ಸಿದ್ದಾಪುರ: ಗ್ರಾಮೀಣ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ವಿಶ್ವಕ್ಕೆ ಪರಿಚಯಿಸಿದವರು ಕರಾವಳಿ ಮಂದಿ. ಸಮಾಜದಿಂದ ಪಡೆದದನ್ನು ಸಮಾಜಕ್ಕೆ ನೀಡುವ ಸಂಸ್ಕೃತಿ ನಮ್ಮದು ಎಂದು ಬೈಂದೂರು ಶಾಸಕ ಕೆ. ಲಕ್ಷ್ಮಿನಾರಾಯಣ ಹೇಳಿದರು.

ಗೋಳಿಯಂಗಡಿ ಕರುಣಾಳು ಬೆಳಕು ಸೇವಾ ಟ್ರಸ್ಟ್ ಭಗತ್ಸಿಂಗ್ ವೇದಿಕೆಯಲ್ಲಿ ಕರುಣಾ ಬೆಳಕು ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶನಿವಾರ ರಾತ್ರಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯದ ದೇವಪ್ರಕಾಶ ಮಾತನಾಡಿ, ಸಾಮಾಜಿಕ ಮೌಲ್ಯ, ಸಾಮಾಜಿಕ ಕಳಕಳಿ ಹಾಗೂ ಕರುಣೆಗಳು ಉಳಿದಿದ್ದರೆ ಗ್ರಾಮೀಣ ಭಾಗದಲ್ಲಿ ಮಾತ್ರ. ಜನಸೇವೆಯೆ ಜನಾರ್ದನ ಸೇವೆ ಎಂಬಂತೆ ಜಾತಿ ಭೇದ ಮರೆತು ಅಸಕ್ತರ ಕಣ್ಣೀರು ಒರೆಸುವ ಕಾರ್ಯಕ್ರಮಗಳು ಪ್ರತೀ ಗ್ರಾಮಗಳಲ್ಲಿ ನಡೆಯಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯ ಸರ್ಕಾರ ಮಾಡುವ ಕಾರ್ಯವನ್ನು ಟ್ರಸ್ಟ್ ಮಾಡುತ್ತಿದೆ. ಸರ್ಕಾರದ ಸವಲತ್ತುಗಳನ್ನು ಒದಗಿಸಲು, ಕಣ್ಣಾರೆ ಕಂಡರೂ ಸರ್ಟಿಫಿಕೆಟ್ ಹೇಳುವುದರೊಂದಿಗೆ ಜನರನ್ನು ಅಲೆದಾಡಿಸುವುದು ಬದಲಾಗಬೇಕಾಗಿದೆ. ದಾನಿಗಳು ನೀಡಿದ ದಾನ ನಿಜವಾದ ಫಲಾನುಭವಿಗಳು ಉಪಯೋಗಿಸಿದಾಗ ಆತ್ಮ ತೃಪ್ತಿ ದೊರೆಯುತ್ತದೆ ಎಂದರು.

ಕುಂದಾಪುರ ಶಾಸಕ, ಟ್ರಸ್ಟ್ ಗೌರವಾಧ್ಯಕ್ಷ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ವಿಮರ್ಶೆ ಇದ್ದಾಗ ಮಾತ್ರ ಸಮಾಜ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಸಮಾಜದಿಂದ ಪಡೆದ ಸಂಪತ್ತು ಸಮಾಜಕ್ಕೆ ನೀಡಿದರೆ ಜೀವನ ಸಾರ್ಥಕತೆ ಪಡೆಯುತ್ತದೆ. ಫಲಾನುಭವಿಗಳಿಗೆ ಸವಲತ್ತು ಯೋಗ್ಯ ಆಧಾರದ ಮೇಲೆ ನೀಡಬೇಕು ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಮುಂಬೈ ಕಲಾ ಜಗತ್ತಿನ ಜಯ ಕುಮಾರ್ ಶೆಟ್ಟಿ, ಉನ್ನತ ಶಿಕ್ಷಣ ಸಚಿವ ವಿ. ಎಸ್ ಆಚಾರ್ಯ, ಶಾಸಕ ಕೆ. ರಘುಪತಿ ಭಟ್, ಉಡುಪಿ ನಗರಸಭಾ ಅಧ್ಯಕ್ಷ ಕಿರಣ್ ಕುಮಾರ್, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಶೆ ಜ್ಯೋತಿ ಎಸ್. ಶೆಟ್ಟಿ ಶುಭ ಹಾರೈಸಿದರು.

ಟ್ರಸ್ಟ್ ವತಿಯಿಂದ 22 ಜನರ ಮದುವೆಗೆ ಸಹಾಯಧನ, ತರಬೇತಿ ಹೊಂದಿದ 19 ಜನರಿಗೆ ಹೊಲಿಗೆ ಯಂತ್ರ, ಇಬ್ಬರು ಅಂಗಕಲರಿಗೆ ಗಾಲಿಕುರ್ಚಿ, 9 ಮಂದಿಗೆ ವೈದ್ಯಕೀಯ ನೆರವು, 13 ಮನೆಗಳಿಗೆ ಸಿಮೆಂಟ್, 6 ಮನೆಗಳಿಗೆ ಹಂಚು, 6 ಅಶಕ್ತ ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ವಿತರಿಸಲಾಯಿತು.

ಸಾಮಾಜಿಕ ಸೇವೆಗಳಿಂದ ಮನೆಮಾತಾಗಿರುವ ಕರ್ಕು ಮಡಿವಾಳ ಬೆಳ್ವೆ ಹಾಗೂ ಪ್ರಾಥಮಿಕ ಶಿಕ್ಷಣ ನಿರ್ದೇಶಕ ದೇವಿಪ್ರಕಾಶ್ ಅವರನ್ನು ಸನ್ಮಾನಿಸಲಾುತು. ಬೆಳ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಶ್ವತ ಫಲಕ ಹಾಗೂ ರೂ 5555 ನೀಡಲಾಯಿತು.

ಆಡಳಿತ ನಿರ್ದೇಶಕ ಬೆಳ್ವೆ ವಸಂತ ಕುಮಾರ್ ಶೆಟ್ಟಿ, ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಅನಗಳ್ಳಿ ಕರುಣಾಕರ ಹೆಗ್ದೆ, ಶಿಕ್ಷಕರಾದ ಸತೀಶ್ ಚಿತ್ರಪ್ಪಾಡಿ, ತಿಮ್ಮಪ್ಪ ಶೆಟ್ಟಿ ಆರೂರು, ಶ್ರೀಕಾಂತ್ ಸಾಮಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.