ಗುರುವಾರ , ಮೇ 13, 2021
16 °C

ಚಿನ್ನ ದರ ರೂ.475 ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಮುಂಬೈ(ಪಿಟಿಐ): ಚಿನ್ನ ಖರೀದಿ ಕನಸು ಕಾಣುತ್ತಿದ್ದವರಿಗೆ ಕಹಿ ಸುದ್ದಿ. 10 ಗ್ರಾಂ ಅಪರಂಜಿ ಚಿನ್ನ ಮುಂಬೈನಲ್ಲಿ ರೂ.465ರಿಂದ 475ರಷ್ಟು ಮತ್ತು ನವದೆಹಲಿಯಲ್ಲಿ ರೂ.430ರಷ್ಟು ತುಟ್ಟಿಯಾಗಿದೆ. ಮುಂಬೈ ಧಾರಣೆ 2 ತಿಂಗಳಲ್ಲೇ ಗರಿಷ್ಠ, ನವದೆಹಲಿಯಲ್ಲಿನ ಬೆಲೆ 5 ವಾರಗಳಲ್ಲೇ ಹೆಚ್ಚಿನದ್ದಾಗಿದೆ.ಮುಂಬೈನಲ್ಲಿ 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ.475ರಷ್ಟು ಬೆಲೆ ಹೆಚ್ಚಿಸಿಕೊಂಡು ರೂ.27,705ಕ್ಕೂ, ಅಪರಂಜಿ ಚಿನ್ನ ರೂ.465ರಷ್ಟು ಮೌಲ್ಯ ಏರಿಸಿಕೊಂಡು ರೂ.27,570ಕ್ಕೂ ಹೆಚ್ಚಳ ಕಂಡಿತು.ನವದೆಹಲಿಯಲ್ಲಿ ರೂ.430 ಏರಿಕೆ ಕಂಡ 10 ಗ್ರಾಂ ಅಪರಂಜಿ ಚಿನ್ನ ರೂ.28,090ಕ್ಕೂ, ಸ್ಟ್ಯಾಂಡರ್ಡ್ ಚಿನ್ನ ರೂ.27,890ಕ್ಕೂ ಬೆಲೆ ಹೆಚ್ಚಿಸಿಕೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.