ಭಾನುವಾರ, ಜನವರಿ 19, 2020
27 °C

ಗ್ರಂಥಪಾಲಕರ ನೇಮಕಾತಿ ಯಾವಾಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಇಂದು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಪದವಿಯನ್ನು ಪಡೆದ ಸಾವಿರಾರು ಯುವಕ, ಯುವತಿಯರು ಗ್ರಂಥಪಾಲಕರ ಹುದ್ದೆಗಳ ನೇಮಕಾತಿಯ ನಿರೀಕ್ಷೆಯಲ್ಲಿ ಕಾದಿದ್ದಾರೆ.ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಮತ್ತು ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ ಅವುಗಳ ನೇಮಕಾತಿ ಮರೀಚಿಕೆಯಾಗುತ್ತಿದೆ. ಈ ವಿಷಯವಾಗಿ ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ಮತ್ತು ಮಂತ್ರಿಗಳಿಗೆ ಲಿಖಿತ ಮನವಿಗಳನ್ನು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳು ನಿರಾಶರಾಗಿದ್ದಾರೆ.ಗ್ರಂಥಗಳು, ಗ್ರಂಥಾಲಯಗಳು ಮತ್ತು ಗ್ರಂಥಪಾಲಕರು ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಎಂಬುದನ್ನು ಅರಿತು ರಾಜ್ಯ ಸರ್ಕಾರವು ಅವರ  ನೇಮಕಾತಿಯ ಬಗ್ಗೆ ಗಮನಹರಿಸಲಿ.

ಪ್ರತಿಕ್ರಿಯಿಸಿ (+)