ಶುಕ್ರವಾರ, ಮೇ 7, 2021
24 °C
ಪೋಗೋ ನೆಚ್ಚಿನ ಚಾನೆಲ್

ಚೋಟಾ ಭೀಮ್ ಮೆಚ್ಚಿನ ಪಾತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ನೆಚ್ಚಿನ ಕಾರ್ಟೂನ್ ತಾಣವಾದ ಪೋಗೋ ಮತ್ತೊಮ್ಮೆ ತನ್ನ ಜನಪ್ರಿಯತೆಯನ್ನು ಸಾಬೀತುಪಡಿಸಿದೆ. ಕಾರ್ಟೂನ್ ನೆಟ್‌ವರ್ಕ್ ಹೊರತಂದಿರುವ `11ನೇ ನ್ಯೂ ಜನರೇಷನ್ ವರದಿ'ಯಲ್ಲಿ 7ರಿಂದ 14 ವರ್ಷ ವಯಸ್ಸಿನೊಳಗಿನ ಶೇ 26 ಮಕ್ಕಳು ಪೋಗೋ ಚಾನೆಲ್ ನೋಡಲು ಇಷ್ಟಪಡುತ್ತಾರೆ. ಚಾನೆಲ್‌ನಲ್ಲಿ ಪ್ರಸಾರವಾಗುವ ಚೋಟಾ ಭೀಮ್ ಮಕ್ಕಳ ನಂಬರ್ ಒನ್ ಕಾರ್ಯಕ್ರಮವಾಗಿದೆ.ಉಳಿದಂತೆ ಕಾರ್ಟೂನ್ ನೆಟ್‌ವರ್ಕ್, ಹಂಗಾಮ, ಡಿಸ್ನಿ, ಸಬ್ ಟೀವಿ ಕ್ರಮವಾಗಿ ಮಕ್ಕಳ ಇತರೆ ಜನಪ್ರಿಯ ಚಾನೆಲ್‌ಗಳ ಪಟ್ಟಿಯಲ್ಲಿವೆ. ಜನಪ್ರಿಯ ಕಾರ್ಯಕ್ರಮಗಳ ಪಟ್ಟಿಯಲ್ಲಿ ಚೋಟಾ ಭೀಮ್ (ಶೇ.73) ಹೊರತುಪಡಿಸಿದರೆ ಬೆನ್ ಟೆನ್, ಡೊರೆಮನ್, ಮಿ.ಬೀನ್ ಮತ್ತು ಟಾಮ್ ಆಂಡ್ ಜೆರ‌್ರಿ ಕಾರ್ಯಕ್ರಮಗಳನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ.ಬೆಂಗಳೂರು ಸೇರಿದಂತೆ ಭಾರತದ 26 ಪಟ್ಟಣಗಳಲ್ಲಿ 7000 ಮಕ್ಕಳ ಸಮೀಕ್ಷೆಯನ್ನು ಕಾರ್ಟೂನ್ ನೆಟ್‌ವರ್ಕ್ ಈ ವರದಿಗಾಗಿ ನಡೆಸಿತ್ತು. ಬೆಂಗಳೂರಿನಲ್ಲಿ ಶೇ 31 ಮಕ್ಕಳು ಮನೆಯಲ್ಲಿಯೇ ಇಂಟರ್‌ನೆಟ್ ಬಳಸುತ್ತಾರೆ. ಶಾಲೆಗಳಲ್ಲಿ ಇಂಟರ್‌ನೆಟ್ ಬಳಕೆ ಕಡಿಮೆ. ಸೈಬರ್ ಕೆಫೆಗಳಲ್ಲಿ ಶೇ 42 ಮಕ್ಕಳು ಇಂಟರ್‌ನೆಟ್ ಬಳಸುತ್ತಾರೆ.ಇಂಟರ್‌ನೆಟ್ ಬಳಸುವ ಮಕ್ಕಳಲ್ಲಿ ಶೇ 68ರಷ್ಟು ಮಂದಿ ಮಾಹಿತಿಗಾಗಿ ಅದನ್ನು ಶೋಧಿಸುತ್ತಾರೆ. ಶೇ 73ರಷ್ಟು ಪೋಷಕರು ಮಕ್ಕಳೊಂದಿಗೆ ಕುಳಿತು ಟಿ.ವಿ. ಕಾರ್ಯಕ್ರಮ ನೋಡಲು ಇಷ್ಟಪಡುತ್ತಾರೆ. ಶಾರುಖ್ ಖಾನ್ (ಶೇ 18) ಮತ್ತು ಸಲ್ಮಾನ್ ಖಾನ್ (ಶೇ 11) ಬೆಂಗಳೂರಿನ ಮಕ್ಕಳು ಹೆಚ್ಚು ಇಷ್ಟ ಪಡುವ ನಟರು.ನಟಿಯರ ಪೈಕಿ ಐಶ್ವರ್ಯ ರೈ ಬಚ್ಚನ್ (ಶೇ 14) ಮತ್ತು ಕತ್ರಿನಾ ಕೈಫ್ (ಶೇ 9) ಅವರನ್ನು ಮಕ್ಕಳು ಇಷ್ಟಪಡುತ್ತಾರೆ. ಕ್ರಿಕೆಟ್ ಆಟವನ್ನು ಹೆಚ್ಚು ಇಷ್ಟಪಡುವ ಬೆಂಗಳೂರಿನ ಮಕ್ಕಳಿಗೆ ಸಚಿನ್ ತೆಂಡೂಲ್ಕರ್ (ಶೇ 43) ಮತ್ತು ಸಾನಿಯಾ ಮಿರ್ಜಾ (ಶೇ 9) ಅಚ್ಚುಮೆಚ್ಚು.ಶೇ 58 ಮಕ್ಕಳು ಇಂಟರ್‌ನೆಟ್ ಬಳಸಿದರೂ,ಆ ಪೈಕಿ ಶೇ 19ರಷ್ಟು ಮಂದಿ ಮಾತ್ರ ಸ್ವತಂತ್ರವಾಗಿ ಅದನ್ನು ಬಳಸುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಮನೆಯ ಹೊರಗೇ ಇಂಟರ್‌ನೆಟ್ ಬಳಸುತ್ತಿದ್ದಾರೆ. ಅಂದರೆ ಸೈಬರ್ ಕೆಫೆ, ಶಾಲೆ ಮತ್ತು ಸ್ನೇಹಿತರು ಅಥವಾ ಸಂಬಂಧಿಗಳ ಮನೆಯಲ್ಲಿ ಇಂಟರ್‌ನೆಟ್ ಬಳಸುತ್ತಾರೆ. ಶೇ 87 ಮಕ್ಕಳು ವಾರಕ್ಕೊಮ್ಮೆಯಾದರೂ ಇಂಟರ್‌ನೆಟ್ ಬಳಸುತ್ತಾರೆ.ಆನ್‌ಲೈನ್ ಗೇಮಿಂಗ್ ಅನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಮೊಬೈಲ್ ಕುರಿತು ಹೇಳುವುದಾದರೆ ಪ್ರತಿ ಹತ್ತು ಮಕ್ಕಳಲ್ಲಿ ಒಂದು ಮಗುವಿನ  ಬಳಿ ಮೊಬೈಲ್ ಫೋನ್ ಇದೆ. ಶೇ 73 ಮಕ್ಕಳು  ಮೊಬೈಲ್ ಬಳಸುತ್ತಾರೆ. ಅವರ ಪೈಕಿ ಶೇ 9 ಮಂದಿಯ ಬಳಿ ಮೊಬೈಲ್ ಫೋನ್ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.