ಸೋಮವಾರ, ಮೇ 17, 2021
21 °C

ಜನಲೋಕಪಾಲ ಜಾರಿ ಮಾಡಿ ಇಲ್ಲವೆ ಅಧಿಕಾರ ತ್ಯಜಿಸಿ: ಅಣ್ಣಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ):  ಸಾಮಾಜಿಕ ಹೋರಾಟಗಾರ ಅಣ್ಣಾ ಸಂಸತ್ತಿನ ಪ್ರಸಕ್ತ ಅಧಿವೇಶನದವರೆಗೂ ಜನಲೋಕಪಾಲ ಮಸೂದೆ ಅಂಗೀಕಾರಕ್ಕಾಗಿ ನಿರೀಕ್ಷಿಸುವುದಾಗಿ ಹೇಳಿದ್ದು, ಇದು ಸಾಧ್ಯವಾಗದಿದ್ದರೆ  2014ರ ಮಹಾಚುನಾವಣೆಯ ಹೊತ್ತಿಗೆ ಬಲಿಷ್ಠ ಲೋಕಪಾಲ ಕಾಯ್ದೆಗೆ ಒತ್ತಾಯಿಸಿ ತಾವು ಕೈಗೊಂಡಿರುವ ಹೋರಾಟವನ್ನು ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ.



 `ಜನಲೋಕಪಾಲ ಮಸೂದೆ ಅಂಗೀಕಾರಕ್ಕಾಗಿ ಮೇನಲ್ಲಿ ಕೊನೆಗೊಳ್ಳಲಿರುವ ಸಂಸತ್ ಅಧಿವೇಶನದವರೆಗೆ ಕಾಯುತ್ತೇವೆ.  ಇದನ್ನು ಸಾಧ್ಯವಾಗಿಸಲು ಸರ್ಕಾರ ವಿಫಲವಾದ ಪಕ್ಷದಲ್ಲಿ ಆಂದೋಲನ ನಡೆಸಲು ನಮಗೆ ಹೇಗಿದ್ದರೂ ಒಂದೂವರೆ ವರ್ಷದವರಗೆ (ಮುಂದಿನ ಸಾರ್ವತ್ರಿಕ ಚುನಾವಣೆ ವರೆಗೆ) ಕಾಲಾವಕಾಶ ಇದೆ~ ಎಂದು ಹೇಳಿದ್ದಾರೆ.



`ಮಹಾಚುನಾವಣೆ ಘೋಷಣೆಯಾಗುತ್ತಿದ್ದಂತೆ `ಲೋಕಪಾಲ ಜಾರಿ ಮಾಡಿ ಇಲ್ಲವೆ ಮನೆಗೆ ಹೋಗಿ~ ಘೋಷಣಾ ವಾಕ್ಯದೊಂದಿಗೆ ರಾಮಲೀಲಾ ಮೈದಾನದಲ್ಲಿ ಮತ್ತೊಮ್ಮೆ ಧರಣಿ ಕುಳಿತುಕೊಳ್ಳುತ್ತೇನೆ~ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.