ಶನಿವಾರ, ಜನವರಿ 18, 2020
23 °C

ಚಂಡಮಾರುತ: 12 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯೂಸ್ಟನ್ (ಪಿಟಿಐ): ಒಕ್ಲಾಹಾಮ  ಮತ್ತು ನೆರೆಯ ನಗರಗಳ ಮೇಲೆ ಚಂಡಮಾರುತದ ಅಬ್ಬರ ಮುಂದುವರಿದಿದ್ದು, ಸತ್ತವರ ಸಂಖ್ಯೆ 12ಕ್ಕೆ ಏರಿದೆ.ಚಂಡಮಾರುತದಿಂದಾಗಿ ಒಕ್ಲೊಹಾಮ ನಗರದಲ್ಲಿ ಪ್ರವಾಹ ಉಂಟಾಗಿದೆ. ಒಕ್ಲಾಹಾಮ ವೈದ್ಯಕೀಯ ಪರೀಕ್ಷಕರ ಕಚೇರಿಯ ಅಧಿಕಾರಿಗಳು ಚಂಡಮಾರುತಕ್ಕೆ ಒಂಬತ್ತು ಮಂದಿ ಬಲಿಯಾಗಿರುವುದನ್ನು ದೃಢಪಡಿಸಿದ್ದಾರೆ.ಮಿಸ್ಸೌರಿಯ ಅಧಿಕಾರಿಗಳು ಮೂವರು ಸಾವನ್ನಪ್ಪಿರುವುದಾಗಿ ಖಚಿತಪಡಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಪ್ರತಿಕ್ರಿಯಿಸಿ (+)