ಬುಧವಾರ, ಜನವರಿ 22, 2020
17 °C

ಚಿರಾಯು ಅಮಿನ್‌ಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಡೋದರ (ಪಿಟಿಐ): ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಮಾಜಿ ಮುಖ್ಯಸ್ಥ ಚಿರಾಯು ಅಮಿನ್ ಬರೋಡಾ ಕ್ರಿಕೆಟ್ ಸಂಸ್ಥೆಗೆ (ಬಿಸಿಎ) ನಡೆದ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.ಬಿಸಿಎ ಹಾಲಿ ಅಧ್ಯಕ್ಷರೂ ಆಗಿದ್ದ ಅಮಿನ್ ಚುನಾವಣೆಯಲ್ಲಿ ಸಿಮಾರ್ಜಿತ್ ಸಿನ್ಹ ಗಾಯಕ್‌ವಾಡ್ ಎದುರು ಅಧ್ಯಕ್ಷ ಸ್ಥಾನಕ್ಕೆ  ಸ್ಪರ್ಧಿಸಿದ್ದರು.  ಮಂಗಳವಾರ ಫಲಿತಾಂಶ ಪ್ರಕಟಗೊಂಡಿದ್ದು, ಅವರು 848 ಮತ ಪಡೆಯುವ ಮೂಲಕ ತಮ್ಮ ಎದುರಾಳಿ ಸಿಮಾರ್ಜಿತ್ (1066) ಎದುರು 218 ಮತಗಳ ಅಂತರದಿಂದ ಪರಾಜಿತರಾಗಿದ್ದಾರೆ.ಇದರೊಂದಿಗೆ ಚಿರಾಯು ಅವರ 26 ವರ್ಷಗಳ ಆಡಳಿತಕ್ಕೆ ತೆರೆ ಬಿದ್ದಿದೆ.

ಪ್ರತಿಕ್ರಿಯಿಸಿ (+)