ಬುಧವಾರ, ಏಪ್ರಿಲ್ 14, 2021
24 °C

ಗ್ರಾಮೀಣರು ಕಾನೂನು ತಿಳಿದುಕೊಳ್ಳಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಗ್ರಾಮೀಣ ಪ್ರದೇಶದ ಜನರು ಕಾನೂನು ತಿಳಿದುಕೊಳ್ಳಲು ಮುಂದಾಗಬೇಕೆಂದು ಜೆಎಂಎಫ್‌ಸಿ ನ್ಯಾಯಾಧೀಶ ಆರ್. ರಾಘವೇಂದ್ರ ಈಚೆಗೆ ಕರೆ ನೀಡಿದರು.ತಾಲ್ಲೂಕಿನ ಕನ್ನೇಗಾಲ ಗ್ರಾಮದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಮೈಸೂರಿನ ಒಡಿಪಿ. ಸಂಸ್ಥೆ, ಹಿಮಗಿರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾನೂನು ತಿಳಿದುಕೊಳ್ಳಬೇಕಾದುದು ಎಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಸೇವಾ ಸಮಿತಿ ಅನೇಕ ಕಾರ್ಯ ಹಮ್ಮಿಕೊಳ್ಳುವುದರ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಕಾನೂನಿನ ಬಗ್ಗೆ ಯಶಸ್ವಿಯಾಗಿ ತಿಳುವಳಿಕೆ ನೀಡುತ್ತಾ ಬಂದಿದೆ ಎಂದರು.ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆಯಾ ಗ್ರಾಮದ ಜನರ ಸಕ್ರಿಯ ಭಾಗವಹಿಸುವಿಕೆಯ ಮೇಲೆ ನಿಂತಿದೆ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಪಿ. ಮಂಜುನಾಥ್ ಮಾತನಾಡಿ, ಮಹಿಳೆಯರಿಗಾಗಿ ಇರುವ ಪೂರಕ ಕಾಯಿದೆಗಳ ಬಗ್ಗೆ ತಿಳಿಸಿದರು. ಅಗತ್ಯವಿರುವವರಿಗೆ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಉಚಿತವಾಗಿ ನೆರವು ನೀಡಲಾಗುವುದು. ಇದನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು.ಹಿಮಗಿರಿ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ,    ಟ್ರಸ್ಟ್ ಮೂಲಕ ಕೈಗೊಳ್ಳುವ ಅನೇಕ ಜನಪರ ಕಾರ್ಯ ಸದುಪಯೋಗಪಡಿಸಿಕೊಳ್ಳ ಬೇಕು ಎಂದು ಹೇಳಿದರು.ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವಪ್ರಸಾದ್, ಕಾರ್ಮಿಕ ನಿರೀಕ್ಷಕ ಸುರೇಶ್, ಸತೀಶ್‌ನಾಯಕ್, ಒ.ಡಿ.ಪಿ. ಸಂಸ್ಥೆಯ ವಲಯಾಧಿಕಾರಿ ಗಂಗಾಧರಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಕನ್ನೇಗಾಲ ಸ್ವಾಮಿ, ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕ ಕಾರ್ತಿಕೇಯನ್, ಟ್ರಸ್ಟ್‌ನ ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ನಾಗಸ್ವಾಮಿ, ಜಯರಾಂ, ಒ.ಡಿ.ಪಿ. ಸಂಸ್ಥೆಯ ನಾಗಮ್ಮ, ಮಂಜುಳ, ತಾಯಮ್ಮ, ಸಿಬ್ಬಂದಿಗಳಾದ ಬಿ.ಎಲ್. ಕೃಷ್ಣನಾಯಕ್, ಸೋಮೇಶ್, ಗುರು, ರಂಗರಾಜು ಹಾಜರಿದ್ದರು.ನಾಗೇಶ್ ಸ್ವಾಗತಿಸಿದರು. ಹಿಮಗಿರಿ ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಎಂ. ಮನಸ್ ನಿರೂಪಿಸಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.