ಶುಕ್ರವಾರ, ಮೇ 7, 2021
23 °C

ಚೀನಾ: ವಿಶ್ವದ ಅತಿ ವೇಗದ `ಸೂಪರ್ ಕಂಪ್ಯೂಟರ್' ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್(ಐಎಎನ್‌ಎಸ್): ಸೆಕೆಂಡ್‌ಗೆ 33.89 ಕ್ವಾಡ್ರಿಲಿಯನ್‌ನಷ್ಟು ಕಾರ್ಯಸಾಮರ್ಥ್ಯ, 54.9 ಕ್ವಾಡ್ರಿಯಲ್ ವೇಗದ ಕಾರ್ಯಕ್ಷಮತೆವುಳ್ಳ ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಚೀನಾ ಸೋಮವಾರ ಘೋಷಿಸಿದೆ.



`ಟಿಯಾನಿ-2' ಹೆಸರಿನ ಈ ಸೂಪರ್ ಕಂಪ್ಯೂಟರ್ ಅನ್ನು ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದೆ. ಅಮೆರಿಕದ `ಟೈಟಾನ್'  ಸೂಪರ್ ಕಂಪ್ಯೂಟರ್ ಅನ್ನು ಮೀರಿಸಬಲ್ಲ `ಟಿಯಾನಿ-2' ಬೆಲೆ ಬರೋಬ್ಬರಿ ರೂ 550 ಕೋಟಿ! ಎಂದು ಕ್ಸಿನ್‌ಹುವಾ ವರದಿ ಮಾಡಿದೆ.

`ಟಿಯಾನಿ-1' ನವೆಂಬರ್ 2010ರಿಂದ ಜೂನ್ 2011ರ ಅವಧಿಯಲ್ಲಿ ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಕಂಪ್ಯೂಟರ್ ಅನ್ನು ಇದು ಜಪಾನ್‌ನ `ಕೆ' ಸೂಪರ್ ಕಂಪ್ಯೂಟರ್ ಹಿಂದಿಕ್ಕಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.