ಗುರುವಾರ , ಜನವರಿ 23, 2020
20 °C

ಗೂಡ್ಸ್ ರೈಲು ಚಾಲಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಡೂರು (ಬಳ್ಳಾರಿ ಜಿಲ್ಲೆ): ತೋರಣಗಲ್ ರೈಲು ನಿಲ್ದಾಣದಲ್ಲಿ ಸೋಮವಾರ ರಾತ್ರಿ ಗೂಡ್ಸ್ ರೈಲು ಸಹಾಯಕ ಚಾಲಕನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.ಗೂಡ್ಸ್ ರೈಲು ಚಾಲಕ  ಶೌರಿ ಕುಮಾರ್ ಅವರು ಸಂಜೀವ ಕಮಾರ್(24) ಅವರಿಗೆ ಇರಿದಿದ್ದರಿಂದ ಸಂಜೀವ ಮೃತಪಟ್ಟಿದ್ದಾರೆ. ಬಿಹಾರ್ ಮೂಲದ ಸಂಜೀವ್ ಕುಮಾರ್ ಮತ್ತು ಆಂಧ್ರ ಮೂಲದ ಶೌರಿ ಕುಮಾರ್ ರೈಲು  ಗೂಡ್ಸ್ ವಿಭಾಗದಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿಶ್ರಾಂತಿ ಕೊಠಡಿಯಲ್ಲಿ ಈ ಕೃತ್ಯ ನಡೆದಿದ್ದು,  ಗಾರ್ಡ ಸುಭಾನ್ ದೂರು ನೀಡಿದ್ದು, ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)