ಮಂಗಳವಾರ, ಜೂನ್ 15, 2021
21 °C
ಜಿ.ಎಸ್‌.ಮಂಜುನಾಥ್‌, ತಿಪ್ಪೇಸ್ವಾಮಿಗೆ ಟಿಕೆಟ್‌ ನೀಡಲು ಬೆಂಬಲಿಗರ ಆಗ್ರಹ

ಚಿತ್ರದುರ್ಗ ಕ್ಷೇತ್ರ: ಸ್ಥಳೀಯರಿಗೆ ಟಿಕೆಟ್‌ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ನಗರದ ರಂಜಿತ್ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಸ್ಥಳೀಯರಾಗಿರುವ ಜಿ.ಎಸ್.ಮಂಜುನಾಥ್ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಆಗ್ರಹಿಸಿದರೆ, ಡಾ.ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಆಗ್ರಹಿಸಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ತಿಪ್ಪೇಸ್ವಾಮಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.ಈ ಸಂಬಂಧ ಸಭೆಯಲ್ಲಿ ಮಾತನಾಡಿದ ಪುರಸಭಾ ಸದಸ್ಯ ಎ.ಮಂಜುನಾಥ್, ಜಿ.ಪ್ರೇಮ್ ಕುಮಾರ್, ತಾ.ಪಂ. ಸದಸ್ಯ ಎಚ್.ವಿ.ವೆಂಕಟೇಶ್, ಜಿ.ಎಲ್.ಮೂರ್ತಿ, ಕೆ.ಗುರುಶ್ಯಾಮಯ್ಯ, ಈ.ಮಂಜುನಾಥ್, ಜಬೀವುಲ್ಲಾ, ಎಂ.ಡಿ.ಚಂದ್ರ ಶೇಖರ್, ದಯಾನಂದ್, ಸಾದತ್ ವುಲ್ಲಾ, ಅರಳೀಕೆರೆ ರಂಗಸ್ವಾಮಿ ಮೊದಲಾದವರು ಎಲ್ಲಾ ಜನಾಂಗದವರ ಜತೆ ಉತ್ತಮ ಸ್ನೇಹ, ಬಾಂಧವ್ಯ ಹೊಂದಿರುವ ಜಿ.ಎಸ್.ಮಂಜುನಾಥ್ ಅವರಿಗೇ ಟಿಕೆಟ್ ನೀಡಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ಕ್ಷೇತ್ರಗಳಿಗೆ ಬಲ ತುಂಬಿದ್ದೇ ಮಂಜುನಾಥ್ ಅವರು. ಪ್ರತಿಭಾವಂತರೂ, ಸಂಘಟನಾ ಚತುರರೂ ಆಗಿರುವ ಅವರಿಗೇ ಕಾಂಗ್ರೆಸ್‌ ಹೈಕಮಾಂಡ್ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.ಅಬ್ಬಾಸ್, ಪಿ.ಕೃಷ್ಣಮೂರ್ತಿ, ವಿ.ಅರುಣ್ ಕುಮಾರ್, ಪ್ರಕಾಶ್, ಪರಮೇಶ್, ಓಂಕಾರಪ್ಪ, ಹೊಟ್ಟಿನರಾಮಣ್ಣ, ಕೆ.ಗಣೇಶ್, ಕೊಟ್ರೇಶ್, ಮಲ್ಲಿಕಾರ್ಜುನ್, ವೈ.ದೇವರಾಜ್, ವಿಶ್ವನಾಥ್, ತಿರುಮಲೇಶ್, ರಂಗಸ್ವಾಮಿ, ಮಾರುತೇಶ್ ಮತ್ತಿತರರು ಸಭೆಯಲ್ಲಿದ್ದರು.

ಮಾನವ ಸರಪಳಿ: ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಲ್ಲಿ ಪರಾಜಿತರಾಗಿರುವ ಡಾ.ಜೆಜೆ.ಹಟ್ಟಿ ತಿಪ್ಪೇಸ್ವಾಮಿ ಅವರಿಗೆ ಕ್ಷೇತ್ರದಲ್ಲಿ ಅನುಕಂಪದ ಅಲೆಯಿದೆ.ಸೋತ ದಿನದಿಂದಲೂ ಬೂತ್‌ಮಟ್ಟದಿಂದ ಸಂಘಟನೆ ಮಾಡಿಕೊಂಡು ಬಂದಿದ್ದಾರೆ. ಪ್ರಯುಕ್ತ ಅವರಿಗೇ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರ ಮುನೀರ್ ಮುಲ್ಲಾ, ಎಸ್‌ಜೆಪಿ ನವಾಬ್ ಜಾನ್, ರಂಗಸ್ವಾಮಿ, ಎನ್.ಶಿವಣ್ಣ, ಎಸ್.ಮಲ್ಲಪ್ಪ, ಕೆ.ತಿಪ್ಪೇಸ್ವಾಮಿ, ಮಹಾಲಿಂಗಪ್ಪ, ರವಿ ಮತ್ತಿತರರು ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ವಿನೂತನ ರೀತಿ ಪ್ರತಿಭಟನೆ ನಡೆಸಿದರು.ಮಾರ್ಚ್ 15ರಂದು ಜೆಡಿಎಸ್ ಸಭೆ

ನಗರದ ತಾಹಾ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಮಾರ್ಚ್‌ 15 ರಂದು ಬೆಳಿಗ್ಗೆ 11ಕ್ಕೆ ಜೆಡಿಎಸ್ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ತಾಲ್ಲೂಕು ಅಧ್ಯಕ್ಷ ಜಿ.ಶಿವಪ್ರಸಾದಗೌಡ ತಿಳಿಸಿದ್ದಾರೆ.ಲೋಕಸಭಾ ಚುನಾವಣೆಗೆ ಪೂರ್ವಸಿದ್ಧತೆ ಕುರಿತು ಹಮ್ಮಿಕೊಂಡಿರುವ ಸಮಾಲೋಚನಾ ಸಭೆಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ, ಗೂಳಿಹಟ್ಟಿ ಶೇಖರ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬಿ.ಕಾಂತರಾಜ್, ಎಚ್.ಎಂ.ಷಕೀಲ್ ನವಾಜ್, ಬಿ.ಎಚ್. ಮಂಜುನಾಥ್, ಕಾಶ್ಯಾಮಯ್ಯ ಮತ್ತಿತರರು ಆಗಮಿಸಲಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.