾನದ ಸಂಸ್ಥಾಪನಾಚಾರ್ಯರಾದ ಶ್ರೀ ಚಿದಂಬರ ದೀಕ್ಷಿತ ಸ್ವಾಮೀಜಿ ಅವರಿಗೆ ಭಕ್ತರಿಂದ ಗುರುವಂದನಾ ಕಾರ್ಯಕ್ರಮ. ಸತ್ಯನಾರಾಯಣ ಪೂಜೆ. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು.ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರ;
ಮಲ್ಲೇಶ್ವರಂ ಆಟದ ಮೈದಾನ, ಕೆ.ಸಿ.ಜನರಲ್ ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ಎದುರು, ಮಲ್ಲೇಶ್ವರ. ಬೆಳಿಗ್ಗೆ 6ಕ್ಕೆ ಅಗ್ನಿ ಹೋತ್ರಿ, ಮಹಾ ಸಂಕಲ್ಪ, ಗಣಪತಿ ಪೂಜೆ, ಪಾದುಕೆಗಳಿಗೆ ಪಂಚಾಮೃತ ಅಭಿಷೇಕ, ದತ್ತ ಸಹಸ್ರನಾಮದಿಂದ ಪಾದುಕೆಗಳಿಗೆ ಅರ್ಚನೆ. ನಂತರ ಭಜನೆ ಮತ್ತು ನೃತ್ಯ.ಶ್ರೀರಾಮಚಂದ್ರಾಪುರ ಮಠ:
ಶ್ರೀರಾಮಾಶ್ರಮ, ಗಿರಿನಗರ. ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಅವರ ನಂದನ ಚಾತುರ್ಮಾಸ್ಯ. ಶ್ರೀಗಳ ವ್ರತಸ್ವೀಕರಣ ಸಮಾರಂಭ. ಶ್ರೀಗಳಿಂದ ಗರುದೇವತಾ ಪೂಜೆ ಮತ್ತು ವ್ಯಾಸ ಮಂತ್ರಾಕ್ಷತೆಯ ಅನುಗ್ರಹ. ಬೆಳಿಗ್ಗೆ10.

ಶ್ರೀ ಸಾಯಿ ಮಂದಿರ: ಗಿರಿನಗರ. ಶ್ರೀ ಗೋಪಾಲಕೃಷ್ಣ ಬಾಬಾ ಅವರ ಸಾನ್ನಿಧ್ಯದಲ್ಲಿ ಗುರುಪೂರ್ಣಿಮಾ ಮಹೋತ್ಸವ. ಬೆಳಿಗ್ಗೆ 9ಕ್ಕೆ ಭಜನೆ, ಬಾಬಾ ಅವರಿಂದ ಆಶೀರ್ವಚನ. ಸಂಜೆ 5ಕ್ಕೆ ಭಜನೆ. ಭಗವಾನ್ ಶ್ರೀ 1008 ಆದಿನಾಥ ಜಿನಮಂದಿರ: ಚಕ್ರೇಶ್ವರಿ ಮಹಿಳಾ ಸಮಾಜ, ನಂ102, ಆನೆಬಂಡೆ ರಸ್ತೆ, ಸೌತ್‌ಎಂಡ್ ಸರ್ಕಲ್, 3ನೇ ಬ್ಲಾಕ್, ಜಯನಗರ. ಚಾತುರ್ಮಾಸ ಸಮಾರಂಭದಲ್ಲಿ ಗುರುಪೂರ್ಣಿಮಾ ಆಚರಣೆ. ಮಧ್ಯಾಹ್ನ 2.30.ಶ್ರೀ ವಿವೇಕಾನಂದ ಕಲಾ ಕೇಂದ್ರ: ತ್ರಿವೇಣಿ ಕಲಾಸಂಘ ಆವರಣ, ನಂ 98, ಮೊದಲನೇ ಮಹಡಿ, ರತ್ನವಿಲಾಸ ರಸ್ತೆ, ಬಸವನಗುಡಿ. `ಗುರುಪೂರ್ಣಿಮಾ~ ಉತ್ಸವ. ಬೆಳಿಗ್ಗೆ 10ರಿಂದ ವೇದ ಘೋಷ, ಗುರುವಂದನಾ ಭಜನೆ, ಶ್ರೀಶಂಕರಾಚಾರ್ಯ ರಚಿತ ಸೌಂದರ್ಯ ಲಹರಿ ಪಠಣ. ಗುರುಸ್ತುತಿ ಪ್ರವಚನ.ಶ್ರೀ ಶಿರಡಿ ಸಾಯಿ ಸಮಾಜ, ಶ್ರೀ ಶಿರಡಿ ಸಾಯಿ ಮಂದಿರ: ನಂ377 ಶ್ರೀ ಶಿರಡಿ ಸಾಯಿಬಾಬಾ ಮಂದಿರ ರಸ್ತೆ, ಸೋಮೇಶ್ವರಪುರಂ, ಹಲಸೂರು. `ಗುರುಪೂರ್ಣಿಮಾ~ ಆಚರಣೆಯಲ್ಲಿ ಬೆಳಿಗ್ಗೆ 8ಕ್ಕೆ ಮಹಾ ಅಭಿಷೇಕ, ಸಹಸ್ರನಾಮ ಪಠಣ, ವ್ಯಾಸ ಪೂಜೆ. ಸಂಜೆ 6.45ಕ್ಕೆ ಮಂಜಪ್ರ ಮೋಹನ್ ತಂಡದಿಂದ ಭಜನೆ.ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರ: 1ನೇ ಬ್ಲಾಕ್, ತ್ಯಾಗರಾಜನಗರ. ಗುರು ಪೂರ್ಣಿಮಾ ಮಹೋತ್ಸವದಲ್ಲಿ ಬೆಳಿಗ್ಗೆ 9ಕ್ಕೆ ವ್ಯಾಸಪೂಜೆ, ಆರತಿ ಮತ್ತು ಪ್ರಸಾದ ವಿತರಣೆ. ಸಂಜೆ 6.30ಕ್ಕೆ ಶ್ರೀಸತ್ಯನಾರಾಯಣಪೂಜೆ, ರಾತ್ರಿ 9.30ಕ್ಕೆ ಶೇಜಾರತಿ.ಶ್ರೀ ಕಾರಂಜಿ ಶ್ರೀರಾಮ ಸೇವಾ ಸಮಿತಿ ಟ್ರಸ್ಟ್: ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ ಆವರಣ, ಬಸವನಗುಡಿ. ವಿದ್ವಾನ್ ದಕ್ಷಿಣಮೂರ್ತಿ ತಂಡದಿಂದ ವೀಣಾ ವಾದನ. ಅತಿಥಿ: ಬಿ.ಬಿ.ಎಂ.ಪಿ.ಸದಸ್ಯ ಬಿ.ಎಸ್.ಸತ್ಯನಾರಾಯಣ. ಸಂಜೆ 6.ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ. ಗುರು ಪೂರ್ಣಿಮಾ ಪ್ರಯುಕ್ತ ಕೆ. ಜಿ. ಸುಬ್ರಾಯಶರ್ಮಾ ಅವರಿಂದ `ಶ್ವೇತಾಶ್ವತರೋಪನಿಷತ್ ಭಾಷ್ಯಂ~ ಉಪನ್ಯಾಸ. ಬೆಳಿಗ್ಗೆ 9.

 

ಗರುರಾಜ ಭರತನಾಟ್ಯ

ಗುರುಪೂರ್ಣಿಮಾ ಪ್ರಯುಕ್ತ ವೈಜಯಂತಿ ಕಾಶಿ ಅವರ ಶಿಷ್ಯ ಗರುರಾಜ ಅವರಿಂದ `ಗುರುಭ್ಯೋ ನಮಃ~ ಭರತನಾಟ್ಯ ಪ್ರದರ್ಶನ.

ಸ್ಥಳ: ಶಂಕರ ಮಠ, ಕೆಂಗೇರಿ. ಸಂಜೆ 6.30.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.