ಬಳ್ಳಾರಿ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಆಗಸ್ಟ್ 4ರಂದು ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ ಅಧಿಸೂಚನೆ ಹೊರಡಿಸಿದ್ದಾರೆ.

ಈ ಅಧಿಸೂಚನೆಯ ಪ್ರಕಾರ ಜುಲೈ 24ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಜುಲೈ 25ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂದೆಪಡೆಯಲು ಜುಲೈ 27 ಕೊನೆಯ ದಿನವಾಗಿದ್ದು, ಅಗತ್ಯ ಬಿದ್ದರೆ, ಆಗಸ್ಟ್ 4ರಂದು ಮತದಾನ ನಡೆಯಲಿದೆ.

ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಸಂಡೂರು, ಹೊಸಪೇಟೆ, ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ತಾಲ್ಲೂಕುವಾರು ಗ್ರಾಮ ಪಂಚಾಯಿತಿ ಹೆಸರು ಹಾಗು ಮೀಸಲಾತಿ ವಿವರ ಇಂತಿದೆ.

ಬಳ್ಳಾರಿ ತಾಲ್ಲೂಕಿನ ವಿವಿಧ ಗ್ರಾ.ಪಂ.ಗಳ 17 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೀಸಲಾತಿ ವಿವರ ಇಂತಿದೆ. ವೇಣಿವೀರಾಪುರ (2 ಸ್ಥಾನಗಳು) ಹಿಂ.ವರ್ಗ `ಅ' (ಮಹಿಳೆ), ಹಿಂದುಳಿದ ವರ್ಗ `ಅ'. ಹಲಕುಂದಿ- ಅನುಸೂಚಿತ ಪಂಗಡ. ತಿಮ್ಮಲಾಪುರದ 5 ಸ್ಥಾನಗಳು- ಅನುಸೂಚಿತ ಜಾತಿ, ಹಿಂ.ವರ್ಗ `ಅ' (ಮಹಿಳೆ), ಹಿಂ.ವರ್ಗ `ಅ', ಸಾಮಾನ್ಯ ಮಹಿಳೆ, ಸಾಮಾನ್ಯ.

ಏಳುಬೆಂಚಿಯ 1 ಸ್ಥಾನ- ಅನುಸೂಚಿತ ಪಂಗಡ. ಗುತ್ತಿಗನೂರು 2 ಸ್ಥಾನಗಳು- ಹಿಂದುಳಿದ ವರ್ಗ ಅ, ಹಿಂ.ವರ್ಗ `ಅ' (ಮಹಿಳೆ), ಲಕ್ಷ್ಮಿಪುರದ 1 ಸ್ಥಾನ- ಹಿಂದುಳಿದ ವರ್ಗ `ಅ', ಬೊಮ್ಮನಹಾಳ್ ಹಾಗೂ ಯರ್ರಂಗಳಿಗಿ- ಅನುಸೂಚಿತ ಜಾತಿ, ಕೆರೆಕೆರೆ-ಅನುಸೂಚಿತ ಪಂಗಡ. ನೆಲ್ಲುಡಿ- ಹಿಂದುಳಿದ ವರ್ಗ `ಅ' (ಮಹಿಳೆ), ಎಮ್ಮಿಗನೂರು- ಹಿಂದುಳಿದ ವರ್ಗ `ಅ'.

ಸಿರುಗುಪ್ಪ ತಾಲ್ಲೂಕು: ಹಚ್ಚೊಳ್ಳಿ (ಚೆಳ್ಳೆಕೂಡ್ಲೂರು)- ಹಿಂದುಳಿದ ವರ್ಗ- `ಅ', ಹಳೇಕೋಟೆ- ಅನುಸೂಚಿತ ಜಾತಿ, ಕೆ. ಸೂಗೂರು- ಅನುಸೂಚಿತ ಜಾತಿ (ಮಹಿಳೆ).

ಸಂಡೂರು ತಾಲ್ಲೂಕು: ಕುರೇಕುಪ್ಪದ 1 ಸ್ಥಾನ ಹಿಂದುಳಿದ ವರ್ಗ-'ಬ'.
ಹೊಸಪೇಟೆ ತಾಲ್ಲೂಕು: 3 ಸ್ಥಾನ. ಡಣಾಪುರ ಹಾಗೂ ಕಲ್ಲಹಳ್ಳಿ ಗ್ರಾ.ಪಂ. ಅನುಸೂಚಿತ ಜಾತಿ, ಸುಗ್ಗೇನಹಳ್ಳಿ ಗ್ರಾ.ಪಂ. ಸಾಮಾನ್ಯ ವರ್ಗ.
ಹಗರಿಬೊಮ್ಮನಹಳ್ಳಿ ತಾಲ್ಲೂಕು: ಹಗರಿಬೊಮ್ಮನಹಳ್ಳಿ ಗ್ರಾ.ಪಂ. ಸದಸ್ಯ ಸ್ಥಾನವನ್ನು ಸಾಮಾನ್ಯ ಹಾಗೂ ಕಿತ್ತೂರು ಗ್ರಾ.ಪಂ. ಅನುಸೂಚಿತ ಪಂಗಡ.
ಕೂಡ್ಲಿಗಿ ತಾಲ್ಲೂಕು: ಉಜ್ಜಿನಿ ಗ್ರಾ.ಪಂ. ಅನುಸೂಚಿತ ಜಾತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.