ಬೆಂಗಳೂರು: ‘ಕಲಾವಿದ ಗಾಳಿಯಂತೆ, ನೀರಿನಂತೆ ಚಲನಶೀಲನಾಗಬೇಕು. ಚಲನಶೀಲತೆ ಮತ್ತು ಪ್ರಯೋಗಗಳೇ ನನ್ನ ಬದುಕು ಕಟ್ಟಿವೆ’ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಲಾವಿದರು ಒಂದೇ ಕೆಲಸದಲ್ಲಿ ಶಾಶ್ವತವಾಗಿ ನಿಲ್ಲಬಾರದು. ಏಕತಾನತೆ ಬಂದು ಬಿಡುತ್ತದೆ. ಆಗ ಪ್ರಯೋಗಾತ್ಮಕ ಮನಸ್ಸು ಇಲ್ಲವಾಗುತ್ತದೆ. ಕಲಾವಿದರು ಯಾವುದೇ ಒಂದು ವಿಷಯ ಅಥವಾ ಸ್ಥಾನಕ್ಕೆ ಅಂಟಿಕೊಳ್ಳಬಾರದು. ಅವರ ಬದುಕಲ್ಲಿ ಎಂದಿಗೂ ಚಲನಶೀಲತೆಯನ್ನು ಸಾಯಲು ಬಿಡಬಾರದು’ ಎಂದು ನುಡಿದರು.

‘ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದೆ. ಆಗ, ಸಮುದಾಯ ಸಂಘಟನೆಯ ಸ್ನೇಹಿತರು ಪರಿಚಯವಾದರು. ಸಿಜಿಕೆ, ಕಿ.ರಂ.ನಾಗರಾಜ್ ಅವರಂತಹವರ ಪರಿಚಯವಾಯಿತು. ಸಮುದಾಯದ ಸಹವಾಸವೇ ನನ್ನ ಬದುಕಿಗೆ ಒಂದು ತಿರುವು ನೀಡಿತು. ಚಳವಳಿಗಳ ಮೂಲಕವೇ ನನ್ನ ಬದುಕು ಕಂಡುಕೊಂಡೆ’ ಎಂದರು.

‘ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು 5–6 ಬಾರಿ ಓದಿದ್ದೆ. ಆಗ, ಅದನ್ನು ನಾಟಕವಾಗಿ ಮಾಡಬಹುದೆಂಬ ಕಲ್ಪನೆಯೂ ನನಗೆ ಇರಲಿಲ್ಲ. ಆದರೆ, ಪ್ರಯೋಗಾತ್ಮಕವಾಗಿ ಏನಾದರೂ ಮಾಡಬೇಕೆಂಬ ಹಂಬಲ ಮತ್ತು ರಂಗಾಯಣದ ಸಹವಾಸ ಮಲೆಗಳಲ್ಲಿ ಮದುಮಗಳು 9 ಗಂಟೆಯ ನಾಟಕವನ್ನು ಮಾಡುವಂತೆ ಪ್ರೇರಣೆ ನೀಡಿತು’ ಎಂದರು.

‘ಧಾರವಾಡ, ಶಿವಮೊಗ್ಗ, ಗುಲ್ಬರ್ಗ, ಕೇಂದ್ರಗಳು ಸೇರಿದಂತೆ ರಂಗಾಯಣವನ್ನು ಕರ್ನಾಟಕದ ಮೂಲೆ ಮೂಲೆಗೂ ತಲುಪಿಸಬೇಕೆಂಬುದು ಕಾರಂತರ ಕನಸಾಗಿತ್ತು. ಆದ್ದರಿಂದ, ಬೆಂಗಳೂರಿನಲ್ಲಿಯೂ ರಂಗಾಯಣವನ್ನು ನಿರ್ಮಾಣ ಮಾಡಬೇಕಿದೆ’ ಎಂದು ಹೇಳಿದರು. ‘ನಾಟಕ ಕ್ಷೇತ್ರದಲ್ಲಿ ಸಂಭಾವಿತರು, ಅತೀ ಸೂಕ್ಷ್ಮ ಸ್ವಭಾವದವರಿಗಿಂತ, ಚೂಟಿ, ತುಂಟರು, ಕಿಡಿಗೇಡಿಗಳಿಂದ ನಾಟಕಕ್ಕೆ ಜೀವ ತುಂಬಬಹುದು. ಅಂತಹವರು ಮೈಚಳಿ ಬಿಟ್ಟು ನಟಿಸುತ್ತಾರೆ. ನಾಟಕ ಕ್ಷೇತ್ರಕ್ಕೆ ಅಂತಹವರ ಅಗತ್ಯವಿದೆ’ ಎಂದರು.

‘ಇಂದಿನ ಕನ್ನಡ ಸಿನಿಮಾಗಳಲ್ಲಿ ಕನ್ನಡದ ಅಸ್ಮಿತೆಯೇ ಇಲ್ಲದಂತಾಗಿದೆ. ಸಿನಿಮಾಗಳಲ್ಲಿ ನಿರ್ದೇಶಕ ಮುಖ್ಯನಲ್ಲ. ನಟ ಮಾತ್ರ ಮುಖ್ಯವಾಗುತ್ತಾನೆ. ಆದರೆ, ನಾಟಕಗಳಲ್ಲಿ ನಿರ್ದೇಶಕ ಮತ್ತು ನಟ ಇಬ್ಬರೂ ಮುಖ್ಯರಾಗುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.