ಸೋಮವಾರ, ಜೂನ್ 21, 2021
29 °C

ಚಾರ್ಲ್ಸ್‌ ಶೋಭ್‌ರಾಜ್‌ಗೆ ಕಗ್ಗಂಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಠ್ಮಂಡು (ಪಿಟಿಐ): ಕುಖ್ಯಾತ ಕೊಲೆ­ಗಾರ ಚಾರ್ಲ್ಸ್‌ ಶೋಭ್‌ರಾಜ್‌ (70) ಜೈಲಿ­ನಿಂದ ಬಿಡು­ಗಡೆ­­ ನಿರೀಕ್ಷೆ­ಯಲ್ಲಿ­­ರುವಾಗಲೇ ನೇಪಾಳ ಪೊಲೀ-ಸರು ಆತನ ಮೇಲೆ ಮತ್ತೊಂದು ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ. ಕೆನಡಾದ ಪ್ರವಾಸಿಯೊಬ್ಬನ ಕೊಲೆಗೆ ಸಂಬಂಧಿ­ಸಿದಂತೆ ಶೋಭ್‌ರಾಜ್‌ ಹೇಳಿಕೆ  ಪಡೆದು­­­ಕೊಂ­ಡಿರುವ ಪೊಲೀಸರು, ಭಕ್ತ­ಪುರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕ­ರಣ ದಾಖಲಿಸಿದ್ದಾರೆ.ಅಮೆರಿಕ ಮಹಿಳೆಯ ಕೊಲೆ ಪ್ರಕ­ರಣ­ದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ­ರುವ ಶೋಭ್‌ರಾಜ್‌, ಈಗಾಗಲೇ ಶಿಕ್ಷೆಯ ಅರ್ಧದಷ್ಟು ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾನೆ. ವಯಸ್ಸಾಗಿರುವುದರಿಂದ ಶಿಕ್ಷೆಯ ಪ್ರಮಾಣ ಕಡಿಮೆಯಾಗಿ ಬೇಗ ಬಿಡು­ಗಡೆ­ಯಾಗುವ ನಿರೀಕ್ಷೆ ಇತ್ತು. ಆದರೆ ಹೊಸ ಪ್ರಕರಣ ದಾಖಲಾದ ಕಾರಣ ಬಿಡು­ಗಡೆ ಸಾಧ್ಯತೆ ಕಡಿಮೆ­ಯಾ­ಗ­ಲಿವೆ ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.