ಭಾನುವಾರ, ಮಾರ್ಚ್ 7, 2021
22 °C
ಎಣಿಕೆ ಗಳಿಕೆ

ಚೆಂದದ ಚೆಂಡು ಹೂವಿಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆಂದದ ಚೆಂಡು ಹೂವಿಗೆ...

ಚೆಂಡು ಹೂವನ್ನು ವಿವಿಧ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತ. ಮಣ್ಣಿನ ರಸಸಾರ (ಪಿಎಚ್) 6 ರಿಂದ 7.5 ಇದ್ದರೆ ಉತ್ತಮ. ವರ್ಷವಿಡೀ ಬೆಳೆಯಬಹುದಾದ ಈ ಹೂವಿನ ಬೇಸಾಯದಿಂದ ಮಳೆಗಾಲದಲ್ಲಿ  ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸಬಹುದಾಗಿದೆಚೆಂಡು ಹೂವಿನ ಬೆಳೆಗೆ ಬಾಧಿಸುವ ಮುಖ್ಯ ಕೀಟವೆಂದರೆ ಜಿಗಿಹುಳು. ಇದು ಎಲೆಗಳ ರಸ ಹೀರುವುದರಿಂದ ಹಳದಿ ಚುಕ್ಕೆಗಳಾಗಿ ಕ್ರಮೇಣ ಒಣಗಲು ಪ್ರಾರಂಭವಾಗಿ ಇಳುವರಿಯಲ್ಲಿ ತೀವ್ರ ಕುಸಿತವಾಗುತ್ತದೆ. ಇದನ್ನು ನಿಯಂತ್ರಿಸಲು 1 ಲೀಟರ್ ನೀರಿಗೆ 1.5 ಮಿ.ಲೀ. ಮಾನೋಕ್ರೊಟೋಪಾಸ್ ಅಥವಾ ಮೀಥೈಲ್ ಪ್ಯಾರಾಥಿಯಾನ್ ಔಷಧಿಯನ್ನು ಬೆರೆಸಿ ಸಿಂಪಡಿಸಬೇಕುಎಲೆಚುಕ್ಕೆ ಮತ್ತು ಅಂಗಮಾರಿ ರೋಗ ಬಂದರೆ ಎಲೆಗಳ ಮೇಲೆ ಚುಕ್ಕೆಗಳಾಗಿ ಹೂವಿನ ಮೊಗ್ಗು ಮತ್ತು ದಳಗಳನ್ನು ಆವರಿಸಿಕೊಳ್ಳುತ್ತದೆ. ಇದರ ಬಾಧೆ ತೀವ್ರವಾದಾಗ ಗಿಡಗಳು ಬಿದ್ದು ಸಾಯುತ್ತವೆ. ಅಂತಹ ಗಿಡಗಳನ್ನು ದೂರ ಎಸೆದು ನಾಶ ಪಡಿಸಬೇಕಲ್ಲದೆ,  ಶಿಲೀಂಧ್ರನಾಶಕಗಳನ್ನು ಬಳಸಿ ನಿಯಂತ್ರಿಸಬಹುದಾಗಿದೆ. ಎಲೆ ಮುರುಟು ನಂಜು ರೋಗಕ್ಕೆ ತುತ್ತಾದ ಗಿಡಗಳನ್ನು ನಾಶಪಡಿಸಿ ರೋಗ ಹರಡುವುದನ್ನು ತಡೆಗಟ್ಟಬಹುದುಚೆಂಡು ಹೂವುಗಳನ್ನು ನೀರಾವರಿ ಸೌಲಭ್ಯವಿದ್ದರೆ ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ  ಗೋಡುಮಣ್ಣು ಇದಕ್ಕೆ ಅತ್ಯುತ್ತಮ. ಬೇಡಿಕೆಗೆ ತಕ್ಕಂತೆ ಬಣ್ಣದ ತಳಿಗಳನ್ನು ಆರಿಸಿಕೊಳ್ಳಬೇಕಾಗುತ್ತದೆಚೆಂಡು ಹೂವುಗಳನ್ನು ನೀರಾವರಿ ಸೌಲಭ್ಯವಿದ್ದರೆ ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ  ಗೋಡುಮಣ್ಣು ಇದಕ್ಕೆ ಅತ್ಯುತ್ತಮ. ಬೇಡಿಕೆಗೆ ತಕ್ಕಂತೆ ಬಣ್ಣದ ತಳಿಗಳನ್ನು ಆರಿಸಿಕೊಳ್ಳಬೇಕಾಗುತ್ತದೆ.ಒಂದು ಹೆಕ್ಟೇರ್ ಪ್ರದೇಶಕ್ಕೆ ಬೇಕಾಗುವ ಸಸಿಗಳನ್ನು ತಯಾರಿಸಲು 6 ಮೀ ಉದ್ದ, 1.2 ಮೀ ಅಗಲ ಹಾಗೂ 10 ಸೆಂ.ಮೀ ಎತ್ತರದ 4 ಏರು ಮಡಿಗಳನ್ನು ಸಿದ್ಧ ಮಾಡಿಕೊಳ್ಳಬೇಕು. ಪ್ರತಿ ಮಡಿಗೆ 30 ಕಿಲೊ ಕೊಟ್ಟಿಗೆ ಗೊಬ್ಬರ ಹಾಗೂ ಅರ್ಧ ಕಿಲೊ ಎನ್‌ಪಿಕೆ 15:15:15 ಸಂಯುಕ್ತ ರಾಸಾಯನಿಕ ಗೊಬ್ಬರವನ್ನು ಹಾಕಿ ಮಣ್ಣಿನ ಸಾಲುಗಳಲ್ಲಿ ಚೆನ್ನಾಗಿ ಬೆರೆಸಬೇಕು.ಬೀಜಗಳನ್ನು 7.5 ಸೆ.ಮೀ ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಿ ಅದರ ಮೇಲೆ ತೆಳುವಾದ ಕೊಟ್ಟಿಗೆ ಗೊಬ್ಬರ ಹಾಕಿ ನಿಯಮಿತವಾಗಿ ನೀರು ಒದಗಿಸಬೇಕು. ನಾಲ್ಕು ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧಗೊಳ್ಳುತ್ತವೆ.ನಾಟಿ ಮಾಡುವ ಪ್ರದೇಶವನ್ನು ಚೆನ್ನಾಗಿ ಉಳುಮೆ ಮಾಡಿ ಸ್ವಚ್ಛಗೊಳಿಸಿ ಪ್ರತಿ ಹೆಕ್ಟೇರ್‌ಗೆ 20 ಟನ್ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಹದ ಮಾಡಬೇಕು. ನಂತರ 60 ಸೆ.ಮೀ. ಅಂತರದಲ್ಲಿ ಬದುಗಳನ್ನು ತಯಾರಿಸಿ ಅವುಗಳ ಒಂದು ಬದಿಯಲ್ಲಿ 45ಸೆ.ಮೀ. ಅಂತರದಲ್ಲಿ ಸಸಿಗಳನ್ನು  ನಾಟಿ ಮಾಡಬೇಕು.ಬುಡ ಕೊಳೆ ರೋಗಕ್ಕೆ ತುತ್ತಾದ ಗಿಡವು ಹಳದಿಯಾಗಿ, ನಂತರ ಕೆಂಪು ಕಂದು ಬಣ್ಣ, ಕೊನೆಗೆ ಕಪ್ಪು ಬಣ್ಣಕ್ಕೆ ತಿರುಗಿ ಸಾಯುತ್ತದೆ. ಇದರ ಹತೋಟಿಗೆ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2 ಗ್ರಾಂ ಮ್ಯೋಂಕೋಜೆಬ್ ಅಥವಾ 1 ಗ್ರಾಂ ಕಾರ್ಬನ್‌ಡೈಜಿಮ್ ಶಿಲೀಂಧ್ರನಾಶಕವನ್ನು ಸಿಂಪಡಣೆ ಮಾಡಬೇಕಲ್ಲದೆ ಗಿಡದ ಬುಡಕ್ಕೂ ಸ್ವಲ್ಪ ಸುರಿಯುವುದು ಪರಿಣಾಮಕಾರಿ ವಿಧಾನ.ನಾಟಿ ಮಾಡಿದ ಎರಡರಿಂದ ಎರಡೂವರೆ ತಿಂಗಳ ನಂತರ ಹೂಗಳ ಕೊಯ್ಲು ಆರಂಭವಾಗಿ ಮುಂದೆ ಸುಮಾರು ಎರಡೂವರೆ ತಿಂಗಳವರೆಗೂ ನಿರಂತರವಾಗಿ ಮುಂದುವರಿಯುತ್ತದೆ. ಯಾವಾಗಲೂ ಸಂಜೆ ವೇಳೆಯಲ್ಲಿಯೇ ಕೊಯ್ಲು ಮಾಡುವುದು ಸೂಕ್ತ. ಕೊಯ್ಲು ಮಾಡುವಾಗ ಹೂಗಳಲ್ಲಿ ಸ್ವಲ್ಪ ತೊಟ್ಟು ಉಳಿಯುವಂತೆ ನೋಡಿಕೊಳ್ಳಬೇಕು. ಪ್ರತಿ ಹೆಕ್ಟೇರಿಗೆ 8 ರಿಂದ 10 ಟನ್ ಇಳುವರಿ ನಿರೀಕ್ಷಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.