ಧಾರವಾಡ: ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರು ತಾವು ಇಷ್ಟಪಟ್ಟ ಅಭ್ಯರ್ಥಿಯನ್ನು ಕನಿಷ್ಟ ಎರಡು ಬಾರಿ ಸಂಸತ್ತಿಗೆ ಕಳಿಸಿಕೊಡುವ ಔದಾರ್ಯವುಳ್ಳವರು. ಈ ಮಾತು ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದ ಮೊದಲ ಸಂಸದ ಡಿ.ಪಿ.ಕರಮರಕರ ಅವರಿಂದ ಮೊದಲುಗೊಂಡು ಈಗ ಸಂಸದರಾಗಿರುವ ಪ್ರಹ್ಲಾದ ಜೋಶಿ ಅವರಿಗೂ ಅನ್ವಯವಾಗುತ್ತದೆ.

ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಸಂಪುಟದಲ್ಲಿ ಸಚಿವರಾಗಿದ್ದ ಡಿ.ಪಿ.ಕರಮರಕರ ಮೊದಲ ಎರಡು ಅವಧಿಗೆ ಸಂಸದರಾಗಿ ಚುನಾಯಿತರಾಗಿದ್ದರು. ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚು ಅವಕಾಶ ನೀಡಬೇಕು ಎಂಬ ವರದಿ ನೀಡಿ ಖ್ಯಾತಿಯಾದ ಸರೋಜಿನಿ ಮಹಿಷಿ ಅವರು ನಂತರ ನಡೆದ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ಜಯಶಾಲಿಯಾಗಿ ಸಂಸತ್ತನ್ನು ಪ್ರವೇಶಿಸಿದ್ದರು. ಬಳಿಕ ಚುನಾವಣಾ ಅಖಾಡಕ್ಕಿಳಿದ ಡಿ.ಕೆ.ನಾಯ್ಕರ್ ಅವರನ್ನೂ ನಾಲ್ಕು ಅವಧಿಗೆ ಧಾರವಾಡದ ಮಂದಿ ಆರಿಸಿ ಕಳಿಸಿದ್ದರು.

ಈ ಕ್ಷೇತ್ರದ ಇನ್ನೊಂದು ಮಹಿಮೆಯೆಂದರೆ, ಇಲ್ಲಿಂದ ಆಯ್ಕೆಯಾಗಿದ್ದ ಡಿ.ಪಿ.ಕರಮರಕರ ಅವರು ಜವಾಹರಲಾಲ್ ನೆಹರು ಸಂಪುಟದಲ್ಲಿಆರೋಗ್ಯ ಸಚಿವರಾಗಿದ್ದರು. ಸರೋಜಿನಿ ಮಹಿಷಿ ಅವರು ಇಂದಿರಾ ಸಂಪುಟದಲ್ಲಿ ಮೊದಲು ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ (1971–74), ನಂತರದ ಅವಧಿಯಲ್ಲಿ ಕಾನೂನು ಮತ್ತು ಕಂಪೆನಿ ವ್ಯವಹಾರಗಳ ರಾಜ್ಯ ಸಚಿವೆಯಾಗಿದ್ದರು(1974–76).

ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿ, ಎರಡು ಬಾರಿ ರಾಜ್ಯ ಸಚಿವೆಯಾಗಿ ಅಧಿಕಾರವನ್ನು ಅನುಭವಿಸಿದ್ದ ಮಹಿಷಿ, ಏಕೋ ಏನೋ ಕಾಂಗ್ರೆಸ್ ಬಗೆಗಿನ ತಮ್ಮ ನಿಷ್ಠೆಯನ್ನು ಬದಲಿಸಿ 1982ರಲ್ಲಿ ಜನತಾಪಕ್ಷ ಸೇರ್ಪಡೆಯಾಗಿ ಅದೇ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದರು. ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದ ಆ ಸಂದರ್ಭದಲ್ಲಿ ಮತದಾರರು ಅಭ್ಯರ್ಥಿಯ ಬದಲು ಪಕ್ಷವನ್ನು ನೋಡಿದ ಪರಿಣಾಮ ಕಾಂಗ್ರೆಸ್ನ ಹೊಸಮುಖ ಡಿ.ಕೆ.ನಾಯ್ಕರ್ 96,694 ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದರು.
ನಂತರ ಮಹಿಷಿ ಚುನಾವಣೆಗೆ ನಿಂತುಕೊಳ್ಳುವ ಸಾಹಸ ಮಾಡಲಿಲ್ಲ.

ಅಂದಿನಿಂದ ಶುರುವಾದ ನಾಯ್ಕರ್ ಅವರ ಗೆಲುವಿನ ಓಟ ಸತತ ನಾಲ್ಕು ಚುನಾವಣೆವರೆಗೂ ಮುಂದುವರೆಯಿತು. ಆರಂಭದಲ್ಲಿ ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು 1989 ಹಾಗೂ 1991ರ ಚುನಾವಣೆಯಲ್ಲಿ ಜನತಾದಳದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರಾದರೂ, ಎರಡು ಬಾರಿಯೂ ನಾಯ್ಕರ್ ಎದುರು ಸೋಲನ್ನಪ್ಪಿಕೊಂಡಿದ್ದರು. ಬಳಿಕ ಬಿಜೆಪಿ ಸೇರಿ ಶಾಸಕರಾದ ಬೆಲ್ಲದ ಇದೀಗ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ತಾವು ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ–ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರವನ್ನು ಪುತ್ರ ಅರವಿಂದ ಬೆಲ್ಲದ ಅವರಿಗೆ ಬಿಟ್ಟುಕೊಟ್ಟಿದ್ದಾರೆ.

ಅಯೋಧ್ಯೆ ರಾಮಮಂದಿರ ವಿವಾದದಿಂದಾಗಿಯೇ ಮುನ್ನೆಲೆಗೆ ಬಂದ ಬಿಜೆಪಿಯು 1996ರಲ್ಲಿ ಮೊದಲ ಬಾರಿಗೆ ವಿಜಯ ಸಂಕೇಶ್ವರ ಅವರನ್ನು ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ನ ‘ಬಲಾಢ್ಯ ಕೋಟೆ’ಯನ್ನು ಛಿದ್ರ ಮಾಡಿತು. 18 ವರ್ಷಗಳ ಬಳಿಕವೂ ಕಾಂಗ್ರೆಸ್ ಇಲ್ಲಿ ಗೆಲುವಿನ ಸಿಹಿ ಪೇಢಾವನ್ನು ತಿಂದಿಲ್ಲ!

ನಂಬಿದ ಅಭ್ಯರ್ಥಿಯನ್ನು ಕೈಬಿಡದ ಧಾರವಾಡ ಮತದಾರರು ಸತತ ಮೂರು ಚುನಾವಣೆಗಳಲ್ಲಿ ಸಂಕೇಶ್ವರ ಅವರನ್ನು ಗೆಲ್ಲಿಸಿದರು. 2004 ಹಾಗೂ 2009ರ ಚುನಾವಣೆಯಲ್ಲಿ (2009ರಲ್ಲಿ ಧಾರವಾಡ ಉತ್ತರ ಕ್ಷೇತ್ರ ಪುನರ್ವಿಂಗಣೆಯಾಗಿ ಧಾರವಾಡ ಎಂದು ನಾಮಕರಣಗೊಂಡಿತು) ಪ್ರಹ್ಲಾದ ಜೋಶಿ ಸತತ ಎರಡು ಬಾರಿ ಗೆಲುವನ್ನು ದಾಖಲಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಇಂದಿಗೂ ವರ್ಚಸ್ಸು ಹೊಂದಿರುವ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರನ್ನು ಜೋಶಿ ಎದುರು ಕಣಕ್ಕಿಳಿಸಲು ಹಳೆಯ ರೈತ ಸಂಘದ ಮುಖಂಡರು ‘ಮನಸ್ಸಿನಲ್ಲಿ ಮಂಡಿಗೆ’ ತಿನ್ನುತ್ತಿದ್ದರು. ಆದರೆ, ಇದಕ್ಕೆ ಸೊಪ್ಪು ಹಾಕದ ಗೌಡರು ಮತ್ತೆ ‘ಹಳೆಯ ಗಂಡನ ಪಾದವೇ ಗತಿ’ಯೆಂದು ಇತ್ತೀಚೆಗೆ ಬಿಜೆಪಿಗೆ ಹಾರಿದ್ದಾರೆ. ಈ ಮೂಲಕ ಅಧಿಕೃತವಾಗಿ ಅವರು ಮೂರನೇ ಬಾರಿಗೆ ಬಿಜೆಪಿ ಸೇರಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.