ಬುಧವಾರ, ಮೇ 12, 2021
18 °C

ಚಿರತೆ ಚರ್ಮ ಕಳ್ಳ ಸಾಗಣೆ: ಇಬ್ಬರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಚಿರತೆ ಚರ್ಮ ಕಳ್ಳ ಸಾಗಣೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ ವಿಶೇಷ ಅರಣ್ಯ ಸಂಚಾರ ಪೊಲೀಸರು ಬಂಧಿಸಿದ್ದಾರೆ.ತಾಲ್ಲೂಕಿನ ಗೂಳ್ಯದ ಸೋಮಣ್ಣ ಮತ್ತು ಪೆದ್ದನ ಪಾಳ್ಯದ ಕುಮಾರ ಬಂಧಿತರು. ತಾಲ್ಲೂಕಿನ ಗೂಳ್ಯ ಅರಣ್ಯ ಪ್ರದೇಶದಲ್ಲಿ ಚಿರತೆ ಚರ್ಮ ಕಳ್ಳ ಸಾಗಣೆ ಮಾಡುವ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ಅಧಿಕಾರಿ ಅನ್ವರ್‌ಕರ್ ಮಾರ್ಗದರ್ಶನದಲ್ಲಿ ಸಬ್ ಇನ್‌ಸ್ಪೆಕ್ಟರ್ ಎಂ.ರಾಜಶೇಖರ ಮತ್ತು ತಂಡ ಕಾರ್ಯಾಚರಣೆ ಕೈಗೊಂಡರು. ಚಿರತೆ ಚರ್ಮ ಕೊಳ್ಳುವ ವ್ಯಾಪಾರಿಗಳ ಸೋಗಿನಲ್ಲಿ ಗೂಳ್ಯ ಗ್ರಾಮದ ತಟ್ಟೆಹಳ್ಳದ ಬಳಿ ಆರೋಪಿಗಳನ್ನು ಭೇಟಿ ಮಾಡಿ ಚಿರತೆ ಚರ್ಮದ ಸಮೇತ ಇಬ್ಬರನ್ನು ಬಂಧಿಸಿ, ನಾಡ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.ಚರತೆ ಚರ್ಮ, ಆರೋಪಿಗಳನ್ನು ಹನೂರು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಅರಣ್ಯ ಸಂಚಾರ ದಳದ ಜಯಶಂಕರ್, ಲಿಂಗರಾಜು, ರಾಘವೇಂದ್ರ, ಶ್ರೀಕಂಠಸ್ವಾಮಿ ಪ್ರಕಾಶ್ ಹಾಗೂ ಲಿಂಗರಾಜಪ್ಪ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.