ಟ್ರಾನ್ಸ್ಫರೆನ್ಸ್- ಡಿಸೈನ್ ಸ್ಪರ್ಧೆಯು ವಾಸ್ತುಶಿಲ್ಪ ಮತ್ತು ಒಳಾಂಗಣ ವಿನ್ಯಾಸ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ನಡೆಸುವ ಸ್ಪರ್ಧೆ.

ಯುವ ವಾಸ್ತುಶಿಲ್ಪಿಗಳು, ವಿನ್ಯಾಸಕಾರರು ತಮ್ಮಲ್ಲಿನ ಪ್ರತಿಭೆ ಓರೆಗೆ ಹಚ್ಚಲು, ಸಾಮರ್ಥ್ಯ ತೋರ್ಪಡಿಸಲು ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಲಿಕೊಳ್ಳಲು ವೇದಿಕೆಯಾಗಿ ಈ ಸ್ಪರ್ಧೆಯು ಕಾರ್ಯನಿರ್ವಹಿಸುತ್ತದೆ. ನಿಪುಣ ವಾಸ್ತುಶಿಲ್ಪಿಗಳು ಈ ಪ್ರತಿಷ್ಠಿತ ಸ್ಪರ್ಧೆಯ ತೀರ್ಪುಗಾರರಾಗಿ ಪಾಲ್ಗೊಂಡು ವಿಜೇತರನ್ನು ಆಯ್ಕೆ ಮಾಡುತ್ತಾರೆ.

ವಾಸ್ತುಶಿಲ್ಪ ವಿದ್ಯಾರ್ಥಿಗಳಿಗಾಗಿ ಸೇಂಟ್-ಗೊಬೈನ್ ನಡೆಸುವ ವಾರ್ಷಿಕ ವಿನ್ಯಾಸ ಸ್ಪರ್ಧೆ ಟ್ರಾನ್ಸ್ಫರೆನ್ಸ್-2011ನ ಗ್ರಾಂಡ್ ಫಿನಾಲೆ ಈಚೆಗೆ ನಗರದ ದಯಾನಂದ ಸಾಗರ್ ಕಾಲೇಜ್ ಆಫ್ ಆರ್ಕಿಟೆಕ್ಚರ್ನಲ್ಲಿ ನಡೆಯಿತು.

ವಿದ್ಯಾರ್ಥಿ ಸಮುದಾಯ, ವಾಸ್ತುಶಿಲ್ಪಿಗಳು ಮತ್ತು ಉದ್ದಿಮೆಯನ್ನು ಒಟ್ಟುಗೂಡಿಸುವ ಟ್ರಾನ್ಸ್ಫರೆನ್ಸ್, ಸೇಂಟ್-ಗೊಬೈನ್ ಗ್ಲಾಸಸ್ನ ಒಂದು ವಿಶಿಷ್ಠ ಕಾರ್ಯಕ್ರಮ. ಇದು ವಾಸ್ತುಶಿಲ್ಪ ಮತ್ತು ಒಳಾಂಗಣ ವಿನ್ಯಾಸ ಕೋರ್ಸ್ನ ಪದವಿಪೂರ್ವ ವಿದ್ಯಾರ್ಥಿಗಳಿಗೆ ನಡೆಸುವ ಸ್ಪರ್ಧೆ. `ಹೌಸಿಂಗ್ ಫಾರ್ ದ ಫ್ಯೂಚರ್~ ಇದು ಈ ಬಾರಿಯ ಸ್ಪರ್ಧೆಯ ವಿಷಯವಾಗಿತ್ತು.

ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಪ್ರಾದೇಶಿಕ ಸುತ್ತುಗಳ ಪೂರೈಸಿದ ನಂತರ ಬೆಂಗಳೂರಿನಲ್ಲಿ ನಡೆದ `ಟ್ರಾನ್ಸ್ಫರೆನ್ಸ್-2011 ರಾಷ್ಟ್ರೀಯ ಗ್ರಾಂಡ್ ಫಿನಾಲೆ~ಯಲ್ಲಿ ಮುಂಬೈನ ಎನ್ಎಂಐಎಂಎಸ್, ಗುರಗಾಂವ್ನ ಸುಶಾಂತ್ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಜೈಪುರದ ಎಂಎನ್ಐಟಿ, ಬರೋಡಾದ ಎಂಎಸ್ಯು, ಖರಗ್ಪುರದ ಐಐಟಿ, ಚುತ್ತಾಕ್ ಮತ್ತು ಜದಯ್ಪುರದ ಎಬಿಐಟಿ ಮತ್ತು ಸ್ಥಳೀಯ ಬಿಎಂಎಸ್ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ವಿಜೇತ ತಂಡವು ರೂ.75 ಸಾವಿರ, ಮೊದಲ ರನ್ನರ್ ಅಪ್ ರೂ.50 ಸಾವಿರ ಹಾಗೂ 2ನೇ ರನ್ನರ್ ಅಪ್ ತಂಡ ರೂ.25 ಸಾವಿರ ಬಹುಮಾನ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.