ಸೋಮವಾರ, ಜೂನ್ 14, 2021
22 °C

ಗ್ರಾಮೀಣ ಮಹಿಳೆಯರ ಬದುಕು ಶೋಚನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಯುಗದಲ್ಲಿಯೂ ಗ್ರಾಮೀಣ ಮಹಿಳೆಯರ ಬದುಕು ಶೋಚನೀಯವಾಗುತ್ತಿರುವುದು ವಿಷಾದನೀಯ ಎಂದು ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ವಿಷಾದಿಸಿದರು.ಭಾರತೀಯ ವೈದ್ಯ ಸಂಘದ ಸ್ಥಳೀಯ ಶಾಖೆ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ಮಹಿಳಾ ದಿನಾಚರಣೆಯಿಂದ ಸ್ಫೂರ್ತಿ ಪಡೆದು ನಾವು ಸಬಲೀಕರಣದತ್ತ ಸಾಗಬೇಕು~ ಎಂದರು.ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ಜಯ ಪ್ರಸಾದ್, `ಸ್ವಾಭಿಮಾನದ ಖನಿಯಾದ ವಚನಕಾರ್ತಿ ಅಕ್ಕಮಹಾದೇವಿ, ಸಮಾಜ ಸೇವೆಗೆ ಹೆಸರಾದ ಮದರ್ ತೆರೇಸಾ ಎಲ್ಲ ಸವಾಲುಗಳನ್ನೂ ಮೀರಿ ಬೆಳೆದುದು ಮಹಿಳೆಯರಿಗೆ ಮಾದರಿ~ ಎಂದರು.ಡಾ. ಲೀಲಾವತಿ ಪ್ರಸಾದ್ ಸ್ವಾಗತಿಸಿದರು. ಡಾ. ಸುಶ್ಮಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಾರುಣಿ ವಸಂತಕುಮಾರ್ ವಂದಿಸಿದರು. ರೇಣುಕಾ ಜಯಪ್ರಸಾದ್ ನಿರೂಪಿಸಿದರು. ವೇದಿಕೆಯಲ್ಲಿ ಖಜಾಂಚಿ ಡಾ. ವಸಂತ ಕುಮಾರ್, ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.