ಮಂಗಳವಾರ, ಮೇ 11, 2021
22 °C

ಚಿರತೆ ಚರ್ಮ ಮಾರಾಟ:ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಸಾತನೂರು ಅರಣ್ಯ ವ್ಯಾಪ್ತಿಯ ಕರಿಯಣ್ಣನ ದೊಡ್ಡಿ ಗ್ರಾಮದಲ್ಲಿ ಚಿರತೆ ಚರ್ಮ ಮಾರಾಟ ಮಾಡುತ್ತಿದ್ದ ತಂಡದ ಮೇಲೆ ಮಂಗಳವಾರ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ  ಆರೋಪಿಯನ್ನು ಬಂಧಿಸ್ದ್ದಿದು ಚಿರತೆಯ ಚರ್ಮ ವಶಪಡಿಸಿಕೊಂಡಿದ್ದಾರೆ.ಚಿರತೆಗಳನ್ನು ಬೇಟೆಯಾಡಿ ಕೊಂದು ಚರ್ಮ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಚರ್ಮವನ್ನು ಕೊಳ್ಳುವವರಂತೆ ನಟಿಸಿ ಜಗದೀಶನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಯೋಗೇಶ ಪರಾರಿಯಾಗಿದ್ದಾನೆ. ಈತ ದೊಡ್ಡ ಆಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾನೆ.ಸಂಗಮ-ಮುತ್ತತ್ತಿ ಅರಣ್ಯ ಪ್ರದೇಶವಾಗಿರುವುದರಿಂದ ವ್ಯವಸ್ಥಿತ ಜಾಲವೊಂದು ಕಾಡು ಪ್ರಾಣಿಗಳನ್ನು ಬೇಟೆಯಾಡಿ ಕೊಂದು ಚರ್ಮ ಮಾರಾಟ ಮಾಡುವ ದಂದೆಯಲ್ಲಿ ತೊಡಗಿದೆ. ಇದರ ಹಿಂದೆ ದೊಡ್ಡ ಜಾಲವಿದೆ ಎಂದು ಶಂಕಿಸಲಾಗಿದೆ.  ಕಾರ್ಯಾಚರಣೆಯಲ್ಲಿ ಬೆಂಗಳೂರು ಅರಣ್ಯ ಸಂಚಾರಿದಳ ಮತ್ತು ಸಾತನೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.