ಚಿಕ್ಕೋಡಿ: ದೇಶದಲ್ಲೇ ಪ್ರಥಮವಾಗಿ ರಾಜ್ಯದ ಹಾವೇರಿ ಜಿಲ್ಲೆ ಗೊಟಗೋಡಿಯಲ್ಲಿ ಸ್ಥಾಪನೆಯಾಗಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಕೈಗೆತ್ತಿಕೊಂಡಿರುವ ರಾಜ್ಯದ ಇಡೀ ಗ್ರಾಮಗಳ ಸಮಗ್ರ ಮಾಹಿತಿಗಳನ್ನು ಒಳಗೊಂಡ `ಕರ್ನಾಟಕ ಗ್ರಾಮ ಚರಿತ್ರೆ ಕೋಶ' ರಚನೆ ಎಂಬ ವಿನೂತನವಾದ ಯೋಜನೆಯಡಿ ತಾಲ್ಲೂಕಿನಲ್ಲಿ ಗ್ರಾಮಗಳ ಸಮೀಕ್ಷೆ ಕಾರ್ಯ ನಡೆದಿದೆ.

ಕರ್ನಾಟಕದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 270 ನಗರ ಹಾಗೂ 29,406 ಗ್ರಾಮಗಳ ಚರಿತ್ರೆ ಯನ್ನು ದಾಖಲಿಸುವ ಕಾರ್ಯ ಕಳೆ ದೊಂದು ತಿಂಗಳಿನಿಂದ ನಡೆದಿದೆ. ವಿಶ್ವ ವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಅವರ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಸಮಿತಿಯಡಿ ಆಯಾ ಜಿಲ್ಲೆಗಳಿಗೆ ಒಬ್ಬ ಜಿಲ್ಲಾ ಸಂಪಾದಕರನ್ನು ನಿಯೋಜನೆ ಮಾಡಲಾಗಿದೆ. ಅವರ ಮಾರ್ಗದರ್ಶನದಲ್ಲಿ ಪ್ರತಿ ತಾಲ್ಲೂಕಿನಲ್ಲಿ ಇಬ್ಬರು ಕ್ಷೇತ್ರ ತಜ್ಞರು ಗ್ರಾಮಗಳ ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿ ಕೊಂಡಿದ್ದಾರೆ.

ಕ್ಷೇತ್ರ ತಜ್ಞರು ಆಯಾ ಗ್ರಾಮದ ಹಿರಿಯರು, ಅರ್ಚಕರು, ಶಾಲಾ ಮಾಸ್ತರರು, ಶಾನುಭೋಗರು, ಪಟೇ ಲರು, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿದಂತೆ ಸರ್ವೇ, ಪ್ರಾಚ್ಯವಸ್ತು, ಕೃಷಿ, ಶಿಕ್ಷಣ, ನೀರಾವರಿ, ಅರಣ್ಯ, ಪ್ರವಾಸೋದ್ಯಮ, ವಾರ್ತಾ ಮತ್ತು ಪ್ರಚಾರ ಇಲಾಖೆಗಳು, ಸ್ತ್ರೀಶಕ್ತಿ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಮೂಲಗಳನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಗ್ರಾಮಗಳ ಸ್ಥಳನಾಮ ಚರಿತ್ರೆ, ವಿಶಿಷ್ಟ ಜನಸಮುದಾಯಗಳು, ಅಲ್ಲಿಯ ಜನರ ಆಡುಭಾಷೆ, ಜಾನಪದ ಮತ್ತು ಸಾಂಸ್ಕೃತಿಕ ವಿಶಿಷ್ಟಾಂಶಗಳು, ಗ್ರಾಮ ಗಳಲ್ಲಿರುವ ಐತಿಹಾಸಿಕ ಶಿಲಾಶಾಸನ ಗಳು, ಶಾಸನಪತ್ರಗಳು, ಕೋಟೆ ಕೊತ್ತಲುಗಳು, ಹಳ್ಳಕೊಳ್ಳ, ಬೆಟ್ಟಗುಡ್ಡ, ಕಲಾ ಪರಂಪರೆ, ಐತಿ ಹಾಸಿಕ ದೇವಸ್ಥಾನಗಳು, ಹಬ್ಬ ಆಚರಣೆಗಳು, ಸ್ವತಂತ್ರ ಚಳುವಳಿಗಾರರ ವಿವರ, ಗ್ರಾಮಗಳಲ್ಲಿ ಮೂಲತಃ ಉಳಿದುಕೊಂಡು ಬಂದಿರುವ ಕಸುಬು ಗಳು ಮತ್ತು ಬದಲಾದ ಸಂದರ್ಭದಲ್ಲಿ ರೂಢಿಸಿಕೊಂಡ ಕಸುಬುಗಳು, ಗ್ರಾಮನಾಮ ನಿಷ್ಪನ್ನದ ಸಂದರ್ಭದಲ್ಲಿ ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ ಕಾರಣಗಳು, ಸಸ್ಯ ಸಂಬಂಧಿ, ಪ್ರಾಣಿ ಸಂಬಂಧಿ, ಜನಸಂಬಂಧಿ ಕಾರಣಗಳನ್ನು ದಾಖಲಿಸಲಾಗುತ್ತಿದೆ.

ಮುಳುಗಡೆ ಹಳ್ಳಿಗಳು, ವಿವಿಧ ಕಾರಣಗಳಿಗಾಗಿ ಸ್ಥಳಾಂತರಗೊಂಡ ಹಳ್ಳಿಗಳು ಮತ್ತು ಮೂಲ ಗ್ರಾಮದಿಂದ ವಿಸ್ತರಿಸಿಕೊಂಡ ಹಳ್ಳಿಗಳ ವಿವರಗಳು, ಸಂಸ್ಕೃತಿಕರಣದ ಹಿನ್ನೆಲೆಯಲ್ಲಿ ಹೆಸರು ಬದಲಾಯಿಸಿಕೊಂಡ ಗ್ರಾಮಗಳ ಮೂಲ ಹೆಸರುಗಳನ್ನು ಮಾಹಿತಿಯಲ್ಲಿ ಉಲ್ಲೇಖಿಸುವ ಕಾರ್ಯ ನಡೆದಿದೆ. ಕ್ಷೇತ್ರ ತಜ್ಞರು ಗ್ರಾಮಗಳ ಮಾಹಿತಿ ಸಂಗ್ರಹಿಸಿ ಜಿಲ್ಲಾ ಸಂಪಾದಕರಿಗೆ ಕಿರು ಲೇಖನಗಳನ್ನು ಪರಿಶೀಲನೆಗೆ ಸಲ್ಲಿಸುತ್ತಾರೆ. ಜಿಲ್ಲಾ ಸಂಪಾದಕರು ಕ್ಷೇತ್ರ ತಜ್ಞರು ಸಂಗ್ರಹಿಸಿರುವ ಮಾಹಿತಿ ಸರಿಯೇ ತಪ್ಪೇ ಎಂಬುದನ್ನು ಶಾಸನಗಳು, ಕೈಫಿಯತ್ತು, ಗೆಜೆಟಿಯರ್, ವಿಶ್ವಕೋಶಗಳು, ಸರ್ಕಾ ರದ ನಕಾಸೆಗಳು ಮೊದಲಾದ ಆನು ಷಂಗಿಕ ಆಕರಗಳ ಮೂಲಕ ಖಚಿತ ಪಡಿಸಿಕೊಳ್ಳುತ್ತಾರೆ. ಕ್ಷೇತ್ರ ತಜ್ಞರು ನಮೂನೆಯಲ್ಲಿ ಸಲ್ಲಿಸಿದ ಮಾಹಿತಿ ಯನ್ನು ವೆಬ್ಸೈಟ್ಗೆ ಅಳವಡಿಸುವ ಉದ್ದೇಶವನ್ನೂ ಹೊಂದಲಾಗಿದೆ.

`ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು 6 ತಿಂಗಳ ಕಾಲಾವಧಿಯಲ್ಲಿ ಕ್ಷೇತ್ರ ತಜ್ಞರ ಮೂಲಕ ರಾಜ್ಯದ ಪ್ರತಿ ಗ್ರಾಮಗಳ ಸಮೀಕ್ಷೆ ನಡೆಸಿ ಗ್ರಾಮಗಳ ಮಾಹಿತಿ ಗಳನ್ನು ಒಳಗೊಂಡ ಸುಮಾರು 2000 ಪುಟಗಳ `ಗ್ರಾಮ ಚರಿತ್ರೆ ಕೋಶ'ವನ್ನು ಆಯಾ ಜಿಲ್ಲೆಗೆ ಪ್ರತ್ಯೇಕವಾಗಿ ಪ್ರಕಟಿ ಸಲಿದೆ. ಹಲವು ಹಳ್ಳಿಗಳು ಆಧುನಿ ಕತೆಯನ್ನು ಮೈಗೂಡಿಸಿಕೊಳ್ಳುವ ಜತೆಗೆ ದೇಶಿಯ ಸಂಸ್ಕೃತಿ, ಸಂಪ್ರದಾಯಗಳನ್ನೂ ಕಾಪಾಡಿಕೊಂಡು ಶುದ್ಧ ಹಳ್ಳಿಗಳಾಗಿ ಉಳಿದುಕೊಂಡಿವೆ. ಅಂತಹ ಹಳ್ಳಿಗಳನ್ನು ದಾಖಲಿಸಿ ಮುಂದಿನ ಜನಾಂಗಕ್ಕೆ ಗ್ರಾಮೀಣ ಸೊಗಡಿನ ಜಾನಪದ ಪರಂಪರೆಯನ್ನು ಪರಿಚಯಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶ ವಾಗಿದೆ' ಎನ್ನುತ್ತಾರೆ ಬೆಳಗಾವಿ ಜಿಲ್ಲಾ ಸಂಪಾದಕ ಡಾ.ಸಿ.ಕೆ.ನಾವಲಗಿ.

`ತಮ್ಮ ಗ್ರಾಮಗಳಿಗೆ ಬರುವ ಕ್ಷೇತ್ರ ತಜ್ಞರಿಗೆ ಗ್ರಾಮದ ಇತಿಹಾಸ ಹಾಗೂ ಪ್ರಚಲಿತ ಬೆಳವಣಿಗೆಗಳ ಕುರಿತು ವಾಸ್ತವಿಕ ಮಾಹಿತಿಯನ್ನು ನೀಡಿ ವಿಶ್ವವಿದ್ಯಾಲಯದ ಕಾರ್ಯಯೋಜನೆ ಯನ್ನು ಯಶಸ್ವಿಗೊಳಿಸಲು ಕೈಜೋಡಿ ಸಬೇಕು' ಎಂದು ಅವರು ಸಾರ್ವಜನಿ ಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.