ಹುಬ್ಬಳ್ಳಿ: `ಧಾರವಾಡ ಜಿಲ್ಲೆಯ ಔದ್ಯ ಮಿಕ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಜನಪ್ರತಿನಿಧಿಗಳು, ಅಧಿ ಕಾರಿಗಳು ಹಾಗೂ ಉದ್ಯಮಿಗಳನ್ನೊಳಗೊಂಡ ವೇದಿಕೆಯನ್ನು ಮುಂದಿನ ಒಂದೂವರೆ ತಿಂಗಳಲ್ಲಿ ಅಸ್ತಿತ್ವಕ್ಕೆ ತರ ಲಾಗುವುದು. ಈ ಬಗ್ಗೆ ಮುಖ್ಯ ಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುತ್ತೇನೆ~ ಎಂದು ಸಚಿವ ಜಗದೀಶ ಶೆಟ್ಟರ ಶನಿವಾರ ಇಲ್ಲಿ ನುಡಿದರು.

ದಿ.ಇಂಡಸ್ ಎಂಟರ್ಪ್ರೂನರ್ಸ್ (ಟಿಐಇ) ನಗರದಲ್ಲಿ ಶನಿವಾರ ಆಯೋ ಜಿಸಿದ್ದ `ಟೈಕಾನ್ ಹುಬ್ಬಳ್ಳಿ-2012~ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, `ಜಿಲ್ಲೆಗೆ ಹಲವು ಉದ್ಯಮಗಳು ಬಂದು ವಹಿವಾಟನ್ನು ಆರಂಭಿಸಬೇಕಾ ಗಿದೆ. ಅಂದಾಗ ಮಾತ್ರ ನಮ್ಮ ಯುವ ಕರಿಗೆ ಸೂಕ್ತ ಉದ್ಯೋಗಾವಕಾಶ ದೊರೆ ಯುವುದಲ್ಲದೇ, ಜಿಲ್ಲೆಯ ಪ್ರಗತಿಗೂ ಅನುಕೂಲವಾಗಲಿದೆ. ಈ ವೇದಿಕೆಯ ಮೂಲಕ ಜಿಲ್ಲೆಯಲ್ಲಿ ಉದ್ಯಮಗಳ ಸ್ಥಾಪನೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುವುದು~ ಎಂದು ಹೇಳಿದರು.

ಭೂಮಿ ಸಾಕಷ್ಟಿಲ್ಲ: ಜಿಲ್ಲೆಯಲ್ಲಿ ಉದ್ಯ ಮಗಳು ಬರಬೇಕೆಂದರೆ ಸಾಕಷ್ಟು ಭೂಮಿಯನ್ನೂ ಮೀಸಲಿರಿಸ ಬೇಕಾ ಗುತ್ತದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮ ಸಾಕಷ್ಟು ಬೆಳೆದಿರು ವುದರಿಂದ ಭೂಮಿಯ ಮೌಲ್ಯವೂ ಸಾಕಷ್ಟು ಏರಿದೆ. ಈ ಹಿನ್ನೆಲೆಯಲ್ಲಿ ಕೈಗಾ ರಿಕೆಗಳಿಗೆ ಬೇಕಾಗುವಷ್ಟು ಭೂಮಿಯನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಂಡರು.

ಜಿಲ್ಲಾಧಿಕಾರಿ ದರ್ಪಣ ಜೈನ್ ಈ ಮಾತಿಗೆ ವ್ಯತಿರಿಕ್ತವಾಗಿ ಮಾತನಾಡಿ, `ಕೈಗಾರಿಕೆಗಳಿಗೆ ಅಗತ್ಯವಿರುವಷ್ಟು ಭೂಮಿಯನ್ನು ನೀಡಲು ಭೂ ಬ್ಯಾಂಕ್ ಸ್ಥಾಪಿಸಲಾಗಿದ್ದು, ಈಗಾಗಲೇ ಭೂಸ್ವಾ ಧೀನ ಕಾರ್ಯ ಮಾಡಲಾಗುತ್ತಿದೆ~ ಎಂದರು.

`ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರ ಣೆಗಾಗಿ ಭೂ ಸ್ವಾಧೀನ ಮಾಡಲಾಗಿದ್ದು, ಮೂರು ವರ್ಷಗಳಲ್ಲಿ ಈ ಕಾರ್ಯ ಮುಕ್ತಾಯಗೊಳ್ಳಲಿದೆ. ಆ ಮೂಲಕ ಉದ್ಯಮಿಗಳ ಓಡಾಟಕ್ಕೆ ಅನುಕೂಲ ವಾಗಲು ದೊಡ್ಡ ವಿಮಾನಗಳೂ ಇಲ್ಲಿಗೆ ಬರಲಿವೆ. ನಗರದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಸುಧಾರಿಸ ಲಾಗಿದೆ~ ಎಂದರು.

ಪುಣೆಯ ಉದ್ಯಮಿ ಆನಂದ ಖಾಂಡೇ ಕರ್, `ಮೂಲಸೌಕರ್ಯ, ಉತ್ತಮ ಐಟಿ ನೀತಿ, ಮಾನವ ಸಂಪನ್ಮೂಲ ದಿಂದಾಗಿ ಪುಣೆಯಲ್ಲಿ ಯಶಸ್ವಿ ಐಟಿ ವಲ ಯವನ್ನು ನಿರ್ಮಿಸಲು ಸಾಧ್ಯವಾಯಿತು. ಈ ಪ್ರಕ್ರಿಯೆಯಲ್ಲಿ ಅಲ್ಲಿನ ಜನಪ್ರತಿನಿ ಧಿಗಳು, ವಾಣಿಜ್ಯೋದ್ಯಮ ಸಂಸ್ಥೆ, ಉದ್ಯಮಿಗಳು ಹಾಗೂ ಎಂಜಿನಿಯರಿಗ್ ಪದವೀಧರರನ್ನು ತೊಡಗಿಸಿಕೊಳ್ಳ ಲಾಯಿತು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.