ಬ್ಯಾಂಕಾಕ್ (ಪಿಟಿಐ): ಥಾಯ್ಲೆಂಡ್ನಲ್ಲಿ ಫೆಬ್ರುವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಕಾನೂನುಬಾಹಿರ ಎಂದು ಅಲ್ಲಿನ ನ್ಯಾಯಾಲಯ ಶುಕ್ರವಾರ (ಸಂವಿಧಾನ ಪೀಠ) ಘೋಷಿಸಿದೆ.

ದೇಶದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರವಾಗಿದ್ದು, ಇದು ಪ್ರಧಾನಿ ಯಿಂಗ್ಲುಕ್ ಶಿನವಾತ್ರ ಅವರಿಗೆ ಉಂಟಾದ ಹಿನ್ನಡೆಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಫೆಬ್ರುವರಿ 2ರಂದು ನಡೆದ ಕ್ಷಿಪ್ರ ಚುನಾವಣೆ ಕೇವಲ ಒಂದು ದಿನದಲ್ಲಿ ಮುಗಿದಿಲ್ಲ ಹಾಗಾಗಿ, ಇದು ಕಾನೂನುಬಾಹಿರ ಎಂದು ಸಂವಿಧಾನ ಪೀಠ ತೀರ್ಮಾನ ನೀಡಿದೆ.

ಸಂವಿಧಾನದ ಪ್ರಕಾರ ರಾಷ್ಟ್ರವ್ಯಾಪಿ ಒಂದೇ ದಿನದಲ್ಲಿ ಚುನಾವಣೆ ನಡೆಯಬೇಕು. ಚುನಾವಣೆಯ 28 ಕ್ಷೇತ್ರಗಳ ಪೈಕಿ ಥಾಯ್ಲೆಂಡಿನ ದಕ್ಷಿಣ ಪ್ರಾಂತ್ಯದ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇರಲಿಲ್ಲ. ಹಾಗಾಗಿ, ಒಂದೇ ದಿನದಲ್ಲಿ ರಾಷ್ಟ್ರವ್ಯಾಪಿ ಚುನಾವಣೆ ನಡೆಸಲು ಅಸಾಧ್ಯ. ಸಂವಿಧಾನದ ಕಲಂ 108 (2)ರ ಪ್ರಕಾರ ಇದು ಚುನಾವಣಾ ನೀತಿಯ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಕಾರಣ ನೀಡಿದೆ.

ಫೆಬ್ರುವರಿಯ ಚುನಾವಣೆ ಕಾನೂನುಬಾಹಿರವಾಗಿದ್ದು, ಚುನಾವಣಾ ಆಯೋಗ ಸರ್ಕಾರದ ಜತೆ ಚರ್ಚಿಸಿ ಮುಂದಿನ ಚುನಾವಣೆ ದಿನಾಂಕ ಘೋಷಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಥಾಯ್ಲೆಂಡಿನ ಪ್ರಮುಖ ವಿರೋಧಪಕ್ಷವಾಗಿರುವ ಡೆಮಾಕ್ರಟಿಕ್ ಪಾರ್ಟಿ ಫೆಬ್ರುವರಿಯಲ್ಲಿ ನಡೆದ ಚುನಾವಣೆಯನ್ನು ಬಹಿಷ್ಕರಿಸಿತ್ತು. ಪಕ್ಷದ ಬೆಂಬಲಿಗರು ಬ್ಯಾಂಕಾಕ್ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಜನರು ಮತದಾನ ಮಾಡದಂತೆ ಸರ್ಕಾರಿ ಕಟ್ಟಡಗಳಿಗೆ ದಿಗ್ಬಂಧನ ಹಾಕಿದ್ದರು. ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆಯೂ ತಡೆಯೊಡ್ಡಿದ್ದರು.
ದೇಶದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟನ್ನು ಶಮನಮಾಡಲು ಪ್ರಧಾನಿ ಯಿಂಗ್ಲುಕ್ ಚುನಾವಣೆಯನ್ನು ಘೋಷಿಸಿದ್ದರು. ಆದರೆ, ಇದಕ್ಕೆ ವಿರೋಧ ಪಕ್ಷ ಹಾಗೂ ಅದರ ಬೆಂಬಲಿಗರಿಂದ ಪ್ರತಿಭಟನೆ ವ್ಯಕ್ತವಾಗಿತ್ತು.

ಪ್ರಧಾನಿ ಯಿಂಗ್ಲುಕ್ ಹಾಗೂ ಚುನಾವಣಾ ಆಯೋಗದ ಮುಖ್ಯಸ್ಥ ಸುಪಚಾಯ್ ಸೊಮ್ಶೆರೊನ್ ಪರವಾಗಿ ಉಪ ಪ್ರಧಾನಿ ಪೊಂಗ್ಥೆಪ್ ಥೆಪ್ಕಂಚನ ಹಾಗೂ ಒಂಬುಡ್ಸ್ಮನ್ ಪೋರ್ನ್ಪೊಟ್ ವಿಚಿಟ್ಚೊಲ್ಚಾಯ್ ಅವರಿಂದ ನ್ಯಾಯಾಲಯ ಸಾಕ್ಷಿ ಪಡೆಯಿತು. ಥಾಯ್ಲೆಂಡಿನಲ್ಲಿ ಕಳೆದ ನವೆಂಬರ್ನಿಂದ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದ್ದು, ಪ್ರಧಾನಿ ಯಿಂಗ್ಲುಕ್ ಅವರು ರಾಜೀನಾಮೆ ಸಲ್ಲಿಸಬೇಕೆಂದು ವಿರೋಧಪಕ್ಷಗಳು ತೀವ್ರ ಒತ್ತಡ ಹೇರಿ ಪ್ರತಿಭಟನೆ ನಡೆಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.