ಶನಿವಾರ, ಮೇ 8, 2021
26 °C

ಚೆಸ್: ಆನಂದ್‌ಗೆ ಎರಡನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಪಿಟಿಐ): ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ತಾಲ್ ಮೆಮೋರಿಯಲ್ ಬ್ಲಿಟ್ಜ್ ಚೆಸ್ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.ಈ ಟೂರ್ನಿಯಲ್ಲಿ ಅಜೇಯರಾಗುಳಿದ ಅವರು ಒಟ್ಟು 6.5 ಪಾಯಿಂಟ್ ಪಡೆದರು. ಏಳು ಪಾಯಿಂಟ್ ಪಡೆದ ಅಮೆರಿಕದ ಹಿಕಾರು ನಕಾಮುರಾ ಚಾಂಪಿಯನ್ ಆದರು. ಈ ಟೂರ್ನಿಯಲ್ಲಿ ಒಟ್ಟು 10 ಮಂದಿ ಪಾಲ್ಗೊಂಡಿದ್ದರು.ಬ್ಲಿಟ್ಜ್ ಟೂರ್ನಿ ಬಳಿಕ ಪ್ರಧಾನ ಹಂತದ ಟೂರ್ನಿ ನಡೆಯಲಿದೆ. ಆನಂದ್ ಮೊದಲ ಪಂದ್ಯದಲ್ಲಿ ಇಟಲಿಯ ಫ್ಯಾಬಿಯಾನೊ ಕರುವಾನಾ ಎದುರು ಪೈಪೋಟಿ ನಡೆಸಲಿದ್ದಾರೆ. ಈ ಟೂರ್ನಿಯಲ್ಲಿ ಒಟ್ಟು ಒಂಬತ್ತು ಸುತ್ತುಗಳ ಪಂದ್ಯ ನಡೆಯಲಿದೆ.ಆನಂದ್ ಐದು ಪಂದ್ಯಗಳಲ್ಲಿ ಬಿಳಿ ಕಾಯಿಗಳಿಂದ ಆಡುವ ಅವಕಾಶ ಪಡೆದುಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.