ಸೋಮವಾರ, ಜನವರಿ 20, 2020
20 °C

ಗ್ರಾಮೀಣ ಮಕ್ಕಳಿಗೆ ಪ್ರತಿಭಾ ಕಾರಂಜಿ ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಅದ್ಭುತ ಅವಕಾಶ ಕಲ್ಪಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳ ಜತೆ ಜತೆಗೆ ಶಿಕ್ಷಕರೂ ಸಹ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್. ಚಂದ್ರಪ್ಪ ಕರೆ ನೀಡಿದರು.ತಾಲ್ಲೂಕಿನ ಗುಳಗುಂಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹರ್ತಿಕೋಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇದ್ದರೂ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಗಳು ಸಿಗದ ಕಾರಣ ಎಳವೆಯಲ್ಲಿಯೇ ಪ್ರತಿಭೆ ಕಮರಿ ಹೋಗುತ್ತದೆ. ಹೀಗಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದ್ದು, ಇದು ನಿರಂತರವಾಗಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲಿ ಎಂದು ಹಾರೈಸಿದರು.ಜಿ.ಪಂ. ಸದಸ್ಯ ದ್ಯಾಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ರಾಮಯ್ಯ, ಬಿ.ಆರ್. ಚಿನ್ನರಾಜು, ಗೀತಾ, ಉಮಾದೇವಿ, ಸತ್ಯನಾರಾಯಣರೆಡ್ಡಿ, ನಾಗಪ್ಪ, ಆರ್.ಟಿ. ಪರಮೇಶ್ವರಪ್ಪ, ಮಹಂತೇಶ್, ಶಿವಣ್ಣ, ತಿಪ್ಪಮ್ಮ, ತಿಮ್ಮಣ್ಣ, ಲೋಕೇಶ್, ಓಬಣ್ಣ, ಡಿ. ಮಂಜುನಾಥ್ ಮತ್ತಿತರರು ಹಾಜರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್. ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು

ಪ್ರತಿಕ್ರಿಯಿಸಿ (+)