ಮಂಗಳೂರು: `ನ. 2ರಂದು ನಗರದಲ್ಲಿ ನಡೆದ `ಯಾಕಾಗಿ ಪಾಪ್ಯುಲರ್ ಫ್ರಂಟ್~ ಅಭಿಯಾನದಲ್ಲಿ ಅಜ್ಮೀರ್ ದರ್ಗಾದ ಅಧ್ಯಕ್ಷ ಸಯ್ಯದ್ ಸರ್ವರ್ ಚಿಸ್ತಿ ಅವರು ದೇಶದ್ರೋಹದ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಠಾಣೆಗೆ ನೀಡಿರುವ ದೂರನ್ನು ಹಿಂದಕ್ಕೆ ಪಡೆಯದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು~ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರಝಾಕ್ ಕೆಮ್ಮಾರ ಹೇಳಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನರೇಂದ್ರ ಮೋದಿಯವರು ಪ್ರಧಾನಿಯಾದರೆ ಈ ದೇಶದ ಮುಸ್ಲಿಮರೆಲ್ಲ ಭಯೋತ್ಪಾಕರಾಗುವುದರಲ್ಲಿ ಅಚ್ಚರಿಯಿಲ್ಲ. ಹಾಗಾಗದಿರಲಿ ಎಂದು ಹಾರೈಸುತ್ತೇನೆ ಎಂದು ಚಿಸ್ತಿ ಅವರು ಆತಂಕ ವ್ಯಕ್ತಪಡಿಸಿದ್ದಾರೆಯೇ ಹೊರತು ಮುಸ್ಲಿಮರೆಲ್ಲ ಭಯೋತ್ಪಾದರಾಗಬೇಕು ಎಂದು ಅವರು ಕರೆ ನೀಡಿಲ್ಲ.

ಆದರೆ ಚಿಸ್ತಿ ಅವರ ಹೇಳಿಕೆಯನ್ನು ದುರುದ್ದೇಶದಿಂದ ತಿರುಚಿ ದೂರು ನೀಡಲಾಗಿದೆ. ನಮ್ಮಲ್ಲಿ ಚಿಸ್ತಿ ಭಾಷಣದ ಸಂಪೂರ್ಣ ದಾಖಲೆ ಇದೆ. ತನಿಖೆಯ ಸಂದರ್ಭದಲ್ಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧ~ ಎಂದು ಹೇಳಿದರು. ಗೋಷ್ಠಿಯಲ್ಲಿ ಪಿಎಫ್ಐ ಸದಸ್ಯರಾದ ರಿಯ್ಾ ಫರಂಗಿಪೇಟೆ, ಅತಾವುಲ್ಲ ಎಂ.ಎಂ., ಪಿ. ಅಬ್ದುಲ್ ಖಾದರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.