ಶನಿವಾರ, ಮೇ 8, 2021
19 °C

ಚಂಡಮಾರುತ: ಸತ್ತವರ ಸಂಖ್ಯೆ 41ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ(ಎಎಫ್‌ಪಿ):  ಜಪಾನ್‌ನ ಮೇಲೆರೆಗಿದ ಟಲಾಸ್ ಚಂಡಮಾರುತ ದಿಂದ ಸತ್ತವರ ಸಂಖ್ಯೆ 41ಕ್ಕೆ ಏರಿದೆ. ಪಶ್ಚಿಮ ಜಪಾನ್‌ನಲ್ಲಿ  ಸಾವಿರಾರು ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.ಇದರಿಂದ ಭಾರಿ ಮಳೆ ಸುರಿಯುತ್ತಿದ್ದು, ಹಲವು ಕಡೆ ಭೂಕುಸಿತದ ಸಮಸ್ಯೆ ಕಾಡುತ್ತಿದೆ.  ರಸ್ತೆಗಳು  ಕೊಚ್ಚಿಹೋಗಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ವಕಯಾಮಾ ಪ್ರಾಂತ್ಯದಲ್ಲಿ 4,500ಮತ್ತು ನಾರಾದಲ್ಲಿ 400 ಮಂದಿ ನೀರಿನ ಮಧ್ಯೆ ಸಿಲುಕಿಕೊಂಡಿದ್ದು ರಸ್ತೆ ಹಾಗೂ ವಾಯು ಸಂಚಾರ ಕಷ್ಟಕರವಾಗಿರುವುದರಿಂದ ರಕ್ಷಣೆ ಕಾರ್ಯ ನಿಧಾನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.