ಬುಧವಾರ, ಮೇ 19, 2021
24 °C

ಗೋಮಾಳ ಉಳಿಸಿಕೊಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಗೆಂಡ್ಲ ಗ್ರಾಮ ವ್ಯಾಪ್ತಿಯಲ್ಲಿರುವ ಗೋಮಾಳವನ್ನು ಖಾಸಗಿಯವರು ವಶಪಡಿಸಿಕೊಂಡು, ಸಾಗುವಳಿ ಮಾಡುತ್ತಿದ್ದಾರೆ. ಕೂಡಲೇ ಜಾಗವನ್ನು ಗೋಮಾಳಕ್ಕೆ ತೆರವುಗೊಳಿಸಿಕೊಡಬೇಕು ಎಂದು ಆಗ್ರಹಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಹಕಾರದೊಂದಿಗೆ ಗ್ರಾಮಸ್ಥರು ವಿವಾದಿತ ಜಮೀನಿನ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಜಾಗ ಹಿಂದಿನಿಂದಲೂ ಜಾನುವಾರು ಮೇವಿಗೆ ಬಳಸಲ್ಪಡುತ್ತಿದ್ದು, ಪಹಣಿಯಲ್ಲಿ ದನಗಳ ಮುಫತ್ತು ಎಂದು ನಮೂದಾಗಿದೆ. ಆದರೆ, ಬಗರ್‌ಹುಕುಂ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಅದನ್ನು ಸಾಗುವಳಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳದಲ್ಲಿಯೇ ದಿಗ್ಬಂಧನಕ್ಕೆ ಒಳಪಡಿಸಿದರು. ಕಾನೂನಿನ ತೊಡಕು ಇರುವ ಕುರಿತು ಅಧಿಕಾರಿಗಳು ಹಾಗೂ ಪೊಲೀಸರು ತಿಳಿಸಿದರೂ ಮಣಿಯದೇ, ಕೂಡಲೇ ಗೋಮಾಳಕ್ಕೆ ಜಮೀನನ್ನು ಹಿಂತಿರುಗಿಸಬೇಕು ಎಂದು ಪಟ್ಟು ಹಿಡಿದರು.ಸಂಜೆ ನಂತರವೂ ಪ್ರತಿಭಟನೆ ಮುಂದುವರಿದಿತ್ತು.ಜೆಡಿಎಸ್ ಮುಖಂಡ ವೀರೇಶ್, ಪುಟ್ಟಸ್ವಾಮಿಗೌಡ, ಸೋಮಪ್ಪ, ಪರಸಪ್ಪ, ಗುಡ್ಡಪ್ಪ, ದಸಂಸ ಸಂಚಾಲಕ ಗುರುರಾಜ್, ಬಂಗಾರಪ್ಪ, ಬಾಲಚಂದ್ರ, ಪ್ರಕಾಶ್, ಪರಮೇಶ್ವರಪ್ಪ, ವೀರಭದ್ರಪ್ಪ, ಚಂದ್ರಪ್ಪ ಇತರರು ಹಾಜರಿದ್ದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.