ಶನಿವಾರ, ಜೂನ್ 19, 2021
27 °C

ಗುಳಗಣ್ಣವರ್ ಪುತ್ರನಿಂದ ಶಾಸಕರಂತೆ ವರ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ಜನಪ್ರತಿನಿಧಿಯಲ್ಲದ ನವೀನ ಗುಳಗಣ್ಣವರ್ ಪ್ರತಿ ತಿಂಗಳು ಭಾನಾಪೂರ ಪ್ರವಾಸಿ ಮಂದಿರದಲ್ಲಿ ಕರೆಯುವ ಸಭೆಗೆ ತಪ್ಪದೆ ಹಾಜರಾಗುವ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಬಗೆಹರಿಸಲು ಇರುವ `ಜನಸ್ಪಂದನ~ ಹಾಗೂ `ಕೆಡಿಪಿ~ ಸಭೆಗಳಿಗೆ ಹಾಜರಾಗದೇ ಇರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದು ಜಿಪಂ ಸದಸ್ಯ ಈರಪ್ಪ ಕುಡಗುಂಟಿ ಆಗ್ರಹಿಸಿದರು.ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿರುವ ಸಂದರ್ಭದಲ್ಲಿ, ಕುಕನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಕೆಲವೊಂದು ಯೋಜನೆಗಳ ಅನುಷ್ಠಾನಗೊಳಿಸಲು ಶಾಸಕರ ಪುತ್ರ ನವೀನ ವಿರೋಧ ವ್ಯಕ್ತಪಿಡಿಸಿದ್ದರ ಬಗ್ಗೆ ಸ್ವಃತ ಭೂಸೇನಾ ನಿಗಮದ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಜಿಪಂ ಕ್ಷೇತ್ರದ ಅಭಿವೃದ್ದಿಯಲ್ಲಿ ಹಸ್ತಕ್ಷೇಪ ಮಾಡಲು, ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಲು ನವೀನ ಗುಳಗಣ್ಣವ ಯಾರು, ಅವರಿಗೆಲ್ಲಿದೆ ನೈತಿಕ ಹಕ್ಕು ಎಂದು ಪ್ರಶ್ನಿಸಿದರು.ಇಲಾಖೆ ಅಧಿಕಾರಿಗಳು ನವೀನ ಗುಳಗಣ್ಣವರ ಹೇಳಿದಂತೆ ನಡೆದುಕೊಳ್ಳುವುದಾದರೆ, ತಮ್ಮಸ್ಥಾನಕ್ಕೆ ರಾಜೀನಾಮೆ ಕಟ್ಟು ಅವರ ಮನೆಯಲ್ಲಿದ್ದು ಅವರ ಸೇವೆ ಮಾಡಲಿ ಎಂದು ಭೂಸೇನಾ ನಿಗಮದ ಅಧಿಕಾರಿಯನ್ನು ಕುಡಗುಂಟಿಯವರು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡರು.ಸುವರ್ಣ ಗ್ರಾಮ ಯೋಜನೆ ಜಾರಿಗೊಳಿಸುವ ಸಂದರ್ಭದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಮೂರ‌್ನಾಲ್ಕು ಹಳ್ಳಿ ಆಯ್ಕೆ ಮಾಡಿಕೊಂಡು ಕೆಲಸ ಆರಂಭಿಸಿದ್ದಾರೆ. ಆದರೆ ಕುಕನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆಲ ಗ್ರಾಮಗಳಲ್ಲಿ ಜಾರಿಗೊಳಿಸಲು ನವೀನ ಅಡ್ಡಿಪಡಿಸಿದ್ದಾರೆ. ಈ ತಾರತಮ್ಯ ನೀತಿಯಿಂದ ಆ ಗ್ರಾಮದ ಜನತೆಗೆ ನವೀನ ದ್ರೋಹ ಮಾಡಿದಂತಾಗಿದೆ ಎಂದು ಆಪಾದಿಸಿದರು.ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ತರವಲ್ಲ. ಅಷ್ಟಕ್ಕು ಈ ರೀತಿ ಅಡ್ಡಿಪಡಿಸಲು ಅವರ‌್ಯಾರು, ಶಾಸಕರ ಪುತ್ರ ಹೊರತು ಅವರೇನು ಶಾಸಕರಲ್ಲ, ಆದಾಗ್ಯೂ ನವೀನ್ ಅವರು ಶಾಸಕರಂತೆಯೇ ವರ್ತಿಸುತ್ತಿದ್ದರೂ ತಂದೆಯ ಅನಾರೋಗ್ಯದ ಕಾರಣಕ್ಕೆ ಮೌನವಹಿಸಿ ಸಹಕರಿಸುತ್ತಿದ್ದೇವೆ. ಇದೇ ಧೋರಣೆ ಮುಂದುವರೆಸಿದರೆ ಇನ್ನು ಮುಂದೆ ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡುವುದಿಲ್ಲ, ಈ ಬಗ್ಗೆ ಅಧಿಕಾರಿಗಳಾದವರು ಜಾಗೃತಿಯಿಂದ ನಡೆದುಕೊಳ್ಳಬೇಕು. ಜನಪ್ರತಿನಿಧಿಗಳಲ್ಲದ ಸರ್ಕಾರಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲದ ವ್ಯಕ್ತಿಯ ಮಾತು ಕೇಳಿಕೊಂಡು ಏನನ್ನಾದರೂ ಇಲ್ಲಸಲ್ಲದ ಕೆಲಸ ಮಾಡಿದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಪಶುಸಂಗೋಪನೆ ಹಾಗೂ ಭೂಸೇನಾ ನಿಗಮದ ಅಧಿಕಾರಿ ವಿರುದ್ಧ ಹರಿಹಾಯ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.