ಗುರುವಾರ , ಜೂನ್ 24, 2021
30 °C

ಗ್ರಾಮ ಚರಿತ್ರೆ ಅಧ್ಯಯನ ಇಂದಿನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾನಪದ ವಿಶ್ವವಿದ್ಯಾಲಯವು `ಗ್ರಾಮಗಳ ಚರಿತ್ರೆ ಕೋಶ~ವನ್ನು ಸಿದ್ಧಗೊಳಿಸುತ್ತಿರುವುದು  ಸಂತಸದ ಸಂಗತಿ. ಗ್ರಾಮಗಳ ಹೆಸರಿನ ಹಿಂದೆ ಪರಂಪರೆ, ಇತಿಹಾಸವಿದೆ. ಅವುಗಳ ಅಧ್ಯಯನದಿಂದ ನಮ್ಮ ಹಿರಿಯರ ನಂಬಿಕೆ, ಆಚರಣೆ ಮತ್ತು ಜೀವನ ಕ್ರಮಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.ಸ್ಥಳನಾಮಗಳ ಅಧ್ಯಯನಕ್ಕೆ ಒಂದು ಶತಮಾನದ ಇತಿಹಾಸವಿದೆ. ಈಗ ಅದು ವೈಜ್ಞಾನಿಕ ರೂಪ ಪಡೆಯುತ್ತಿರುವುದು ಉತ್ತಮ ಬೆಳವಣಿಗೆ. ಡಾ. ಶಂ.ಬಾ. ಜೋಶಿ ಸ್ಥಳನಾಮಗಳ ಚರಿತ್ರೆಯನ್ನು ತೆರದಿಟ್ಟ ಮೊದಲಿಗರು.ಬ್ರಿಟಿಷರು ನಮ್ಮ ದೇಶದ ಸಂಸ್ಕೃತಿಯ ಪರಂಪರೆಯನ್ನು ತಿಳಿದುಕೊಳ್ಳಲು ಸ್ಥಳೀಯರಿಂದ ಬರೆಯಿಸಿದ `ಕೈಪಿಯತ್ತು~ಗಳಲ್ಲಿ ಶಾಸ್ತ್ರೀಯ ಅಂಶಗಳ ಕೊರತೆ ಇದೆ. ಇದರಿಂದಾಗಿ ಅನೇಕರು ಚೆರಿತ್ರೆ ಕೋಶದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. `ಗ್ರಾಮಗಳ ಚರಿತ್ರೆ ಕೋಶ~ ರಚನೆಗೆ ಮುನ್ನ ಈ  ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವ ಅಗತ್ಯವಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.