ಗುರುವಾರ , ಮೇ 19, 2022
24 °C

ಚೀನಾ: ಲೀ ಜತೆ ಆಂಟನಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀನಾ: ಲೀ ಜತೆ ಆಂಟನಿ ಸಭೆ

ಬೀಜಿಂಗ್ (ಪಿಟಿಐ): ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಮತ್ತು ರಕ್ಷಣಾ ಸಚಿವ ಚಾಂಗ್ ವಾಂಕ್ವಾನ್ ಅವರ ಜತೆ ಮಾತುಕತೆ ನಡೆಸಿ ಗಡಿಯ ಭದ್ರತೆಗೆ ಹೊಸ ಕಾರ್ಯತಂತ್ರ ರೂಪಿಸುವುದು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು.ಇತ್ತೀಚೆಗೆ ಚೀನಾ ಸೇನೆ ಲಡಾಖ್‌ನಲ್ಲಿ ಭಾರತದ ಗಡಿಯೊಳಗೆ ಅಕ್ರಮ ಪ್ರವೇಶ ಮಾಡಿದ್ದರ ಹಿನ್ನೆಲೆಯಲ್ಲಿ ವಿಶೇಷವಾಗಿ ಗಡಿಯುದ್ಧಕ್ಕೂ ಭದ್ರತಾ ವ್ಯವಸ್ಥೆಗೆ ಹೊಸ ಕ್ರಮ ಅಳವಡಿಸುವುದರ ಬಗ್ಗೆ ಆಂಟನಿ ಸಮಾಲೋಚಿಸಿದರು ಎನ್ನಲಾಗಿದೆ.ಚೀನಾ ಮತ್ತು ಭಾರತ ಪ್ರಮುಖ ನೆರೆಯ ರಾಷ್ಟ್ರಗಳಾಗಿರುವುದರಿಂದ ಶಾಂತಿಯುತ ಸಹಬಾಳ್ವೆ ಉಭಯತ್ರರಿಗೆ ಹಾಗೂ ಏಷ್ಯಾ ಖಂಡಕ್ಕೆ ಒಳಿತು ಎಂದು ಕೆಕಿಯಾಂಗ್ ಹೇಳಿದ್ದಾರೆ.ಶಾಂತಿ ಕಾಪಾಡಲು ಉಭಯ ರಾಷ್ಟ್ರಗಳ ನಡುವೆ `ಸೂಕ್ತ ಸಂವಹನ'ದ ಅವಶ್ಯಕತೆ ಇದೆ ಎಂಬುದನ್ನು ಆಂಟನಿ ಮತ್ತು ಚಾಂಗ್ ಒಪ್ಪಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.