ಶುಕ್ರವಾರ, ಜೂನ್ 18, 2021
27 °C
‘ಸ್ಲೇವ್‌’ ಅತ್ಯುತ್ತಮ ಚಿತ್ರ

ಗ್ರ್ಯಾವಿಟಿಗೆ ಏಳು ಆಸ್ಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಸ್‌ ಏಂಜಲಿಸ್‌ (ಪಿಟಿಐ): ಅಮೆ­ರಿಕದ ಕಪ್ಪುವರ್ಣೀಯರ ಗುಲಾಮ­ಗಿರಿ,  ಯಾತನಾ­ಮಯ ಹೋರಾ­ಟದ ಕರಾಳ  ಮುಖಗಳನ್ನು  ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಬಿಡಿ­ಸಿಟ್ಟ ಸ್ಟೀವ್‌ ಮ್ಯಾಕ್‌ ಕ್ವೀನ್ಸ್‌ ನಿರ್ದೇ­­ಶನದ ‘12 ಇಯರ್‍ಸ್‌ ಎ ಸ್ಲೇವ್‌’ ಚಿತ್ರ ಪ್ರಸಕ್ತ ವರ್ಷದ ಅತ್ಯು­ತ್ತಮ ಇಂಗ್ಲಿಷ್‌ ಚಿತ್ರ ಎಂಬ ಹೆಗ್ಗಳಿಕೆಗೆ  ಪಾತ್ರ­ವಾಗಿದ್ದು, ಪ್ರತಿ­ಷ್ಠಿತ ಆಸ್ಕರ್‌ ಪ್ರಶಸ್ತಿ ಬಾಚಿಕೊಂಡಿದೆ.



ಕಪ್ಪುವರ್ಣೀಯ ನಿರ್ದೇಶಕ­ರೊ­ಬ್ಬರು ನಿರ್ದೇಶಿಸಿದ ಚಿತ್ರವೊಂದು ಇದೇ ಮೊದಲ ಬಾರಿಗೆ ಆಸ್ಕರ್‌ ಪ್ರಶಸ್ತಿ ಪಡೆ­ಯುವ ಮೂಲಕ ಇತಿಹಾಸ ಸೃಷ್ಟಿಸಿದೆ.



ಹಾಲಿವುಡ್‌ ಚಿತ್ರರಂಗ ಶತಮಾನ­ಗ­­ಳಿಂದ ಕಡೆಗಣಿಸುತ್ತಲೇ ಬಂದ ಅಮೆ­ರಿಕದ  ಕಪ್ಪುವರ್ಣೀಯರ ಗುಲಾಮ­ಗಿರಿ­­ಯಂ­ತಹ ಗಂಭೀರ ಮತ್ತು  ನಿರ್ಲ­ಕ್ಷಿತ ವಿಷಯ­ವನ್ನು  ಆಯ್ಕೆ ಮಾಡಿ­ಕೊಂಡ ಸ್ಟೀವ್‌ ಸುಂದರವಾಗಿ ಕಟ್ಟಿ­ಕೊಟ್ಟಿ­ದ್ದಾರೆ. ಲಾಸ್‌ ಏಂಜಲೀಸ್‌­ನಲ್ಲಿ ನಡೆದ ೮೬ನೇ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ 44 ವರ್ಷದ  ಸ್ಟೀವ್‌, ಅಮೆರಿಕದಲ್ಲಿ ಇನ್ನೂ ಎರಡು ಕೋಟಿ ಜನರು ಗುಲಾಮ­ರಾಗಿ­ದ್ದಾರೆ. ಗುಲಾಮ­ಗಿರಿಯ ನೋವನ್ನು ಉಂಡ­ವರಿಗೆ  ತಮ್ಮ ಚಿತ್ರದ ಪ್ರಶಸ್ತಿಯನ್ನು ಅರ್ಪಿ­ಸುವುದಾಗಿ ಹೇಳಿದರು.



ಬಾಹ್ಯಾಕಾಶದಲ್ಲಿ ನಡೆಯುವ ದುರಂತ ನಾಟಕೀಯ ಘಟನೆಗಳನ್ನು ಕುತೂಹಲ­ಕಾರಿ­ಯಾಗಿ ಚಿತ್ರಿಸಿದ ‘ಗ್ರ್ಯಾವಿಟಿ’ 3ಡಿ ಚಿತ್ರ ವಿವಿಧ ವಿಭಾಗ­ಗಳಲ್ಲಿ ಏಳು ಪ್ರಶಸ್ತಿಗಳನ್ನು ತನ್ನ­ದಾಗಿಸಿ­­­­ಕೊಂಡಿದೆ. ಉತ್ತಮ ನಿರ್ದೇ­ಶಕ ಪ್ರಶಸ್ತಿ ಕೂಡಾ ‘ಗ್ರ್ಯಾವಿಟಿ’ ನಿರ್ದೇ­ಶಕ ಅಲ್ಫಾನ್ಸೋ ಕ್ಯೂರಾನ್‌ ಅವರ ಪಾಲಾಗಿದೆ. ಈ ಚಿತ್ರದಲ್ಲಿ ಉನ್ನತ ತಾಂತ್ರಿಕ ಪರಿಣತಿ­ಯನ್ನು ತೆರೆ ಮೇಲೆ ಅನಾ­ವರಣ­­ಗೊಳಿಸಿಸುವ ಮೂಲಕ 52 ವರ್ಷದ ಕ್ಯೂರಾನ್‌ ಪ್ರೇಕ್ಷ­ಕ­­ರನ್ನು ಮಂತ್ರ ಮುಗ್ಧ­ರನ್ನಾ­ಗಿಸಿ­ದ್ದರು.



ವೂಡಿ ಅಲೆನ್ಸ್‌ ನಿರ್ದೇಶನದ ‘ಬ್ಲೂ ಜಾಸ್ಮಿನ್‌’ ಚಿತ್ರದಲ್ಲಿ ಹತಾಶ ಶ್ರೀಮಂತ ಮಹಿಳೆಯ ಪಾತ್ರವನ್ನು ಮನೋಜ್ಞ­ವಾಗಿ ಅಭಿನಯಿಸಿದ ನಟಿ ಕೇಟ್‌ ಬ್ಲಾಂಚೆಟ್‌ ‘ಉತ್ತಮ ನಟಿ’ ಪ್ರಶಸ್ತಿ ಪಡೆದಿದ್ದಾರೆ.



ಏಡ್ಸ್‌ ಜಾಗೃತಿಗಾಗಿ ಹೋರಾಡು­ತ್ತಿ­ರುವ ಸಾಮಾಜಿಕ ಕಾರ್ಯಕರ್ತ ರಾನ್‌ ವೂಡ್‌ರೂಫ್‌ ನೈಜ ಜೀವನ  ಕಥೆ­ಯನ್ನು ಆಧರಿಸಿದ ಚಿತ್ರದ ಅಭಿನಯ­ಕ್ಕಾಗಿ  ನಾಯಕ ನಟ ಮ್ಯಾಥ್ಯೂ ಮ್ಯಾಕ್‌ ಕೊನಾಗ್‌ ‘ಉತ್ತಮ ನಟ’ ಪ್ರಶಸ್ತಿ ಬಾಚಿಕೊಂಡಿದ್ದಾರೆ.



  ‘12 ಇಯರ್‍ಸ್‌ ಎ ಸ್ಲೇವ್‌’ ಚಿತ್ರದ ಅಭಿನಯಕ್ಕಾಗಿ ಲುಪಿಟಾ ನ್ಯಾಂಗೊ ಉತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು. ಪತ್ರಕರ್ತನ ಜೀವನ ಕುರಿತಾದ ಇಟಲಿಯ ‘ದಿ ಗ್ರೇಟ್‌ ಬ್ಯೂಟಿ’ ವಿದೇಶಿ ಚಿತ್ರಗಳ ವಿಭಾಗದ ಪ್ರಶಸ್ತಿ ಪಡೆಯಿತು.ಇದಕ್ಕೂ ಮೊದಲು ಈ ವಿಭಾಗದಲ್ಲಿ ಇಟಲಿಯ  27 ಚಿತ್ರಗಳು ಪ್ರಶಸ್ತಿ ಪಡೆದಿವೆ.



  ಭಾರತದ ಗುಜರಾತಿ ಚಿತ್ರ ‘ದಿ ಗುಡ್‌ ರೋಡ್‌’ ವಿದೇಶಿ ವಿಭಾಗ ಚಿತ್ರದಲ್ಲಿ ಪ್ರವೇಶ ಪಡೆದಿತ್ತು. ಆದರೆ, ಪೈಪೋಟಿ ನೀಡಲು ಅದು ವಿಫಲವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.