ನವದೆಹಲಿ (ಪಿಟಿಐ): ಲೋಕಸಭೆ ಚುನಾವಣೆ ನಡೆಸಲು ಒಬ್ಬ ಮತದಾರನಿಗೆ ಸರ್ಕಾರಕ್ಕೆ ತಗಲುವ ಖರ್ಚು ಮೊದಲ ಚುನಾವಣೆ ನಡೆದ 1952ರಿಂದ 2009ಕ್ಕೆ 20 ಪಟ್ಟು ಹೆಚ್ಚಾಗಿದೆ. 1952ರಲ್ಲಿ ಒಬ್ಬ ವ್ಯಕ್ತಿಗೆ ಮಾಡಲಾದ ವೆಚ್ಚ 60 ಪೈಸೆಯಾಗಿದ್ದರೆ 2009ರಲ್ಲಿ ಅದು ₨ 12ಕ್ಕೆ ಏರಿದೆ.

ಇಡೀ ದೇಶದಲ್ಲಿ ಚುನಾವಣೆ ನಡೆಸಲು 1952ರಲ್ಲಿ ವೆಚ್ಚವಾದದ್ದು ₨10.45 ಕೋಟಿಯಾದರೆ 2009ರಲ್ಲಿ ಅದು ₨ 846.67 ಕೋಟಿಗೆ ಹೆಚ್ಚಿದೆ. ವೆಚ್ಚದ ಆಧಾರದಲ್ಲಿ ಹೇಳುವುದಾದರೆ 2004ರ ಚುನಾವಣೆ ಸರ್ಕಾರದ ಬೊಕ್ಕಸಕ್ಕೆ ಅತ್ಯಂತ ದುಬಾರಿಯಾಗಿದ್ದು, ಆದ ವೆಚ್ಚ ₨ 1,114 ಕೋಟಿ.

ಈ ಬಾರಿ ಮತ್ತೂ ಹೆಚ್ಚಬಹುದು: ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ಮತದಾನ ದಿನಾಂಕಕ್ಕೆ ಮೊದಲು ಮತ ಚೀಟಿ ವಿತರಣೆಯಂತಹ ಕ್ರಮಗಳಿಂದಾಗಿ ಈ ಬಾರಿಯ ಚುನಾವಣೆಗೆ ಇನ್ನೂ ಹೆಚ್ಚಿನ ವೆಚ್ಚ ತಗಲಬಹುದು. ಲೋಕಸಭೆ ಚುನಾವಣೆ ನಡೆಸುವುದರ ಸಂಪೂರ್ಣ ವೆಚ್ಚವನ್ನು ಕೇಂದ್ರ ಭರಿಸಿದರೆ, ಕಾನೂನು ಮತ್ತು ಸುವ್ಯವಸ್ಥೆ ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳು ಭರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.