ಜನಗಣತಿ: ಮಾಹಿತಿಗೆ ಸೂಚನೆ

5

ಜನಗಣತಿ: ಮಾಹಿತಿಗೆ ಸೂಚನೆ

Published:
Updated:

ದಾವಣಗೆರೆ: ಜಿಲ್ಲೆಯಲ್ಲಿ ಫೆ. 9ರಿಂದ ಜಾತಿಗಣತಿ ನಡೆಯಲಿದ್ದು, ಜನತೆ ಗಣತಿದಾರರಿಗೆ ಸೂಕ್ತಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ತಿಳಿಸಿದ್ದಾರೆ.ಗಣತಿ ಕಾರ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 23 ವಿಭಾಗಗಳಿದ್ದು, 21 ಮಂದಿ ವಿಭಾಗ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 3,631 ಗಣತಿ ಬ್ಲಾಕ್‌ಗಳನ್ನು ರಚಿಸಲಾಗಿದೆ. ಗಣತಿ ಕಾರ್ಯಕ್ಕಾಗಿ ವಿವಿಧ ಇಲಾಖೆಗಳ 3,278 ನೌಕರರನ್ನು ಗಣತಿದಾರರನ್ನಾಗಿ ನೇಮಿಸಲಾಗಿದೆ. 544 ನೌಕರರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ. 329 ಗಣತಿದಾರರನ್ನು ಹಾಗೂ 55 ಮೇಲ್ವಿಚಾರಕರನ್ನು ಕಾಯ್ದಿರಿಸಿದ ಸಿಬ್ಬಂದಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ.ಫೆ. 28ರ ಮಧ್ಯರಾತ್ರಿ ನಿರ್ವಸಿತರ ಗಣತಿ ನಡೆಯಲಿದೆ. ಮಾರ್ಚ್ 1ರಿಂದ 5ರವರೆಗೆ ಪುನರ್‌ಪರಿಶೀಲನೆ ನಡೆಯಲಿದೆ. ಈ ಗಣತಿಯು ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಅದರಲ್ಲಿ ಸಂಗ್ರಹಿಸಲಾಗುವ ಮಾಹಿತಿಗಳು ಮುಂದಿನ 10 ವರ್ಷಗಳಲ್ಲಿ ರೂಪಿಸಲಾಗುವ ಯೋಜನೆಗಳ ದಿಕ್ಸೂಚಿಯಾಗಿರುತ್ತವೆ. ಆದ್ದರಿಂದ  ಜನತೆ ಗಣತಿದಾರರಿಗೆ ಸೂಕ್ತ ಮಾಹಿತಿ ನೀಡಿ ದೇಶದ ಮಹತ್ವದ ಕಾರ್ಯಕ್ಕೆ ಕೈಜೋಡಿಸಿ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry