ಗುರುವಾರ , ಜನವರಿ 23, 2020
18 °C
ನಾಯಕನಿಗೆ ಒಲಿದ ಎಐಎಫ್‌ಎಫ್‌ ಗೌರವ

ಚೆಟ್ರಿ ವರ್ಷದ ಆಟಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆಟ್ರಿ ವರ್ಷದ ಆಟಗಾರ

ನವದೆಹಲಿ (ಪಿಟಿಐ): ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರು ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆ (ಎಐಎಫ್‌ಎಫ್) ಪ್ರಕಟಿಸಿರುವ 2013 ನೇ ಸಾಲಿನ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಶುಕ್ರವಾರ ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ನೇತೃತ್ವದಲ್ಲಿ  ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ  ವರ್ಷದ ಆಟಗಾರನ ಆಯ್ಕೆಗೆ ನಡೆದ ಮತದಾನದಲ್ಲಿ ಐ ಲೀಗ್ ಕ್ಲಬ್‌ಗಳ ಕೋಚ್‌ಗಳು ಚೆಟ್ರಿ ಪರವಾಗಿ   ಮತ ಹಾಕಿದರು.ಇದರೊಂದಿಗೆ ಅವರು ಮೂರನೇ ಬಾರಿಗೆ ಈ ಗೌರವ ತಮ್ಮದಾಗಿಸಿ ಕೊಂಡಿದ್ದಾರೆ. 2007 ಮತ್ತು 2011ರಲ್ಲಿ ಚೆಟ್ರಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.ಈ ಗೌರವವು ರೂ2 ಲಕ್ಷ ನಗದು ಮತ್ತು ಟ್ರೋಫಿಯನ್ನು ಒಳಗೊಂ ಡಿದ್ದು, ಐ.ಎಮ್.ವಿಜಯನ್ ನಂತರ ಮೂರು ಬಾರಿ ಈ ಗೌರವ ಪಡೆದ ಎರಡನೇ ಆಟಗಾರ ಎನಿಸಿದ್ದಾರೆ.‘ ಈ ಗೌರವ ನನ್ನಲ್ಲಿ ಶ್ರೇಷ್ಠತಾ ಭಾವವನ್ನು ಮೂಡಿಸಿದೆ. ನನಗೆ ಮತ ಹಾಕಿದ ಎಲ್ಲಾ ಕೋಚ್‌ಗಳಿಗೂ ಕೃತಜ್ಞನಾಗಿದ್ದು, ಈ ಖುಷಿಯಲ್ಲಿ ಮೈಮರೆಯುವುದಿಲ್ಲ. ಈ ಸಂತಸ ಕೆಲ ಕಾಲದವರೆಗೆ ಮಾತ್ರ,  ನಂತರ ಇದನ್ನು ಮರೆತು ಆಟದೆಡೆಗೆ ಗಮನ ಹರಿಸಲಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.ಎಐಎಫ್‌ಎಫ್ ಈ ವರ್ಷ ನೂತನವಾಗಿ ಎರಡು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪ್ರಕಟಿಸಿದ್ದು,  ಒಯಿ ನಾಮ್ ಬೆಂಬೆಮ್ ದೇವಿ (ವರ್ಷದ ಆಟಗಾರ್ತಿ), ಜೇಜೆ ಲಾಲ್ಪೇಕ್ಲುವ (ಉದಯೋನ್ಮುಖ ಆಟಗಾರ) ಪ್ರಶಸ್ತಿ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)